ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ, ಉಬರ್ ವಿರುದ್ಧ ಚಾಲಕರ ಪ್ರತಿಭಟನೆ

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 22: ಏಕರೂಪ ಏರ್ಪೋರ್ಟ್ ದರ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಓಲಾ ಮತ್ತು ಉಬರ್ ಕಂಪೆನಿಗಳ ವಿರುದ್ಧ ಚಾಲಕರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

ಓಲಾ ಹಾಗೂ ಉಬರ್ ಸಂಸ್ಥೆಯಿಂದ ತಮಗೆ ಕಿರುಕುಳವಾಗುತ್ತಿದೆ. ಸರಕಾರ ಏರ್ಪೋರ್ಟ್ ಟಾಕ್ಸಿ ದರವನ್ನು ಏಕರೂಪಗೊಳಿಸಬೇಕು. ಸರ್ಕಾರ ನಿಗದಿಪಡಿಸಿರೋ ದರ ತಕ್ಷಣ ಜಾರಿಗೆ ಬರಬೇಕು. ಹಾಗೂ ಚಾಲಕರ ಮೇಲೆ ಅನಗತ್ಯ ದಂಡ ವಿಧಿಸೋದು ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.[ಹುಬ್ಬಳ್ಳಿ: ಓಲಾ, ಊಬರ್ ವಿರುದ್ಧ ಬೀದಿಗಿಳಿದ ಟ್ಯಾಕ್ಸಿ ಚಾಲಕರು]

 Protest against Ola and Uber in Town hall

ಒಲಾ ಮತ್ತು ಉಬರ್ ನ ಚಾಲಕ ಮತ್ತು ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಯುತ್ತಿದ್ದು, ಜೆಡಿಎಸ್ ಕಾರ್ಯಕರ್ತರೂ ಸಾಥ್ ನೀಡಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಕ್ಯಾಬ್ ಚಾಲಕರು ಭಾಗಿಯಾಗಿದ್ದು ಓಲಾ ಮತ್ತು ಉಬರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.[ತೀವ್ರ ನಷ್ಟ ಹಿನ್ನಲೆ: ಎರಡು ದಿನ ಓಲಾ, ಉಬರ್ ಟ್ಯಾಕ್ಸಿ ರಸ್ತೆಗಿಳಿಯಲ್ಲ]

ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭೇಟಿ ನೀಡಿ ಚಾಲಕರ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

English summary
Ola and Uber taxi drivers protest against company in front of Town hall, Bengaluru, over the lack of uniformity in Airport taxi fares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X