"ನಾನು ಒಗ್ಗಟ್ಟು ಮುರಿಯುವವರ ಎದೆ ಒದೆಯುವ ಭಾರತೀಯ"

Subscribe to Oneindia Kannada

ಬೆ೦ಗಳೂರು, ಫೆಬ್ರವರಿ, 18: ನವದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿನ ಗೊಂದಲ ಮತ್ತು ಗಲಾಟೆಗಳು ದೇಶಾದ್ಯಂತ ವಿವಾದದ ಕಿಡಿ ಹಬ್ಬಿಸಿದೆ. ದೇಶದ್ರೋಹದ ಚಟುವಟಿಕೆಗಳನ್ನು ವಿರೋಧಿಸುವ ಸಲವಾಗಿ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಫೆಬ್ರವರಿ 27 ಶನಿವಾರ ಹಮ್ಮಿಕೊಳ್ಳಲಾಗಿದೆ.

"ನಾವು ಭಾರತದೊಂದಿಗೆ ಇದ್ದೇವೆ,, ದೇಶದ್ರೋಹಿಗಳನ್ನು ವಿರೋಧಿಸುತ್ತೇವೆ" ಎಂಬ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲಾಗುತ್ತಿದೆ. "ನಾನೊಬ್ಬ ಸಾಮಾನ್ಯ ಭಾರತೀಯ, ಎಂದಿಗೂ ಬೀದಿಗಿಳಿಯಲಿಲ್ಲ, ವಿದ್ಯೆಗಾಗಿ, ಉದ್ಯೋಗಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ ಹೋರಾಡಲಿಲ್ಲ, ಕೋಟಿ ಕೋಟಿ ಹಣ ಲೂಟಿ ಹೊಡೆದರೂ ತಲೆ ಕೆಡಿಸಿಕೊಳ್ಳಲಿಲ್ಲ..[ನವದೆಹಲಿಯ ಜೆ ಎನ್ ಯು ವಿವಾದವೇನು?]
ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿ

Protest against anti Nationalism on 27 Feb, Bengaluru

ಆದರೆ,,
ನಾನೊಬ್ಬ ಭಾರತೀಯ, ಸಾಮಾನ್ಯ ಭಾರತೀಯ, ತಾಯ್ನಾಡಿನ ಒಗ್ಗಟ್ಟು ಮುರಿಯುವವರ ಎದೆ ಒದೆಯುವ ಭಾರತೀಯ, ಭಯೋತ್ಪಾದಕರ ಬೆಂಬಲಿಸುವವರ ಬೆನ್ನು ಮುರಿಯುವ ಭಾರತೀಯ, ನಿಮ್ಮೆಲ್ಲರೊಂದಿಗೆ ದೇಶಕ್ಕಾಗಿ ದ್ವನಿಯೆತ್ತುವ ಭಾರತೀಯ" ಈ ಘೋಷವಾಕ್ಯದೊಂದಿಗೆ ಮೆರವಣಿಗೆ ನಡೆಯಲಿದೆ.[ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜೆ ಎನ್ ಯು ಜಟಾಪಟಿ]

Protest against anti Nationalism on 27 Feb, Bengaluru

ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು ಮತ್ತು ಸಾಮಾನ್ಯ ಭಾರತೀಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9900900114, 8792485523 ನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From last few days, India are disturbed by the trend of some misguided young students shouting slogans against Nation, supporting enemy country and even worst, supporting terrorists who have waged war against India. An organization conducting a march on 27 Feb Saturday from Railway Station to Freedom park.
Please Wait while comments are loading...