ಮಸಾಜ್ ಪಾರ್ಲರಲ್ಲಿ ಹೈಟೆಕ್ ವೇಶ್ಯಾವಾಟಿಕೆ : 10 ಬಂಧನ, 4 ರಕ್ಷಣೆ

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್ . 06 : ಮಸಾಜ್ ಪಾರ್ಲಾರ್ ಹೆಸರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ವಿವಿಧ ರಾಜ್ಯದ 10 ಜನ ಕಿರಾತಕರನ್ನು ಕೇಂದ್ರ ಅಪರಾಧಿ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿ. ನಾಲ್ಕು ಯುವತಿಯನ್ನು ರಕ್ಷಿಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಸಾಜ್ ಪಾರ್ಲಾರ್ ನಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದ ಪೋರ್ಜಿತ್ ಅಲಿಯಾಸ್ ಸಂಜಿತ್, ಇಮಾನ್ಯುಯೆಲ್ ಅಲಿಯಾಸ್ ದಬರು, ಪವನ್ ಅಲಿಯಾಸ್ ಬಾಲಕೃಷ್ಣ, ಚಂದನ್ ಅಲಿಯಾಸ್ ಪಾಂಡುರಂಗ, ಸುರೇಶ್ ಅಲಿಯಾಸ್ ನಾರಾಯಣ, ವಿನೋದ್ ಅಲಿಯಾಸ್ ಕೃಷ್ಣಪ್ಪ, ಚಂದ್ರಮೋಹನ್ ಅಲಿಯಾಸ್ ಶಂಕರಪ್ಪ ಎಂಬುವರನ್ನು ಬಂಧಿಸಲಾಗಿದೆ.

CCb

ಆರೋಪಿಗಳಿಂದ 12 ಮೊಬೈಲ್ ಫೋನ್ಸ್, 15 ಸ್ಕೋರ್ ಕಂಪನಿಯ ಕಾಂಡೋಮ್ ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವೇಶ್ಯವಾಟಿಕೆಯಲ್ಲಿ ತೊಡಗಿಸಿದ್ದ ಪಶ್ಚಿಮ ಬಂಗಾಳದ ಇಬ್ಬರು ಹುಡುಗಿಯರು ಹಾಗೂ ಪಂಜಾಬ್ ಮತ್ತು ಮಹಾರಾಷ್ಟ್ರ ಮೂಲದ ಓರ್ವ ಹುಡುಗಿಯರನ್ನು ಪೊಲೀಸರು ರಕ್ಷಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೋಹನ್ ಎಂಬುವರು ಬೇರೆ-ಬೇರೆ ರಾಜ್ಯಗಳಿಂದ ಮಸಾಜ್ ಪಾರ್ಲರ್ ಗೆ ಹುಡುಗಿಯರನ್ನು ಕರೆತಂದು ವೇಶ್ಯವಾಟಿಕೆಯಲ್ಲಿ ತೊಡಗಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಪುಸಲಾಯಿಸಿ ಈ ಚಟುವಟಿಕೆಯಲ್ಲಿ ದೂಡಿದ್ದಾರೆಂದು ವಿಚಾರಣೆ ವೇಳೆಯಲ್ಲಿ ಯುವತಿಯರು ಆರೋಪಿಸಿದ್ದಾರೆ.

ಈ ದಂಧೆಯ ಕಿಂಗ್ ಪಿನ್ ಮೋಹನ್ ಹಾಗೂ ಬಿಲ್ಡಿಂಗ್ ಮಾಲೀಕ ನಾರಾಯಣ್ ತಲೆಮರಿಸಿಕೊಂಡಿದ್ದು ಅವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಆರೋಪಿಗಳ ಮೇಲೆ ಕಲಂ 1,2,3,4,5 ಅಡಿಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ten have been arrested for running prostitution racket in Banasawadi Extension in Bengaluru in a massage parlour. Four girls, who were lured with money and pushed into prostitution were rescued by CCB Police.
Please Wait while comments are loading...