ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮಸಾಜ್ ಪಾರ್ಲರಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಐವರ ಬಂಧನ, ಐವರ ರಕ್ಷಣೆ

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 20 : 'ಬಾಡಿ ಟೂ ಬಾಡಿ ಮಸಾಜ್', 'ಹ್ಯಾಪಿ ಎಂಡಿಂಗ್', 'ಸ್ಯಾಂಡ್‌ವಿಚ್' ಮುಂತಾದ ಹೆಸರುಗಳನ್ನು ಕೇಳಿದರೆ ಇದಾವುದೋ ಆಂಗ್ಲ ಭಾಷೆಯ ಚಿತ್ರಗಳ ಹೆಸರುಗಳೆಂದು ತಪ್ಪು ತಿಳಿಯಬೇಡಿ. ಇವು ವೇಶ್ಯಾವಾಟಿಕೆಗೆ ಬಳಸಲಾಗುತ್ತಿದ್ದ ಕೋಡ್ ವರ್ಡ್‌ಗಳು.

ಹೆಚ್ಚಾಗಿ ಶ್ರೀಮಂತರೇ ವಾಸವಾಗಿರುವ, ಸದಾಶಿವನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ, ಆರ್.ಎಂ.ವಿ. ಎಕ್ಸ್‌ಟೆನ್ಷನ್‌ನಲ್ಲಿ ಈ ಹೆಸರುಗಳನ್ನು ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ಈ ಜಾಲದಲ್ಲಿ ಸಿಲುಕಿದ್ದ ಥೈಲ್ಯಾಂಡ್ ದೇಶದ ಐವರು ಮಹಿಳೆಯರನ್ನು ರಕ್ಷಿಸಲಾಗಿದೆ.

ಚಂದ್ರಕಾಂತ್ (32), ಸಂಜೀವ್ (39), ಲೂಯಿಸ್ ರಂಜೀತ್ ಕುಮಾರ್ (39), ಅನೀಶ್ ಆರ್ (23) ಮತ್ತು ಅಭಿಷೇಕ್ ಆರ್ (23) ಬಂಧಿತರು. ಇವರೆಲ್ಲ ಬೆಂಗಳೂರಿನ ವಿವಿಧ ಬಡಾವಣೆಗಳ ನಿವಾಸಿಗಳಾಗಿದ್ದು, KIYORA WELLNESS & THAI SPA ಎಂಬ ಮಸಾಜ್ ಪಾರ್ಲರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. [ವೇಶ್ಯಾವಾಟಿಕೆಯಲ್ಲಿ ಕರ್ನಾಟಕ ಬೇರೆ ರಾಜ್ಯಕ್ಕಿಂತ ಕಮ್ಮಿಯಿಲ್ಲ]

Prostitution in massage parlour : Five arrested in Bengaluru

ಆರೋಪಿಗಳಿಂದ 4,100 ರು. ನಗದು, ಗಿರಾಕಿಗಳನ್ನು ಸಂಪರ್ಕಿಸಲು ಬಳಸುತ್ತಿದ್ದ 7 ಮೊಬೈಲ್ ಫೋನ್ ಹಾಗೂ 16 ನಿರೋಧ್ ಪಾಕೆಟ್‌ಗಳನ್ನು, ಒಂದು ಆಪಲ್ ಕಂಪನಿಯ ಬಿಳಿ ಬಣ್ಣದ ಐ-ಪ್ಯಾಡ್, 2 ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೆಷಿನ್‌ನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯಾದ ಲೂಯಿಸ್ ರಂಜೀತ್ ಕುಮಾರ್ ಮತ್ತು ಆತನ ಹೆಂಡತಿ ವೀಣಾ, ಆರ್‌ಎಂವಿ ಎಕ್ಸ್‌ಟೆನ್ಷನ್‌ನ 10ನೇ ಕ್ರಾಸ್, 15ನೇ ಮುಖ್ಯರಸ್ತೆಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದು, ಥೈಲ್ಯಾಂಡ್‌ನಿಂದ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸಕ್ಕೆಂದು ಕರೆತಂದು, ಹೆಚ್ಚಿನ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯ ದಂಧೆಯಲ್ಲಿ ತಳ್ಳುತ್ತಿದ್ದರು. [ಅರಬ್ಬರ ನಾಡಿನಲ್ಲಿ ಯಶಸ್ವೀ "ಆಪರೇಷನ್ ನೈಜೀರಿಯಾ"]

ಅಕ್ರಮ ಎಸಗಿ ಝಣಝಣ ಕಾಂಚಾಣ ಎಣಿಸುತ್ತಿದ್ದ ಬಂಧಿತರ ವಿರುದ್ಧ ಅನೈತಿಕ ಮಾನವ ಸಾಗಣೆ (ತಡೆ) ಕಾಯ್ದೆದ ಸೆಕ್ಷನ್ 3, 4 ಮತ್ತು 5, ಹಾಗು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370, 370(ಎ)(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹ್ಯಾಪಿ ಎಂಡಿಂಗ್ ವೇಶ್ಯಾವಾಟಿಕೆ ಇವರಿಗೆ ಬ್ಯಾಡ್ ಎಂಡಿಂಗ್ ಆಗಿದೆ. ಮಾಡಿದ್ದುಣ್ಣೋ ಮಾರಾಯ!

English summary
Five have been arrested for running prostitution racket in RMV Extension in Bengaluru in a massage parlour. Five Thailand girls, who were lured with money and pushed into prostitution were rescued by CCB Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X