ಮನೆಯಲ್ಲಿ ವೇಶ್ಯಾವಾಟಿಕೆ: ಮೂವರು ಆರೋಪಿಗಳು ಅಂದರ್

By: ಸಿಸಿಬಿ ಪತ್ರಿಕಾ ಪ್ರಕಟಣೆ
Subscribe to Oneindia Kannada

ಬೆಂಗಳೂರು, ಸೆ 28: ಮನೆಯಲ್ಲಿ ಹುಡುಗಿಯರನ್ನು ಇಟ್ಟುಕೊಂಡು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ನಗರದ ತ್ಯಾಗರಾಜ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರದ ತ್ಯಾಗರಾಜನಗರ ಪೊಲೀಸ್ ಠಾಣಾ ಸರಹದ್ದಿನ 2ನೇ ಮೈನ್, 2ನೇ ಕ್ರಾಸ್, ಸಿ.ಟಿ ಬೆಡ್ ಪ್ರದೇಶದ ಮನೆಯೊಂದರಲ್ಲಿ ಈ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಹಣ ಮತ್ತು ಮೊಬೈಲ್ ಫೋನ್ ಸಮೇತ ಪೊಲೀಸರು ಬಂಧಿಸಿದ್ದಾರೆ. (ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ, ಶಾಸಕರ ಪುತ್ರನಿಗೆ ಜಾಮೀನು)

Prostitution: Bengaluru Thyagaraja Nagara Police arrested 3 persons

ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ ಮಹಿಳೆ ಮತ್ತು ಮಾದಕದ್ರವ್ಯ ದಳ) ಪೊಲೀಸರು ಸೆ 27ರಂದು ಕಾರ್ಯಾಚರಣೆ ನಡೆಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ
ಸುಮಾ ಗೋವಿಂದರಾಜು (35 ವರ್ಷ), ವಿಶ್ವರಾಜ್ (62 ವರ್ಷ) ಮತ್ತು ಪೂರ್ಣಚಂದ್ರ (48 ವರ್ಷ) ಎನ್ನುವವರನ್ನು ಬಂಧಿಸಿದ್ದಾರೆ.

ನೊಂದ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ಪೊಲೀಸರು ರಕ್ಷಣೆ ಮಾಡಿದ್ದಾರೆ. ದಾಳಿಯ ಸಮಯದಲ್ಲಿ ಆರೋಪಿಗಳಿಂದ ಹದಿನಾರು ಸಾವಿರ ರೂಪಾಯಿ ನಗದು ಮತ್ತು ನಾಲ್ಕು ಮೊಬೈಲ್ ಫೋನ್‍ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ತ್ಯಾಗರಾಜನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ.114/2016, ಕಲಂ-3, 4, 5 & 7 ಐಟಿಪಿ ಆಕ್ಟ್ ಮತ್ತು 370 ಐಪಿಸಿ ರೀತ್ಯ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಕೇಂದ್ರ ಅಪರಾಧ ವಿಭಾಗ (ಸಿ.ಸಿ.ಬಿ. ಮಹಿಳೆ ಮತ್ತು ಮಾದಕದ್ರವ್ಯ ದಳ) ದ ಪೊಲೀಸರು ಜಂಟಿಯಾಗಿ ಕೈಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prostitution: Bengaluru Thyagaraja Nagara Police arrested 3 persons.
Please Wait while comments are loading...