ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್ ರಸ್ತೆ:ಉದ್ದೇಶಿತ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಮುಂದಕ್ಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 31: ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ಬಳ್ಳಾರಿ ರಸ್ತೆಯ ಸಾದಹಳ್ಳಿ ಗೇಟ್ ಬಳಿ ಉದ್ದೇಶಿತ ಶುಲ್ಕ ವಸೂಲಾತಿ ಸ್ವಲ್ಪ ದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇದೀಗ ಶನಿವಾರ ಮಧ್ಯರಾತ್ರಿಯಿಂದ ವಾರ್ಷಿಕ ಟೋಲ್ ದರ ಪರಿಷ್ಕರಣೆಯಂತೆ ಶುಲ್ಕ ಸ್ವಲ್ಪ ಹೆಚ್ಚಾಗಲಿದೆ. ಇತ್ತೀಚೆಗೆ ಏರ್ ಪೋರ್ಟ್ ಪರ್ಯಾಯ ಮಾರ್ಗ ಆರಂಭವಾದ ಬಳಿಕ ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಏರ್ ಪೋರ್ಟ್ ಗೆ ಮಾಮೂಲಿ ರಸ್ತೆಯಲ್ಲಿ ಹೋಗುವ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಹೋಗಲು ಪರ್ಯಾಯ ರಸ್ತೆ ಬಳಕೆ ಮಾಡುತ್ತಿದ್ದಾರೆ.

ಕೆಐಎಎಲ್ ಮಾರ್ಗದಲ್ಲಿ ಎರಡೂ ಬದಿ ಟೋಲ್ ಪಾವತಿ ಕೆಐಎಎಲ್ ಮಾರ್ಗದಲ್ಲಿ ಎರಡೂ ಬದಿ ಟೋಲ್ ಪಾವತಿ

ಇದಿರಿಂದ ಟೋಲ್ ನಿರ್ವಹಣೆ ಮಾಡುತ್ತಿರುವ ನವಯುಗ ಸಂಸ್ಥೆಯು ಆದಾಯ ಕಡಿಮೆಯಾಗಿದೆ. ಹೀಗಾಗಿ ಸಂಸ್ಥೆಗೆ ಆಗುತ್ತಿರುವ ನಷ್ಟ ತಡೆಯಲು ಏರ್ ಪೋರ್ಟ್ ಗೆ ಹೋಗುವ ಸಂದರ್ಭದಲ್ಲೂ ಶುಲ್ಕ ಮಾಡುವುದಾಗಿ ಪ್ರಕಟಿಸಿತ್ತು. ಇದಕ್ಕೆ ಸಾರ್ವಜನಿಕರು ಹಾಗೂ ಪ್ರಮುಖವಾಗಿ ಟ್ಯಾಕ್ಸಿ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಉದ್ದೇಶಿತ ಪ್ರಸ್ತಾಪವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

Proposed toll collection in KIA route postponed

ಪರ್ಯಾಯ ರಸ್ತೆಯಲ್ಲಿ 13ಸಾವಿರ ಟ್ಯಾಕ್ಸಿಗಳು: ನಾಗವಾರ ಬಳಿಯ ರಿಂಗ್ ರಸ್ತೆಯಿಂದ ಹೆಣ್ಣೂರು ಬಾಗಲೂರು ರಸ್ತೆ ಮಾರ್ಗವಾಗಿ ಪರ್ಯಾಯ ರಸ್ತೆ ಉದ್ಘಾಟನೆಗೊಂಡ ಬಳಿಕ ಸುಂಆರು 13 ಸಾವಿರಕ್ಕೂ ಹೆಚ್ಚಿನ ಟ್ಯಾಕ್ಸಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ ಎಂದು ಅಂದಾಜು ಮಾಡಲಾಗಿದೆ.

English summary
Navayuga private limited has postponed its proposal of toll collection from April 1, in both ways of Kempegowda international airport owing to strong opposition by the general public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X