ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮತ್ತೆ ಗದ್ದಲ, ಕೋಲಾಹಲ

Posted By:
Subscribe to Oneindia Kannada

ಬೆಂಗಳೂರು, ಮೇ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮತ್ತೆ ಕೋಲಾಹಲವೆದ್ದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ನಡೆಯುತ್ತಿದ್ದು, ಆಸ್ತಿ ತೆರಿಗೆ ಹೆಚ್ಚಳದ ಹಗ್ಗ ಜಗ್ಗಾಟ ಗುರುವಾರವೂ ಮುಂದುವರೆದಿದೆ.

ಗುರುವಾರ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಸದಸ್ಯರು ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಸಭೆಯಲ್ಲಿ ಗದ್ದಲ ಆರಂಭವಾಯಿತು. ಮೇಯರ್ ಬಿ.ಎಸ್.ಮಂಜುನಾಥ ರೆಡ್ಡಿ ಅವರ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರು. [ತಳ್ಳಾಟ-ನೂಕಾಟ: ರಣಾಂಗಣವಾದ ಬಿಬಿಎಂಪಿ ಕೌನ್ಸಿಲ್ ಸಭೆ]

bbmp

ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ಬಿಜೆಪಿಯವರ ಜೊತೆ ಮಾತಿನ ಚಕಮಕಿ ನಡೆಸಿದರು. ಇದರಿಂದಾಗಿ ಕೌನ್ಸಿಲ್ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ವಾಕ್ಸಮರ ಮುಂದುವರೆದಿದೆ. [ಆಸ್ತಿ ತೆರಿಗೆ ಹೆಚ್ಚಳ, ಬೆಂಗಳೂರಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ]

ಆಸ್ತಿ ತೆರಿಗೆ ಹೆಚ್ಚಳ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದು, ಷರಿಷ್ಕೃತ ತೆರಿಗೆ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ವಸತಿ ಪ್ರದೇಶಗಳಿಗೆ ಶೇ 20 ಮತ್ತು ವಸತಿಯೇತರ ಪ್ರದೇಶಗಳಿಗೆ ಶೇ 25ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. [ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ : ಲೇಟೆಸ್ಟ್ ಸುದ್ದಿ ಏನಿದೆ?]

ಅಮಾನತು ರದ್ದು : ಮೇ ಮೊದಲ ವಾರವೂ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಕೌನ್ಸಿಲ್ ಸಭೆಯಲ್ಲಿ ಗದ್ದಲ ನಡೆದಿತ್ತು. ಈ ಸಮಯದಲ್ಲಿ ಕೌನ್ಸಿಲ್ ಕಲಾಪಕ್ಕೆ ಅಡ್ಡಿ ಪಡಿಸಿದ್ದ ವಿರೋಧ ಪಕ್ಷದ ಪದ್ಮನಾಭ ರೆಡ್ಡಿ, ಉಮೇಶ್ ಶೆಟ್ಟಿ, ಎಂ. ನಾಗರಾಜು, ರಮೇಶ್ ಕುಮಾರ್ ಸೇರಿದಂತೆ ನಾಲ್ವರು ಸದಸ್ಯರನ್ನು ಒಂದು ತಿಂಗಳ ಕಾಲ ಮೇಯರ್ ಅಮಾನತುಗೊಳಿಸಿದ್ದರು. ಇಂದು ಅಮಾನತು ಆದೇಶವನ್ನು ಮೇಯರ್ ವಾಪಸ್ ಪಡೆದರು.

ಆಹೋರಾತ್ರಿ ಧರಣಿ : ಬಿಬಿಎಂಪಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಕೈಬಿಡಬೇಕು, ಆನ್‌ಲೈನ್ ವ್ಯವಸ್ಥೆಯಲ್ಲಿ ದೋಷಗಳನ್ನು ಪರಿಹರಿಸಬೇಕು, ಶೇ 5ರಷ್ಟು ರಿಯಾಯಿತಿ ಅವಧಿಯನ್ನು ಜೂನ್ 30ರ ತನಕ ವಿಸ್ತರಣೆ ಮಾಡುಬೇಕು ಎಂದು ಒತ್ತಾಯಿಸಿ ಕಳೆದ ವಾರ ಬಿಜೆಪಿ ಬಿಬಿಎಂಪಿ ಸಭಾಂಗಣದಲ್ಲಿ ಆಹೋರಾತ್ರಿ ಧರಣಿ ನಡೆಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP corporators protesting against Manjunath Reddy mayor of the Bruhat Bengaluru Mahanagara Palike over the issue of hike in property tax.
Please Wait while comments are loading...