ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿ

By Nayana
|
Google Oneindia Kannada News

Recommended Video

ಬಿಬಿಎಂಪಿ ಆಸ್ತಿ ತೆರಿಗೆಯಲ್ಲಿ ವಂಚನೆ ಮಾಡಿತ್ತಾ ಎಚ್ ಡಿ ದೇವೇಗೌಡ್ರ ಕುಟುಂಬ | Oneindia Kannada

ಬೆಂಗಳೂರು, ಜು.4: ಸ್ವಯಂ ಘೋಷಿತ ಆಸ್ತಿ ತೆರಿಗೆ ಕಾಯ್ದೆಯಡಿ ಆಸ್ತಿ ಘೋಷಿಸುವಾಗ ಆಸ್ತಿ ಮಾಲೀಕರು ಸುಳ್ಳು ಮಾಹಿತಿ ನೀಡಿದ ನೂರಾರು ಕೋಟಿ ರೂಪಾಯಿಗಳ ಆಸ್ತಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ಸದಸ್ಯರೂ ಸೇರಿದಂತೆ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಕಂಪನಿಗಳು ವಂಚನೆ ಮಾಡಿರುವವರ ಪಟ್ಟಿಯಲ್ಲಿ ಇರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಖಾಸಗಿಗಿಲ್ಲ ಆಸಕ್ತಿ: ಬಿಬಿಎಂಪಿಯಿಂದ ತ್ಯಾಜ್ಯ ವಿದ್ಯುತ್‌ ಘಟಕ ನಿರ್ಮಾಣಖಾಸಗಿಗಿಲ್ಲ ಆಸಕ್ತಿ: ಬಿಬಿಎಂಪಿಯಿಂದ ತ್ಯಾಜ್ಯ ವಿದ್ಯುತ್‌ ಘಟಕ ನಿರ್ಮಾಣ

ಬಿಬಿಎಂಪಿ ವ್ಯಾಪ್ತಿಯ 63 ಕಟ್ಟಡಗಳ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಸುಳ್ಳು ಆಸ್ತಿ ಘೋಷಣೆ ಮಾಡಿಕೊಂಡು ಹಲವು ವರ್ಷಗಳಿಂದ ಬರೋಬ್ಬರಿ ರೂ.559 ಕೋಟಿ ನಷ್ಟು ಆಸ್ತಿ ತೆರಿಗೆ ವಂಚನೆ ಮಾಡಿದ್ದಾರೆ.

Property tax evasion found in BBMP worth Rs.559 crores

ಪಾಲಿಕೆ ವ್ಯಾಪ್ತಿಯಲ್ಲಿ 77ಕ್ಕೂ ಅಧಿಕ ಟೆಕ್ ಪಾರ್ಕ್‌ಗಳು, 51 ಮಾಲ್‌ಗಳು, 4,834 ಕೈಗಾರಿಕೆಗಳು ಮತ್ತು ಸಾವಿರಾರು ವಸತಿ ಸಂಕೀರ್ಣಗಳಿವೆ. ಆಸ್ತಿಗಳ ಮಾಲೀಕರು 2008ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ (ಎಸ್‌ಎಎಸ್) ತಮ್ಮ ಕಟ್ಟಡಗಳ ಅಳತೆಯನ್ನು ತಪ್ಪಾಗಿ ಘೋಷಿಸಿಕೊಂಡು ತೆರಿಗೆ ವಂಚಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಮೊದಲ ಹಂತದಲ್ಲಿ ಮಾಲ್ ಗಳು ಹಾಗೂ ಟೆಕ್ ಪಾರ್ಕ್ ಕಟ್ಟಡಗಳ ನಿಖರ ವಿಸ್ತೀರ್ಣ ಪತ್ತೆಗಾಗಿ ಟೋಟಲ್ ಸ್ಟೇಷನ್ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.

ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಬೆಳ್ಳಂದೂರು ಸಮೀಪದಲ್ಲಿರುವ ಆರ್'ಎಂಝಡ್ ಸೆಂಟೆನೇಲ್ ಕಟ್ಟಡದ ಸುಳ್ಳು ಆಸ್ತಿ ಘೋಷಣೆ ಮಾಡಿಕೊಂಡು ಕಳೆದ 10 ವರ್ಷದಲ್ಲಿ ರೂ.3.17 ಕೋಟಿ ಬಿಬಿಎಂಪಿಗೆ ಆಸ್ತಿ ತೆರಿಗೆ ವಂಚನೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

ಆರ್ ಎಂಝಡ್ ಸೆಂಟೆನೇಲ್ ಕಟ್ಟಡ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಸದಸ್ಯರಿಗೆ ಸೇರಿದ್ದಾಗಿದೆ. ದೇವೇಗೌಡರ ಸೊಸೆಯಂದಿರಾದ ಹೆಚ್.ಕವಿತಾ ರೂ.55, 21, 479, ಭವಾನಿ ರೇವಣ್ಣ ರೂ.41,79,440, ಅನಿತಾ ಕುಮಾರಸ್ವಾಮಿ ರೂ.54,85,521, ಮಕ್ಕಳಾದ ಹೆಚ್.ಡಿ.ಶೈಲಾ ರೂ.55,21,479, ಹೆಚ್.ಡಿ.ಅನುಸೂಯ ರೂ.55,21,479, ಪುತ್ರ ಹೆಚ್.ಡಿ. ರಮೇಶ್ ರೂ.55,21,389 ಸುಳ್ಳು ಆಸ್ತಿ ಘೋಷಣೆಯಿಂದ ಆಸ್ತಿ ತೆರಿಗೆ ವಂಚನೆ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.

English summary
Bruhat Bengaluru Mahanagara Palike (BBMP)'s total station survey has revealed that 63 buildings defaulted on property tax, amount is close to Rs 559 crore. Former PM HD Deve Gowda's family also mentioned as defaulters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X