ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 10 ಸಂಸ್ಥೆಯಿಂದ 231 ಕೋಟಿ ರು ವಸೂಲಿಗೆ ನೋಟಿಸ್

By Mahesh
|
Google Oneindia Kannada News

ಬೆಂಗಳೂರು, ಜೂನ್ 26: ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್‌) ಘೋಷಣೆಯ ಸಂದರ್ಭದಲ್ಲಿ ಸುಳ್ಳು ಲೆಕ್ಕ ಕೊಟ್ಟು ತೆರಿಗೆ ವಂಚಿಸಲು ಯತ್ನಿಸಿದ್ದ 10 ಕಂಪನಿಗಳಿಂದ ಇನ್ನೂರಕ್ಕೂ ಅಧಿಕ ಕೋಟಿ ರು ಬಾಕಿ ವಸೂಲಿ ಮಾಡಲಾಗುತ್ತದೆ. ನಗರದ 10 ಪ್ರತಿಷ್ಠಿತ ಕಂಪನಿಗಳು ತಮ್ಮ ಕಟ್ಟಡದ ವಿಸ್ತೀರ್ಣದ ಲೆಕ್ಕ ತಪ್ಪಾಗಿ ಘೋಷಿಸಿಕೊಂಡಿದ್ದಕ್ಕೆ ದಂಡ ಹಾಗೂ ಬಡ್ಡಿ ಸಮೇತ ಬಾಕಿ ವಸೂಲಿ ಮಾಡಲು ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಶಿವರಾಜು ಹೇಳಿದ್ದಾರೆ.

ಇತ್ತೀಚೆಗೆ ಮಾನ್ಯತಾ ಟೆಕ್ ಪಾರ್ಕ್ ಮೇಲೆ ದಾಳಿ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು, ಸಂಸ್ಥೆಯ ಆಡಳಿತ ಕಚೇರಿ ಬಂದ್ ಮಾಡಿ, ಆಸ್ತಿ ಜಪ್ತಿ ಮಾಡಿದ್ದನ್ನು ಸ್ಮರಿಸಬಹುದು.

10 ಕಂಪನಿಗಳಿಂದ ಒಟ್ಟು 231.66 ಕೋಟಿ ರು ವಸೂಲಿ ಮಾಡಲು ನೋಟಿಸ್‌ ನೀಡಲಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಥೆಮಾಟಿಕ್ಸ್‌ ಇನ್ಫೋಟೆಕ್‌ ಸಂಸ್ಥೆ ಹಾಗೂ ಅಲ್ಕಾನ್‌ ಸಂಸ್ಥೆಗಳ ಮೂಲಕ 10 ಕಟ್ಟಡಗಳ ಸಂಪೂರ್ಣ ಸಮೀಕ್ಷೆ ನಡೆಸಲಾಯಿತು. ವಾಸದ ಪ್ರಮಾಣಪತ್ರ (ಒ.ಸಿ.) ಪಡೆದ ದಿನದಿಂದ ಇಲ್ಲಿಯ ವರೆಗಿನ ವ್ಯತ್ಯಾಸದ ಮೊತ್ತ, ಬಡ್ಡಿಯನ್ನು ಮಾಲೀಕರಿಂದ ವಸೂಲಿ ಮಾಡುತ್ತೇವೆ' ಎಂದರು.

'ಕೆಎಂಸಿ ಕಾಯ್ದೆಯ ಸೆಕ್ಷನ್‌ 14, ನಿಯಮ 26 ಹಾಗೂ 27ರ ಪ್ರಕಾರ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Property tax defaulters named by BBMP

ಆಸ್ತಿ ತೆರಿಗೆ ಸಂಗ್ರಹ ಗುರಿ: ಶೇ 5ರಷ್ಟು ತೆರಿಗೆ ಪಾವತಿಯಲ್ಲಿ ರಿಯಾಯಿತಿ ಅವಧಿ ಜೂನ್ 30ಕ್ಕೆ ಮುಗಿಯಲಿದೆ. ಪ್ರಸಕ್ತ ಸಾಲಿನಲ್ಲಿ ಕಂದಾಯ ವಿಭಾಗದಿಂದ 2,300 ಕೋಟಿ ರು ಆಸ್ತಿ ತೆರಿಗೆ ಸೇರಿದಂತೆ 3,100 ಕೋಟಿ ರು ಆದಾಯ ಸಂಗ್ರಹಿಸುವ ಗುರಿ ಇದೆ.

ದಂಡ ತೆರಬೇಕಾಗಿರುವ ಪ್ರತಿಷ್ಠಿತ ಕಂಪನಿಗಳು (ಬಡ್ಡಿ ಹಾಗೂ ದಂಡ ಸೇರಿ ಕೋಟಿ ರು ಗಳಲ್ಲಿ)
* ಬಾಗಮನೆ ಟೆಕ್ ಪಾರ್ಕ್- 91.67
* ಚೆತನ್ಯ ಪ್ರಾಪರ್ಟೀಸ್ - 41.61
* ಜೆಇ ಇಂಡಿಯಾ- 37.32
* ಸಲಾರ್ ಪುರಿಯಾ- 18.06
* ಒರಿಯಾನ್ ಮಾಲ್ -15.38
* ನಿಟ್ಟೆ ಮೀನಾಕ್ಷಿ-13.91
*ಲೀಲಾ ಪ್ಯಾಲೇಸ್ - 5.66

* ಫೆಡರಲ್ ಮೊಗಲ್- 3.60
* ಅಸೆಂಚರ್- 2.40
* ಗೋಲ್ಡನ್ ಹಿಲ್ ಸ್ಕ್ವೇರ್ -2.05

English summary
The names of defaulters of property tax was revealed by the BBMP taxation committee chairman M. Shivraju here on Saturday. Big companies, five-star hotels and swanky shopping malls all came under the purview
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X