ಬುಧವಾರ ರಾತ್ರಿ ತನಕ ನಿಷೇಧಾಜ್ಞೆ ಮುಂದುವರಿಕೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 13 : ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆಯನ್ನು ಬುಧವಾರ ರಾತ್ರಿ ತನಕ ವಿಸ್ತರಣೆ ಮಾಡಲಾಗಿದೆ. 16 ಠಾಣಾ ವ್ಯಾಪ್ತಿಯಲ್ಲಿರುವ ಕರ್ಪ್ಯೂವನ್ನು ಮುಂದುವರೆಸುವ ಬಗ್ಗೆ ಸಂಜೆ ವೇಳೆಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಸೋಮವಾರ ಸಂಜೆ 17 ಗಂಟೆಗಳ ಅವಧಿಗೆ ಸಿಆರ್‌ಪಿಸಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು. ಇದನ್ನು ಬುಧವಾರ ರಾತ್ರಿ ತನಕ ವಿಸ್ತರಣೆ ಮಾಡಲಾಗಿದೆ.[ಬೆಂಗಳೂರಿನಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ]

bengaluru police

ಸೋಮವಾರ ಮಧ್ಯರಾತ್ರಿಯಿಂದ ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂವನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ಪ್ಯೂ ಮುಂದುವರೆಸುವ ಬಗ್ಗೆ ಇಂದು ಸಂಜೆ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ.[ಚಿತ್ರಗಳು : ಹಿಂಸಾಚಾರಕ್ಕೆ ತಿರುಗಿದ ಕಾವೇರಿ ಪ್ರತಿಭಟನೆ]

ಎಲ್ಲಿ ಕರ್ಪ್ಯೂ ಜಾರಿಯಲ್ಲಿದೆ? : ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗಡಿ ರೋಡ್, ರಾಜಾಜಿನಗರ, ರಾಜರಾಜೇಶ್ವರಿ ನಗರ, ಕೆಪಿ ಅಗ್ರಹಾರ, ಚಂದ್ರಾಲೇಔಟ್, ಯಶವಂತಪುರ, ಮಹಾಲಕ್ಷೀ ಲೇಔಟ್, ಪೀಣ್ಯ, ಆರ್ ಎಂಸಿ ಯಾರ್ಡ್. ನಂದಿನಿ ಲೇಔಟ್, ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಯಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prohibitory orders will be in place till Wednesday night in Bengaluru city. A decision on whether to extend curfew tomorrow will be taken later today.
Please Wait while comments are loading...