ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೇಶ್ಯಾವಾಟಿಕೆ ಪ್ರಚೋದನೆಗೆ ಫೇಸ್ ಬುಕ್ ಪ್ರೊಫೈಲ್ ಫೋಟೊ ದುರ್ಬಳಕೆ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4: ಫೇಸ್‌ಬುಕ್‌ ನಲ್ಲಿ ಹೆಣ್ಣುಮಕ್ಕಳು ಫೋಟೊ ಹಾಕುವ ಮುನ್ನ ಎಚ್ಚರವಿರಲಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೊ ದುರ್ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ.ವೇಶ್ಯಾವಾಟಿಕೆ ಪ್ರಚೋದನೆಗೆ ಫೋಟೊ ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಹಿಳೆಯೊಬ್ಬರ ಫೋಟೊವ್ನು ನಕಲಿ ಖಾತೆಗೆ ಹಾಕಿ ವೇಶ್ಯಾವಾಟಿಕೆಗೆ ಆಹ್ವಾನ ನೀಡುವಂತಹ ಪೋಸ್ಟ್ ಮಾಡಲಾಗಿದೆ. ಈ ಕುರಿತಯ 36ವರ್ಷದ ಮಹಿಳೆಯೊಬ್ಬರು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ಆಕೆಗೆ ಮೂರು ದಿನಗಳ ಹಿಂದೆ ಮಾಡಿದ ಸಂಬಂಧಿಕರೊಬ್ಬರು ಅವರ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯ ಪ್ರೊಫೈಲ್ ಪಿಕ್ ನಲ್ಲಿ ನಿಮ್ಮ ಫೋಟೊ ಇದೆ ಅದರಲ್ಲಿ ಅಸಭ್ಯ ಸಂದೇಶಗಳಿವೆ ಎಂದು ತಿಳಿಸಿದ್ದರು

Profile picture of fb misused: Police investigation on

ಬಳಿಕ ಅವರು ಫೇಸ್‌ಬುಕ್ ಅಕೌಂಟ್ ವೀಕ್ಷಿಸಿದಾಗ ಅವರಿಗೆ ಈ ವಿಚಾರ ತಿಳಿಸಿದೆ ತಕ್ಷಣ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ನಕಲಿ ಖಾತೆ ಸೃಷ್ಟಿಸಿ ಪ್ರೊಫೈಲ್ ಪಿಕ್ಚರ್ ಕದ್ದು ಪೋಸ್ಟ್‌ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ. ಯಾವುದೋ ಮಹಿಳೆಯ ಫೋಟೊವನ್ನು ಹಾಕಿಕೊಂಡು ಅಪರಿಚಿತ ಮಹಿಳೆಯರಿಗೆ ಫ್ರೆಂಟ್ ರಿಕ್ವೆಸ್ಟ್ ಕಳುಹಿಸಿ ಅವರೊಂದಿಗೆ ಚಾಟ್ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪಿ ಚಂದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ

ಆತನ ವಿರುದ್ಧ ಕ್ರಮ ಕೈಗೊಳ್ಳುವುದುರ ಜತೆಗೆ ನಕಲಿ ಅಕೌಂಟ್ ಬ್ಲಾಕ್ ಮಾಡಿಸಬೇಕು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

English summary
A lady has filed facebookcomplaint with HSR layout police station against misused picture, alleging that website misused her face book profile picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X