ನರ್ತಕಿ, ಕಲಾವಿದೆಯಾಗಿ ಜಯರಾಮ್ ಜಯಲಲಿತಾ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06: ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರದ್ದು ಕಲರ್ ಫುಲ್ ಬದುಕು. ನೃತ್ಯ ಕಲಾವಿದೆಯಾಗಿ ನಂತರ ಸಿನಿಮಾ ತಾರೆಯಾಗಿ, ಜನಪ್ರಿಯ ರಾಜಕಾರಣಿಯಾಗಿ ಬೆಳೆದವರು.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಕರ್ನಾಟಕದ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಹಾಗೂ ವೇದವಲ್ಲಿ ದಂಪತಿಯ ಪುತ್ರಿಯಾಗಿ ಜನಿಸಿದ ಕೋಮಲವಲ್ಲಿ ಮುಂದೆ ತಮಿಳುನಾಡಿನ ಜಯಲಲಿತಾ ಆಗಿ ಬೆಳೆದಿದ್ದು ದೊಡ್ಡ ಸಾಧನೆ. ಬಳುಕುವ ಬಳ್ಳಿಯಂತ್ತಿದ್ದ ಜಯಲಲಿತಾ ಅವರ ಸ್ಥೂಲ ಕಾಯ ಅವರಿಗೆ ಪರಂಪರಾಗತವಾಗಿ ಬಂದ ಬಳುವಳಿ.[ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಬಂಧ]

ಜಯಾ ಹುಟ್ಟಿದ್ದು ಎಲ್ಲಿ?: ಕರ್ನಾಟಕದ ಮಂಡ್ಯದ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಎಂಬುದು ಒಂದು ವಾದವಾದರೆ, ಇಲ್ಲ ಮೈಸೂರಿನ ದೊಡ್ಡಾಸ್ಪತ್ರೆ(ಕೆಆರ್ ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಯಲ್ಲೇ 1948ರ ಫೆಬ್ರವರಿ 05ರಂದು ಜನಿಸಿದರು ಎಂದು ಇನ್ನೊಂದು ವಾದವಿದೆ.

Profile: Jayaram Jayalalitha a classical dancer Dancer turned Actress

ಮೈಸೂರು ರಾಜಮನೆತನದ ಜತೆಗೆ ಜಯರಾಮ್ ಅವರ ಕುಟುಂಬ ನಿಕಟ ಸಂಪರ್ಕ ಹೊಂದಿತ್ತು. ಲಕ್ಷ್ಮಿಪುರಂ ಹಾಗೂ ಸರಸ್ವತಿಪುರಂನಲ್ಲಿ ಜಯಾ ಅವರ ನಿವಾಸ ಇರುವುದು ಹಾಗೂ ಮೈಸೂರಿನ ಜತೆಗಿನ ಅವಿನಾಭಾವ ಸಂಬಂಧದ ಬಗ್ಗೆ ಇಲ್ಲಿ ಓದಿ

ಜಯರಾಮ್ ಅವರು ಕಾಲವಾದ ನಂತರ ತಾಯಿ ವೇದವಲ್ಲಿ (ಸಿನಿಮಾಗಾಗಿ ಇಟ್ಟುಕೊಟ್ಟ ಹೆಸರು ಸಂಧ್ಯಾ) ಅವರು ಬೆಂಗಳೂರಿಗೆ ಜೀವನೋಪಾಯಕ್ಕಾಗಿ ವಲಸೆ ಬರಬೇಕಾಯಿತು. ಅವರ ಸೋದರಿ ವಿದ್ಯಾ (ಅಂಬುಜಾ) ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆಗಿನ ನೃತ್ಯ ತಾರೆಯರಾದ ಲಲಿತಾ, ಪದ್ಮಿನಿ, ರಾಗಿನಿ ಅವರ ನಿಕಟಸ್ನೇಹ ಗಳಿಸಿದ್ದರು. ನಂತರ ಜಯಾ ಕೂಡಾ ಇದೇ ಹಾದಿ ಹಿಡಿದರು.

ಮೈಸೂರಿನಲ್ಲಿ ಭರತನಾಟ್ಯ ಕಾರ್ಯಕ್ರಮ: 19-03-1967ರ ಭಾನುವಾರ ಸಂಜೆ 6.30ಕ್ಕೆ ಕ್ರಾಫರ್ಡ್ ಹಾಲ್‌ನಲ್ಲಿ ಜಯಲಲಿತಾ ಅವರ ಅಮೋಘ ನೃತ್ಯ ಪ್ರದರ್ಶನ ಕಾರ್ಯಕ್ರಮ ನೀಡಿದ್ದರು. ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಜಯಾ ಅವರು ನರ್ತಿಸಿದ್ದರು. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದ ರಾಮಚಂದ್ರಯ್ಯನವರು ಈಗ ಶ್ರೀರಂಗಪಟ್ಟಣ ಸಮೀಪದ ನಗುವನಹಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು. ಆಗಲೇ ಡಾನ್ಸ್ ತರಗತಿಗೆ ಜಯಲಲಿತಾರನ್ನು ಸೇರಿಸಿದ್ದರು. ತನ್ನ 14ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. ಬಾಲನಟಿಯಾಗಿ ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಅವರು 15 ವರ್ಷ ವಯಸ್ಸಿಗೆ ನಾಯಕಿಯಾದರು. 1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯವಾಗಿ ಅವರ ಚಿತ್ರಗಳ ನಾಯಕಿ ಎರಡು ದಶಕಗಳ ಕಾಲ ಮೆರೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jayaram Jayalalitha is one of India's most colourful personality who was classical dancer turned Actress and then a successful politician. has served as the chief minister of south India's Tamil Nadu state on numerous occasions.
Please Wait while comments are loading...