ಲಂಡನ್ ವೈದ್ಯ ಪ್ರೊಫೆಸರ್ ರಿಚರ್ಡ್ ಬೇಲ್ ಪತ್ರ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 5: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾಗೆ ಹೃದಯ ಸ್ಥಂಭನವಾದ ನಂತರ ಲಂಡನ್ ಮೂಲದ ವೈದ್ಯ ಪ್ರೊಫೆಸರ್ ರಿಚರ್ಡ್ ಬೇಲ್ ಪತ್ರವೊಂದನ್ನು ಬರೆದಿದ್ದಾರೆ. ಅದರ ಪೂರ್ಣ ಪಾಠವನ್ನು ಇಲ್ಲಿ ನೀಡುತ್ತಿದ್ದೇವೆ. "ಭಾನುವಾರ ಸಂಜೆ ಮುಖ್ಯಮಂತ್ರಿ ಮೇಡಂಗೆ ಹೃದಯ ಸ್ಥಂಭನವಾದದ್ದನ್ನು ಕೇಳಿ ನನಗೆ ತುಂಬ ದುಃಖವಾಯಿತು.

"ಆಕೆಯ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಅಪೋಲೋ ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಎಲ್ಲರೂ ಇಷ್ಟಪಡುವಂತೆಯೆ, ಎಲ್ಲರಿಗೂ ಆಗುವಂತೆಯೇ ಆಕೆ ಚೇತರಿಸಿಕೊಳ್ಳುತ್ತಿರುವ ಸುದ್ದಿಯಿಂದ ಉತ್ತೇಜಿತನಾಗುತ್ತಿದ್ದೆ. ದುರದೃಷ್ಟ ಅಂದರೆ, ಆಕೆಯಲ್ಲಿ ಚೇತರಿಕೆ ಕಂಡುಬಂದ ನಂತರ ಕೂಡ ಆರೋಗ್ಯ ಸ್ಥಿತಿ ಇನ್ನಷ್ಟು ಸಮಸ್ಯೆಗೆ ಸಿಲುಕಿಕೊಂಡಿತು.[ಜಯಾ LIVE : ಮತ್ತೊಂದು ಶಸ್ತ್ರಚಿಕಿತ್ಸೆ ಬಲು ಕಷ್ಟ ಅಂತಿದ್ದಾರೆ ವೈದ್ಯರು]

Richard letter

"ಈಗಿನ ಪರಿಸ್ಥಿತಿ ತೀರಾ ದುಃಖದಾಯಕ. ಆದರೆ ನನಗೆ ಖಾತ್ರಿ ಇದೆ, ಆಕೆಯನ್ನು ಇಂಥ ಆಘಾತಕಾರಿ ಸ್ಥಿತಿಯಿಂದ ಆಚೆ ಕರೆತರುವುದಕ್ಕೆ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾಡಲಾಗುತ್ತದೆ. ತೀರಾ ಕಾಳಜಿಯುಳ್ಳ-ಉತ್ತಮ ವೈದ್ಯರ ತಂಡವೊಂದು ಆಕೆಯ ಕಾಳಜಿ ಮಾಡುತ್ತಿದೆ. ಈಗ ಜೀವ ರಕ್ಷಕ ಯಂತ್ರದ ಸಹಾಯದಲ್ಲಿ ಜಯಲಲಿತಾ ಇದ್ದಾರೆ.

"ಇದು ಸದ್ಯಕ್ಕೆ ಸಿಗಬಹುದಾದ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಜಯಲಲಿತಾ ಅವರಿಗೆ ಸಿಗುತ್ತಿರುವುದು ಅತ್ಯುತ್ತಮ ಚಿಕಿತ್ಸೆ. ಇಂಥ ಸನ್ನಿವೇಶದಲ್ಲಿ ಜಗತ್ತಿನ ಅತ್ಯುತ್ತಮ ಆರೋಗ್ಯ ಕೇಂದ್ರಗಳು ನೀಡುವ ಚಿಕಿತ್ಸಾ ವಿಧಾನವೇ ಇದು. ಇಂಥ ತಂತ್ರಜ್ಞಾನ ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿದೆ.[ಜಯಾ ಅನಾರೋಗ್ಯ: ಏಮ್ಸ್ ತಜ್ಞ ವೈದ್ಯರು ಭಾಗಿ, 5ಕ್ಕೆ ಪತ್ರಿಕಾ ಪ್ರಕಟಣೆ]

"ಅತ್ಯುತ್ತಮ ಕೇಂದ್ರದಲ್ಲಿ, ಸಾರ್ವಕಾಲಿಕ ಅತ್ಯುನ್ನತ ತಜ್ಞರ ನೆರವು ದೊರೆತಿದೆ. ಜಗತ್ತಿನ ಯಾವುದೇ ಉತ್ತಮ ವೈದ್ಯಕೀಯ ತಂಡಕ್ಕೆ ಸರಿಸಾಟಿ ಅಗಬಲ್ಲಂಥ ಅಪೋಲೋ ಹಾಗೂ ಏಮ್ಸ್ ತಂಡದ ಕಾಳಜಿ ಜಯಲಲಿತಾ ಅವರಿಗೆ ಸಿಕ್ಕಿದೆ. ತಮಿಳುನಾಡಿನ ಜನರು, ಜಯಲಲಿತಾ ಕುಟುಂಬ ಮತ್ತು ಜಯಲಲಿತಾ ಅವರಿಗಾಗಿ ನನ್ನ ಪ್ರಾರ್ಥನೆ ಸದಾ ಜೊತೆಗಿರುತ್ತದೆ,"

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After Jayalalithaa's cardiac arrest, her consultant, London based doctor Professor Richard Beale's released statement on Sunday.
Please Wait while comments are loading...