ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೊ. ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಸೆ. 24: ಭಾರತ ರತ್ನ, ಹಿರಿಯ ವಿಜ್ಞಾನಿ, ಹೆಮ್ಮೆಯ ಕನ್ನಡಿಗ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.

ಭಾರತ ರತ್ನ ಸಿಎನ್ಆರ್ ರಾವ್ ವ್ಯಕ್ತಿ ಚಿತ್ರಭಾರತ ರತ್ನ ಸಿಎನ್ಆರ್ ರಾವ್ ವ್ಯಕ್ತಿ ಚಿತ್ರ

ಅಮೆರಿಕದ ಮೆಟಿರಿಯಲ್‌ ರಿಸರ್ಚ್‌ ಸೊಸೈಟಿಯು ಮೆಟಿರಿಯಲ್‌ ರಿಸರ್ಚ್‌ (ವಸ್ತುಗಳ ಸಂಶೋಧನೆ) ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿಗಳಿಗೆ ನೀಡುವ 'ವಾನ್‌ ಹಿಪ್ಪಲ್‌' ಪ್ರಶಸ್ತಿ ನೀಡಲಾಗುತ್ತದೆ. ಪ್ರೊ.ಸಿ.ಎನ್‌.ಆರ್‌.ರಾವ್‌ ಅವರು ಪ್ರಶಸ್ತಿ ಪಡೆಯುತ್ತಿರುವ ಏಷ್ಯಾದ ಖಂಡದ ಮೊದಲ ವಿಜ್ಞಾನಿಯಾಗಿದ್ದಾರೆ.

Prof. C.N.R. Rao gets prestigious Von Hippel Award

ನ್ಯಾನೋ ವಸ್ತುಗಳು, ಗ್ರಾಫೈನ್, ಸೂಪರ್ ಕಂಡೆಕ್ಟಿವಿ, 2ಡಿ ದ್ರವ್ಯಗಳು ಇನ್ನಿತರ ವಿಷಯಗಳ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿ ಪ್ರೊ.ರಾವ್ ಅವರಿಗೆ ಈ ಗೌರವ ಸಂದಾಯವಾಗುತ್ತಿದೆ.

ನ್ಯಾನೋ ತಂತ್ರಜ್ಞಾನ ಆಹಾರ ಸಮಸ್ಯೆಗೆ ಪರಿಹಾರನ್ಯಾನೋ ತಂತ್ರಜ್ಞಾನ ಆಹಾರ ಸಮಸ್ಯೆಗೆ ಪರಿಹಾರ

ನವೆಂಬರ್ 29ರಂದು ಬೋಸ್ಟನ್ ನಲ್ಲಿ ನಡೆಯುವ ಮೆಟಿರಿಯಲ್ಸ್ ರಿಸರ್ಚ್ ಸೊಸೈಟಿ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಯು ನಗದು ಬಹುಮಾನ, ಪ್ರಶಸ್ತಿ ಫಲಕ, ಡಿಪ್ಲೋಮಾ ಪತ್ರವನ್ನು ಒಳಗೊಂಡಿರುತ್ತದೆ.

English summary
Bharat Ratna recipient C.N.R. Rao has received an internationally recognised honour, the prestigious Von Hippel Award for Materials Research, stated a release from the Jawaharlal Nehru Centre for Advanced Scientific Research, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X