'ಅಮೀರ್ ಖಾನ್ ತಂಗಿ' ಎನಿಸಿಕೊಳ್ಳಲು ಹೆಮ್ಮೆ : ಪ್ರಿಯಾಮಣಿ

Posted By:
Subscribe to Oneindia Kannada

ಬೆಂಗಳೂರು, ಮೇ 09: ಕೇರಳದ ಎರ್ನಾಕುಲಂನ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ನಟಿ ಪ್ರಿಯಾಮಣಿ ಟ್ವೀಟ್ ಮಾಡಿ ದೊಡ್ಡ ರಗಳೆಯಾಗಿದ್ದು ಎಲ್ಲರಿಗೂ ತಿಳಿದಿರಬಹುದು. ಈ ಸಂದರ್ಭದಲ್ಲಿ ಟ್ವೀಟ್ ಲೋಕದಿಂದ ಪ್ರಿಯಾಮಣಿಗೆ 'ಅಮೀರ್ ಖಾನ್ ತಂಗಿ' ಎಂಬ ಪಟ್ಟ ಸಿಕ್ಕಿತ್ತು. ಈ ಬಗ್ಗೆ ಬಹುಭಾಷಾ ತಾರೆ ಪ್ರಿಯಾಮಣಿ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.

ಭಾರತ ಈಗ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ, ಭಾರತ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಿ ಎಂಬರ್ಥದಲ್ಲಿ ಕರೆ ನೀಡಿದ್ದ ಪ್ರಿಯಾಮಣಿ ಅವರನ್ನು ಮುರ್ನಾಲ್ಕು ದಿನಗಳ ಹಿಂದೆ 'ಅಮೀರ್ ಖಾನ್ ಸೋದರಿ' ಎಂದು ಗೇಲಿ ಮಾಡಿ ಅನೇಕ ಮಂದಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದರು. ['ಅಮೀರ್ ಖಾನ್ ಸೋದರಿ' ಪ್ರಿಯಾಮಣಿಗೆ ಟ್ವೀಟ್ ಪೆಟ್ಟು]

ಇದಕ್ಕೆ ಉತ್ತರಿಸಿದ್ದ ಪ್ರಿಯಾಮಣಿ, 'ನಾನು ದೇಶವಿರೋಧಿ ಹೇಳಿಕೆಯಾಗಲಿ, ಪ್ರಚೋದನಕಾರಿ ಟ್ವೀಟ್ ಆಗಲಿ ಮಾಡಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಕೇರಳ, ಭಾರತ ಸುರಕ್ಷಿತವಾಗಿಲ್ಲ, ಭದ್ರತೆ ಇಲ್ಲದ ಜಾಗದಲ್ಲಿ ನೆಲೆಸುವುದರಲ್ಲಿ ಅರ್ಥವಿಲ್ಲ' ಎಂದಷ್ಟೇ ಹೇಳಿದ್ದೆ ಎಂದು ಸಮಜಾಯಿಷಿ ನೀಡಿದ್ದರು. ['ನನ್ನ ದೇಶಭಕ್ತಿಗೆ ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ']

ಈ ಬಗ್ಗೆ ಪ್ರಿಂಟ್, ವೆಬ್, ಟಿವಿ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ನಡೆದಿತ್ತು. ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಪಟ್ಟಣದ ಕಾನೂನು ವ್ಯಾಸಂಗ ಮಾಡುತ್ತಿದ್ದ 28 ವರ್ಷದ ವಿದ್ಯಾರ್ಥಿನಿ ಜಿಶಾರನ್ನು ಬರ್ಬರವಾಗಿ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ವಿರುದ್ಧ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ.[ಅಸಹಿಷ್ಣುತೆ ಬಗ್ಗೆ ದನಿ ಎತ್ತಿದವರಿಗೆ ಅನುಪಮ್ ತಿರುಗೇಟು]

ಈ ಸಂದರ್ಭದಲ್ಲಿ ಟ್ವೀಟ್ ವೊಂದಕ್ಕೆ ಉತ್ತರಿಸಿರುವ ಪ್ರಿಯಾಮಣಿ 'ಅಮೀರ್ ಖಾನ್ ತಂಗಿ' ಎನಿಸಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದಿದ್ದಾರೆ. ಜತೆಗೆ ನನಗೇನು ಪುಕ್ಕಟೆ ಪ್ರಚಾರ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.


ಜಿಶಾ ಅತ್ಯಾಚಾರ, ಕೊಲೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಿಯಾಮಣಿ ರೀ ಟ್ವೀಟ್ ಮಾಡುತ್ತಿದ್ದಾರೆ.

"ನನ್ನ ಹೇಳಿಕೆ ಬಗ್ಗೆ ಯಾರಿಗೂ ಸಮಜಾಯಿಷಿ ನೀಡಬೇಕಾಗಿಲ್ಲ. ಭಾರತೀಯ ನಾಗರೀಕರಾದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇರುತ್ತದೆ. ನಾನು ಆ ಮಹಾನ್ ನಟನ ತಂಗಿ ಎನಿಸಿಕೊಳ್ಳಲು ಹೆಮ್ಮೆ. ನಾನು ಧರಿಸುವ ಬಟ್ಟೆ ಬಗ್ಗೆ ಕೂಡಾ ಕಾಮೆಂಟ್ ಮಾಡಿದ್ದಾರೆ. ಅದು ಸಿನಿಮಾಗಾಗಿ ಮಾತ್ರ ಎಂಬ ಸಣ್ಣ ತಿಳುವಳಿಕೆ ಇಲ್ಲದ ಜನರಿಗೆ ನಾನು ಉತ್ತರಿಸುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jisha rape incident Tweet Controversy: Multilingual Actor Priyamani replied to a tweet and said she is proud to be called as 'Aamir Khan's Sister'
Please Wait while comments are loading...