ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ಗೌರಿ ಹಬ್ಬ ಆರಂಭವಾಗಿದೆ ಗಣೇಶ ಚತುರ್ಥಿಗೆ ಕೇವಲ ಒಂದೇ ದಿನ ಬಾಕಿ ಇದೆ, ಹಾಗಾದರೆ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಹೇಗಿದೆ ಎನ್ನುವುದರತ್ತ ಒಮ್ಮೆ ಕಣ್ಣು ಹಾಯಿಸೋಣ.

ಮಂಗಳವಾರದಿಂದಲೇ ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ದರ ಎಷ್ಟೇ ಏರಿದರೂ ಖರೀದಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ ಏಕೆಂದರೆ ಹೂವು, ಹಣ್ಣಿಲ್ಲದಿದ್ದರೆ ಪೂಜೆ ನಡೆಯುವುದಾದರೂ ಹೇಗೆ ಅನಿವಾರ್ಯವಾಗಿ ಎಷ್ಟು ಹೇಳಿದರೂ ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ ಎನ್ನುವ ಸಂಗತಿಯೂ ಮಾರಾಟಗಾರರಿಗೆ ಗೊತ್ತಿದೆ.

ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ

ಕೆಆರ್ ಮಾರುಕಟ್ಟೆಯಲ್ಲಿ ಸಗಟು ಮಾರಾಟ ಮಲ್ಲಿಗೆ ಹೂವು ಕೆಜಿಗೆ 800ರಿಂದ 1000ರೂ ಮುಟ್ಟಿದೆ. ಕನಕಾಂಬರ ಕೂಡ ಒಂದು ಸಾವಿರ ರೂ ತಲುಪಿದೆ. ಆದರೆ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡಿದರಾದರೂ ಖರೀದಿ ಮಾಡುವುದರಿಂದ ಹಿಂದೆ ಸರಿದಿಲ್ಲ. ಸೇವಂತಿಗೆ ಹೂ ಬೆಲೆ 300-350 ರೂ. ಆಗಿದೆ.ವಬಾಳೆಕಂಬ, ತೆಂಗಿನಕಾಯಿ, ಎಲೆ-ಅಡಿಕೆ, ಗೌರಿ-ಗಣೇಶ ಮೂರ್ತಿಗಳು ಮಾರಾಟ ಪ್ರಕ್ರಿಯೆ ನಡೆದಿದೆ. ಗಣಗಿಲೆ ಹೂವು ಕೆಜಿಗೆ 300 ರೂ, ಗುಲಾಬಿ ಹೂವು 120-200 ರೂಗಳಿಗೆ ಮಾರಾಟವಾಗುತ್ತಿದೆ.

ಗಣಪನಿಗೆ ಶ್ರೇಷ್ಠವಾದ ಗರಿಕೆ ಎಕ್ಕಕ್ಕೆ ಏರಿದ ಬೇಡಿಕೆ

ಗಣಪನಿಗೆ ಶ್ರೇಷ್ಠವಾದ ಗರಿಕೆ ಎಕ್ಕಕ್ಕೆ ಏರಿದ ಬೇಡಿಕೆ

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗೌರಿ-ಗಣೇಶ ಮೂರ್ತಿಗಳು ಬಂದಿವೆ, 20 ರೂ.ನಿಂದ ಸುಮಾರು ಒಂದು ಲಕ್ಷ ರೂ ವರೆಗೆ ಮೂರ್ತಿಗಳು ಮಾರಾಟವಾಗುತ್ತಿವೆ. ಮತ್ತೊಂದೆಡೆ ಗಜಗೌರಿ, ಮಡಿಗೌರಿ ಮತ್ತಿತರೆ ಬಗೆಯ ಗೌರಿಯನ್ನು ಖರೀದಿಸುತ್ತಿದ್ದರು. ಇದರ ಜತೆಗೆ ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೇಲದಹಣ್ಣು, ಎಕ್ಕೆ ಹೂವು ಮಾರಾಟವೂ ಜೋರಾಗಿತ್ತು.

ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ

ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ

ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ

ಗೌರಿ-ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಬಾಳೆಹಣ್ಣು, ಸೀಬೆ, ಸೇಬು, ದಾಳಿಂಬೆ, ಮೂಸಂಬಿ ಇತರೆ ಹಣ್ಣುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿದ್ದು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಾಪ್‌ಕಾಮ್ಸ್ ಮಾರಾಟ ಮಾಡುತ್ತಿದೆ.ನೀವು ಪ್ರಯೋಜನ ಪಡೆದುಕೊಳ್ಳಿ

ಸೇವಂತಿಗೆ ಹೂವಿನ ಆಕರ್ಷಣೆ

ಸೇವಂತಿಗೆ ಹೂವಿನ ಆಕರ್ಷಣೆ

ಈ ಬಾರಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೋಲಾರ, ತುಮಕೂರು,ಚಿಕ್ಕಬಳ್ಳಾಪುರದಿಂದ ಸೇವಂತಿಗೆ ಹೂವನ್ನು ತಂದು ಮಾರಾಟ ಮಾಡುತ್ತಿದ್ದಾರೆ. ವರಮಹಾಲಕ್ಷ್ಮೀ ಗೌರಿ-ಗಣೇಶ ಹಬ್ಬಗಳು ಎರಡು ವಾರದ ಅಂತರದಲ್ಲೇ ಬಂದಿದ್ದರಿಂದ ಎರಡೂ ಹಬ್ಬಗಳಿಗೆ ಸಮನಾಗಿ ಹೂ ಕೊಯ್ಲು ಮಾಡಿದ್ದಾರೆ.

ಕೆಆರ್ ಮಾರುಕಟ್ಟೆ ಬಿಡಿ ಹೂವುಗಳ ದರ

ಕೆಆರ್ ಮಾರುಕಟ್ಟೆ ಬಿಡಿ ಹೂವುಗಳ ದರ

ಕನಕಾಂಬರ 1000, ಮಲ್ಲಿಗೆ ಹೂವು 700-1000 ರೂಗೆ ಮಾರಾಟವಾಗುತ್ತಿದೆ, ಸೇವಂತಿಗೆ 240-350 ರೂ, ಕಾಕಡ 300 ರೂ, ಕಣಗಿಲೆ 250-350 ರೂ, ಗುಲಾಬಿ 180-200 ರೂಗಳಿಗೆ ಮಾರಾಟವಾಗುತ್ತಿದೆ.

ಹಣ್ಣು-ತರಕಾರಿ ದರ ಹಾಪ್‌ಕಾಮ್ಸ್

ಹಣ್ಣು-ತರಕಾರಿ ದರ ಹಾಪ್‌ಕಾಮ್ಸ್

ಅನಾನಸ್ 40 ರೂ, ಸೀಬೆಹಣ್ಣು 50 ರೂ, ಕಿತ್ತಳೆ ಹಣ್ಣು 65 ರೂ, ದಾಳಿಂಬೆ 91 ರೂ, ಸಪೋಟ 69 ರೂ, ಬೀನ್ಸ್ 26 ರೂ, ಕ್ಯಾರೇಟ್ 55 ರೂ, ಹೂಕೋಸು 28 ರೂಗಳಿಗೆ ಮಾರಾಟವಾಗುತ್ತಿದೆ.

English summary
The rising price in market of fruits, flowers and other essential and non essential commodities has made expensive in Bengaluru. Despite price rise in the market, purchasing has not been affected as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X