ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಸ್ಮಾರ ಎಂಬ ಆಗಂತುಕನನ್ನು ದೂರವಿರಿಸುವುದು ಹೇಗೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ನೀವು ಅಪಸ್ಮಾರದ ಗೋಸುಂಬೆ ಎಂದು ಕೇಳಿದ್ದೀರಾ? ಮಾರುವೇಷದಲ್ಲಿ ಅಪಸ್ಮಾರ (ಎಪಿಲೆಪ್ಸಿ ಕೆಮಿಲಿಯನ್) ರೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಈ ಕುರಿತು ವಿಚಾರ ಸಂಕಿರಣವೊಂದರಲ್ಲಿ ಚರ್ಚಿಸಲಾಯಿತು. ಖ್ಯಾತ ನ್ಯೂರಾಲಜಿಸ್ಟ್ ಡಾ.ಉದಯ್ ಶಂಕರ್ ಸಿ. ಮಾತನಾಡಿ, ಇದು ನರಕ್ಕೆ ಸಂಬಂಧಿಸಿದ ರೋಗವಾಗಿದೆ. ಅಪಸ್ಮಾರವು ತಾತ್ಕಾಲಿಕ ಪ್ರಜ್ಞೆ ತಪ್ಪುವಿಕೆ ಮತ್ತು ಮಾನಸಿಕ ಆಘಾದಂತೆ ಕಾಣುತ್ತದೆಯಾದರೂ ಅದು ಅಪಸ್ಮಾರವಿಲ್ಲದಿರಬಹುದು ಮತ್ತು ಅದನ್ನು ತಪ್ಪಾಗಿ ಅಪಸ್ಮಾರ ಎಂದು ಚಿಕಿತ್ಸೆ ನೀಡಬಹುದು.

ಅಪಸ್ಮಾರದಂತೆಯೇ ಕಾಣುವ ಹಲವು ಸಂದರ್ಭಗಳಿದ್ದರೂ ಅದು ಅಪಸ್ಮಾರವಲ್ಲದೇ ಇರುವ ಹಲವು ಸ್ಥಿತಿಗಳಿರುತ್ತವೆ. ಉದಾ: ಮೈಗ್ರಾಲೆಪ್ಸಿ ಮತ್ತು ಪ್ಯಾರಾಸೊಮ್ನಿಯಾ. ಅಂತಿಮವಾಗಿ ಎಪಿಲೆಪ್ಟಿಕ್ ಸೀಜರ್ಗಳು ಕೂಡಾ ಎಪಿಲೆಪ್ಸಿ ಮಿಮಿಕ್ ಗಳಂತೆ ಕಾಣಬಹುದು. ಇದು ಅಪಸ್ಮಾರದ ಗೋಸುಂಬೆ ಸ್ಥಿತಿಯಾಗಿರಬಹುದು.

Prevention can avoid epilepsy right before

ಅಪಸ್ಮಾರ ಗಂಭೀರ ನರಸಂಬಂಧಿ ಸಮಸ್ಯೆಯಾಗಿದ್ದು ಜೀವನದ ಗುಣಮಟ್ಟದ ದೃಷ್ಟಿಯಿಂದ ದುಬಾರಿಯಾಗಿದೆ. ಈ ಸಮಸ್ಯೆ ಅತ್ಯಂತ ದೊಡ್ಡ ಸಾಮಾಜಿಕ-ಆರ್ಥಿಕ ಪರಿಣಾಮವನ್ನೂ ಹೊಂದಿದೆ. ಕೆಲವೊಮ್ಮೆ ಈ ಸಮಸ್ಯೆ ಬಹಿರಂಗವಾಗದೇ ಇರಬಹುದು. ಉದಾಹರಣೆಗೆ, ಮದ್ಯವ್ಯಸನಿಯಾಗಿದ್ದರೆ ಈ ಸಮಸ್ಯೆ ಪ್ರಾರಂಭಿಕ ಹಂತದಲ್ಲಿ ಪತ್ತೆಯಾಗದೇ ಇರಬಹುದು.

ಇದನ್ನು ರೋಗಿಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸುವ ಮೂಲಕ ಹಾಗೂ ರೋಗಿ ಮತ್ತು ನ್ಯೂರಾಲಜಿಸ್ಟ್ ನಡುವೆ ಸೂಕ್ತ ಸಂವಹನದ ಮೂಲಕ ತಡೆಯಬಹುದು. ಅಪಸ್ಮಾರವನ್ನು ತಪ್ಪಾಗಿ ಗುರುತಿಸುವುದು ಅಥವಾ ರೋಗಪತ್ತೆ ಮಾಡದೇ ಇರುವುದು ರೋಗಿ ಹಾಗೂ ಕುಟುಂಬಕ್ಕೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ' ಎಂದರು.

ಅಪಸ್ಮಾರದ ಬಹುತೇಕ ಪ್ರಕರಣಗಳ ಕಾರಣ ತಿಳಿಯದಾಗಿದೆ. ಕೆಲವು ಪ್ರಕರಣಗಳು ಮೆದುಳಿನ ಗಾಯ, ಲಕ್ವ, ಮೆದುಳಿನ ಗೆಡ್ಡೆಗಳು, ಮೆದುಳಿನ ಸೋಂಕುಗಳು ಮತ್ತು ಎಪಿಲೆಪ್ಟೋಜೆನೆಸಿಸ್ ಪ್ರಕ್ರಿಯೆ ಮೂಲಕ ಆದ ಜನ್ಮ ದೋಷಗಳ ಪರಿಣಾಮವಾಗಿ ಉಂಟಾಗುತ್ತವೆ.

ಪರಿಚಿತವಿರುವ ಆನುವಂಶಿಕ ನವವಿಕೃತಿಗಳು ಸಣ್ಣ ಪ್ರಮಾಣದ ಪ್ರಕರಣಗಳಿಗೆ ನೇರವಾಗಿ ಸಂಪರ್ಕ ಹೊಂದಿವೆ. ಅಪಸ್ಮಾರದ ಸೆಳವುಗಳು ಮೆದುಳಿನಲ್ಲಿ ಕಾರ್ಟೆಕ್ಸ್‌ನಲ್ಲಿ ವಿಪರೀತ ಹಾಗೂ ಅಸಹಜ ನರಕೋಶ ಚಟುವಟಿಕೆಯ ಪರಿಣಾಮವಾಗಿವೆ.

ರೋಗನಿದಾನದಲ್ಲಿ, ಮೂರ್ಛೆಯಂತಹ ಅದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡಬಹುದಾದ ಇತರ ಸ್ಥಿತಿಗಳನ್ನು ತಳ್ಳಿಹಾಕುವುದು, ಮದ್ಯ ನಿವರ್ತನೆ ಅಥವಾ ವಿದ್ಯುದ್ವಿಚ್ಛೇದ್ಯ ಸಮಸ್ಯೆಗಳಂತಹ ಸೆಳವುಗಳ ಮತ್ತೊಂದು ಕಾರಣವಿದೆಯೇ ಎಂದು ನಿರ್ಧರಿಸುವುದು ಸೇರಿವೆ.

ಇದನ್ನು ಭಾಗಶಃ ಮೆದುಳಿನ ಚಿತ್ರಗಳನ್ನು ತೆಗೆದು ಮತ್ತು ರಕ್ತಪರೀಕ್ಷೆಗಳನ್ನು ನಡೆಸಿ ಮಾಡಬಹುದು. ಅಪಸ್ಮಾರವನ್ನು ಹಲವುವೇಳೆ ಇಲೆಕ್ಟ್ರೊಎನ್ಸೆಫ಼ೆಲೊಗ್ರಾಮ್‍ನಿಂದ ದೃಢಪಡಿಸಬಹುದು, ಆದರೆ ಸಾಧಾರಣ ಪರೀಕ್ಷೆಯು ಅಸ್ವಸ್ಥತೆಯನ್ನು ತಳ್ಳಿಹಾಕುವುದಿಲ್ಲ.

English summary
Experts says prevention can curb epilepsy, a disease kind of disguise in human body. SSNMC Super speciality hospital and Family Physicians' hospital have jointly organised a scientific session on this issue on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X