ಮಂಗಳಮುಖಿಯನ್ನು ಪ್ರೀತಿಸಿ ರೈಲಿಗೆ ತಲೆಕೊಟ್ಟ ಯುವಕ

Posted By:
Subscribe to Oneindia Kannada

ಬೆಂಗಳೂರು, ಮೇ 05 : ಯುವತಿ ಎಂದು ತಿಳಿದು ಮಂಗಳಮುಖಿಯನ್ನು ಪ್ರೀತಿಸಿದ್ದ ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ತಂಗಿಯನ್ನು ವಿವಾಹವಾಗುವಂತೆ ಮಂಗಳಮುಖಿಯ ಅಕ್ಕ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಯುವಕ ಸಾವಿಗೆ ಶರಣಾಗಿದ್ದಾನೆ.

ಮೃತಪಟ್ಟ ಯುವಕನನ್ನು ಬೈಯ್ಯಪ್ಪನಹಳ್ಳಿಯ ಖಾಸಗಿ ಕಂಪನಿಯೊಂದರ ನೌಕರ ವಿಲಿಯಂ (21) ಎಂದು ಗುರುತಿಸಲಾಗಿದೆ. ಮಂಗಳವಾರ ವಿಲಿಯಂ ನಾಪತ್ತೆಯಾಗಿದ್ದ, ಬುಧವಾರ ಬೈಯ್ಯಪ್ಪನಹಳ್ಳಿ ಬಳಿ ರೈಲ್ವೆ ಹಳಿಯ ಮೇಲೆ ವಿಲಿಯಂ ಮೃತದೇಹ ಪತ್ತೆಯಾಗಿದೆ. [ಜಯಾ ವಿರುದ್ದ ಕಣಕ್ಕಿಳಿದ ಮಂಗಳಮುಖಿ]

suicide

ಆರು ತಿಂಗಳ ಹಿಂದೆ ವಿಲಿಯಂಗೆ ಯುವತಿಯೊಬ್ಬಳ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಕೆಲವೇ ದಿನಗಳಲ್ಲಿ ಆಕೆ ಯುವತಿಯಲ್ಲ ಮಂಗಳಮುಖಿ ಎಂದು ತಿಳಿದುಬಂದಿತ್ತು. ಇದರಿಂದಾಗಿ ವಿಲಿಯಂ ಆಕೆಯಿಂದ ದೂರಾಗಲು ಪ್ರಯತ್ನ ನಡೆಸಿದ್ದ. [ಮಂಗಳಮುಖಿ ಸಾವು, ಮೌನ ಪ್ರತಿಭಟನೆ]

ಒಂದು ವಾರದ ಹಿಂದೆ ವಿಲಿಯಂ ಪ್ರೀತಿಸುತ್ತಿದ್ದ ಮಂಗಳಮುಖಿಯ ಅಕ್ಕ ವಿಲಿಯಂ ಮನೆಗೆ ಬಂದು ತನ್ನ ತಂಗಿಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದರು. ಆದರೆ, ವಿಲಿಯಂ ಇದಕ್ಕೆ ನಿರಾಕರಿಸಿದ್ದ. ಆದರೂ ಅವರು ಒತ್ತಾಯ ಮಾಡುತ್ತಿದ್ದರು. ಇದರಿಂದ ಮನನೊಂದ ವಿಲಿಯಂ ತಮ್ಮನಿಗೆ ಮೊಬೈಲ್ ಹಾಗೂ ಪರ್ಸ್ ಕೊಟ್ಟು ಮಂಗಳವಾರ ಹೊರಹೋಗಿದ್ದ. ['ನಾವು ಮನುಷ್ಯರು, ನಮ್ಮನ್ನು ಘನತೆಯಿಂದ ಬದುಕಲು ಬಿಡಿ']

ಮಂಗಳವಾರ ರಾತ್ರಿ ಆತ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಬೈಯಪ್ಪನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
21-year-old William committed suicide near Baiyappanahalli, Bengaluru. Pressure from a transgender to marry his sister is suspected to cause for suicide. Baiyappanahalli railway police registered the complaint.
Please Wait while comments are loading...