ಜಂಟಿ ಅಧಿವೇಶನದಲ್ಲಿ ರಾಜ್ಯದ ಇತಿಹಾಸದ ನೆನಪು

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25 : ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ವಿಶೇಷ ವಿಧಾನಮಂಡಲ ಜಂಟಿ ಅಧಿವೇಶನ ನಡೆಯುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬುಧವಾರ ಬೆಳಗ್ಗೆ ಸ್ಪೀಕರ್ ಕೆ.ಬಿ.ಕೋಳಿವಾಡ, ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದ ರಾಷ್ಟ್ರಪತಿ, ರಾಜ್ಯಪಾಲರನ್ನು ಸ್ವಾಗತಿಸಿದರು.

Ram Nath Kovind,

ಕೆಂಗಲ್ ಹನುಮಂತಯ್ಯ ಅವರ ಕೂಸು, ವಿಧಾನಸೌಧಕ್ಕೀಗ ಅರುವತ್ತು !

ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು

ಚಿತ್ರಗಳಲ್ಲಿ ನೋಡಿ : ವಿಧಾನಸೌಧಕ್ಕೆ 60

* ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆನಪಿನಲ್ಲಿ ಉಳಿಯುವ ದಿನವಿದು. ರಾಷ್ಟ್ರಪತಿಯಾದ ಬಳಿಕ ವಿಧಾನಸೌಧದ ವಜ್ರ ಮಹೋತ್ಸವ ಆಚರಣೆಯಲ್ಲಿ ಭಾಷಣ ಮಾಡುತ್ತಿರುವುದು ಸಂತಸ ತಂದಿದೆ ಎಂದು ರಾಷ್ಟ್ರಪತಿಗಳು ಭಾಷಣ ಆರಂಭಿಸಿದ್ದು ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಿದ್ದಾರೆ.

ಕಂಗೊಳಿಸುತ್ತಿದೆ ವಿಧಾನಸೌಧ: ವಜ್ರಮಹೋತ್ಸವದ ಕಾರ್ಯಕ್ರಮ ಪಟ್ಟಿ

* ರಾಷ್ಟ್ರಪತಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದೇನೆ. ಐತಿಹಾಸಿಕ ಸಂದರ್ಭದಲ್ಲಿ ಭಾಷಣ ಮಾಡುತ್ತಿರುವುದು ನನಗೆ ವೈಯಕ್ತಿಕವಾಗಿಯೂ ಸಂತಸ ತಂದಿದೆ

* ಬೆಂಗಳೂರು ನಿರ್ಮಿಸಿದ ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ವಿಜಯನಗರ ಸಾಮ್ರಾಜ್ಯವನ್ನು ನೆನಪು ಮಾಡಿಕೊಂಡ ರಾಷ್ಟ್ರಪತಿಗಳು. ಬೆಂಗಳೂರು ಹೊಗಳಿ, ರಾಜ್ಯದ ಇತಿಹಾಸವನ್ನು ಸಂಕ್ಷಿಪ್ತವಾಗಿ ಭಾಷಣದಲ್ಲಿ ಹೇಳಿದ ರಾಷ್ಟ್ರಪತಿಗಳು.

* ಮಾಜಿ ಪ್ರಧಾನಿ ದೇವೇಗೌಡರು ನನ್ನ ಸ್ನೇಹಿತರು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಮಂಗಳವಾರವೇ ರಾಮನಾಥ್ ಕೋವಿಂದ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಬುಧವಾರ ರಾಜ್ಯಪಾಲ ವಜುಭಾಯಿ ಅವರು ರಾಷ್ಟ್ರಪತಿಗಳನ್ನು ವಿಧಾನಸೌಧಕ್ಕೆ ಕರೆತಂದರು. ಭಾಷಣದ ಬಳಿಕ ರಾಷ್ಟ್ರಪತಿಗಳು ವಿಧಾನ ಪರಿಷತ್ ಸಭಾಂಗಣ ವೀಕ್ಷಣೆ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President of India Ram Nath Kovind address the special joint session of Karnataka legislature on October 25, 2017 on the occasion of diamond jubilee of Vidhana Soudha. Highlights of his speech

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ