ಇಂದು ರಾಷ್ಟ್ರಪತಿ ಚುನಾವಣೆ: ವಿಧಾನಸೌಧದ ಕೊಠಡಿ 106ರಲ್ಲಿ ಮತದಾನ

Subscribe to Oneindia Kannada

ಬೆಂಗಳೂರು, ಜುಲೈ 17: ಇಂದು ದೇಶಾದ್ಯಂತ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆಗಾಗಿ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ನಡಯಲಿರುವ ಮತದಾನಕ್ಕಾಗಿ ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಬ್ಯಾಲೆಟ್ ಪೇಪರ್ ನಲ್ಲಿ ವಿಧಾನಸಭೆಯ ಚುನಾಯಿತ 224 ಸದಸ್ಯರು ಮತದಾನ ಮಾಡಲಿದ್ದಾರೆ. ಸರ್ಕಾರದಿಂದ ನಾಮನಿರ್ದೇಶನಗೊಂಡ ಆಂಗ್ಲೋ ಇಂಡಿಯನ್‌ ಸದಸ್ಯೆಗೆ ಮಾತ್ರ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. ಇನ್ನು ಲೋಕಸಭೆ ಕಾರ್ಯದರ್ಶಿಯಿಂದ ಅನುಮತಿ ಪಡೆದು ಸಂಸದರೂ ರಾಜ್ಯದಲ್ಲೇ ಮತದಾನ ಮಾಡಬಹುದು. ಬೇರೆ ರಾಜ್ಯಗಳ ಶಾಸಕರಿಗೂ ತಮ್ಮ ಮತಪತ್ರವನ್ನು ಇಲ್ಲಿಗೆ ವರ್ಗಾಯಿಸಿಕೊಂಡು ಮತ ಚಲಾಯಿಸುವ ಅವಕಾಶ ಇದೆ.

President Election 2017: Room No. 106 in Vidhana Soudha all set for voting

'ಸಂಸದ ಪ್ರಕಾಶ ಹುಕ್ಕೇರಿ ರಾಜ್ಯದಲ್ಲೇ ಮತ ಚಲಾಯಿಸುವುದಾಗಿ ಮಾಹಿತಿ ನೀಡಿದ್ದಾರೆ' ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ಹೇಳಿದ್ದಾರೆ.

ಚುನಾವಣಾ ವೀಕ್ಷಕರಾಗಿ ಐಎಎಸ್‌ ಅಧಿಕಾರಿ, ದೆಹಲಿಯ ಅರುಣ್‌ ಸಿಂಘಲ್‌ ಆಗಮಿಸಲಿದ್ದಾರೆ. ಕೇಂದ್ರ ಚುನಾವಣಾ ಆಯೋಗವೇ ನೀಡುವ ನೀಲಿ ಶಾಯಿ ಪೆನ್‌ ನಲ್ಲಿ ಮತದಾರರು ಮೊದಲ ಪ್ರಾಶಸ್ತ್ಯದ ಮತಕ್ಕೆ-1 ಮತ್ತು ಎರಡನೇ ಪ್ರಾಶಸ್ತ್ಯದ ಮತಕ್ಕೆ- 2 ಎಂದು ನಮೂದಿಸಬೇಕು. ಒಂದೊಮ್ಮೆ ಎರಡನೇ ಪ್ರಾಶಸ್ತ್ಯದ ಮತ- 2 ಎಂದು ಮಾತ್ರ ಬರೆದರೆ ಆ ಮತ ಅಸಿಂಧುವಾಗಲಿದೆ.

ಕಣದಲ್ಲಿ ಮೀರಾ ಕುಮಾರ್, ಕೋವಿಂದ್

ಚುನಾವಣಾ ಕಣದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್‌ ಇದ್ದಾರೆ. ಗೆಲ್ಲುವ ಫೇವರಿಟ್ ಅಭ್ಯರ್ಥಿಯಾಗಿ ಎನ್‌ಡಿಎಯ ರಾಮನಾಥ್‌ ಕೋವಿಂದ್‌ ಕಣದಲ್ಲಿದ್ದಾರೆ.

N Santosh Hegde, the next President of India | Online Petition filed

ಮತದಾನ ಮುಗಿದ ಬಳಿಕ ಮತಪೆಟ್ಟಿಗೆಯನ್ನು ಸ್ವತಃ ಮೂರ್ತಿ ಮತ್ತು ಚುನಾವಣಾ ವೀಕ್ಷಕರು ಅದೇ ದಿನ ವಿಮಾನದಲ್ಲಿ ತೆರಳಿ ಲೋಕಸಭೆ ಕಾರ್ಯದರ್ಶಿಗೆ ಹಸ್ತಾಂತರಿಸಲಿದ್ದಾರೆ. ವಿಮಾನದಲ್ಲಿ ಮತಪೆಟ್ಟಿಗೆಗೆಂದೇ ಪ್ರತ್ಯೇಕ ಆಸನ ಕಾಯ್ದಿರಿಸಲಾಗಿದೆ.
ಜುಲೈ 20ರಂದು ಮತಗಳ ಎಣಿಕೆ ನಡೆಯಲಿದೆ. ಅಂದು ಭಾರತದ ಮುಂದಿನ ರಾಷ್ಟ್ರಪತಿ ಆಯ್ಕೆಯಾಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Preparations for the presidential elections were on in full swing at Vidhana Soudha. Room number 106 in the first floor of the building is allotted for voting.
Please Wait while comments are loading...