ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟ್ಟಡದ ಮೇಲಿಂದ ಬಿದ್ದ ಗರ್ಭಿಣಿ ಕೋತಿ, ವೇದನೆ ಮನಕಲಕುವಂತಿತ್ತು

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಕಟ್ಟಡದ ಮೇಲಿಂದ ಬಿದ್ದ ಗರ್ಭಿಣಿ ಕೋತಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆ ಬೆಂಗಲೂರಲ್ಲಿ ವರದಿಯಾಗಿದೆ.

ಪ್ರಾಣಿಯಾಗಲಿ ಮನುಷ್ಯನಾಗಲಿ ಅವುಗಳಿಗೂ ತಮ್ಮ ಕುಟುಂಬ, ಮಕ್ಕಳು ಎಂಬ ಮಮಕಾರ ಇದ್ದೇ ಇರುತ್ತದೆ. ಆ ಕೋತಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆ ಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆ

ಬಾಣಸವಾಡಿಯ ಮುನಿಸ್ವಾಮಪ್ಪ ಲೇಔಟ್‌ ಬಳಿ ಕೋತಿಯೊಂದು ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿತ್ತು, ಗರ್ಭಿಣಿಯಾಗಿದ್ದ ಕೋತಿಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಸಿಗಲಿಲ್ಲ. ಬಿಬಿಎಂಪಿವನ್ಯಜೀವಿ ಸ್ವಯಂ ಸೇವಕ ಸುಭಾಷ್ ಅವರು ಕೋತಿಯನ್ನು ರಕ್ಷಣೆ ಮಾಡಿದ್ದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

Pregnant monkey died after falling from building

ಕಟ್ಟಡದ ಮೇಲಿಂದ ಬಿದ್ದಾಗ ಕೋತಿಗೆಜೀವ ಇತ್ತು, ಚಿಕಿತ್ಸೆಗೆಂದು ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಬೇಕಿತ್ತು, ಆದರೆ ಪಾಲಿಕೆ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ ಕೋತಿ ಪ್ರಾಣ ಬಿಟ್ಟಿದೆ ಎನ್ನುವ ಆರೋಪ ಕೇಳಿಬಂದಿದೆ.

ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

ದ್ವಿಚಕ್ರ ವಾಹನ ಸವಾನೊಬ್ಬ ಒಂದು ರಟ್ಟಿನ ಪೆಟ್ಟಿಗೆ ಮಾಡಿ ಅದರಲ್ಲಿ ಕೋತಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ ಆದರೆ ಮಾರ್ಗಮಧ್ಯದಲ್ಲೇ ಕೋತಿ ಮೃತಪಟ್ಟಿದೆ.

English summary
Pregnant monkey was fell from a building and injured. But because of not getting timely treatment finally dies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X