ಪ್ರೆಗ್ನೆನ್ಸಿ ನೋಟ್ಸ್: ಗರ್ಭಿಣಿ-ಬಾಣಂತಿಯರಿಗಾಗಿ ಅಪೂರ್ವ ಕೃತಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 7: ಹೆಸರಾಂತ ಪೌಷ್ಠಿಕತಜ್ಞೆ ಹಾಗೂ ಲೇಖಕಿ ರುಜುತಾ ದ್ವೇಕರ್ ಅವರ ಬಹುನಿರೀಕ್ಷಿತ ಪುಸ್ತಕವಾದ 'ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕೋರಮಂಗಲದ ಇನ್ನೋವ್ 8 ರಲ್ಲಿ ನಡೆಯಿತು. ಅವರ ಸಾಕಷ್ಟು ಅಭಿಮಾನಿ, ಅನುಯಾಯಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

'ಪ್ರೆಗ್ನೆನ್ಸಿ ನೋಟ್ಸ್' ಪುಸ್ತಕವನ್ನು ಈಗಾಗಲೇ ತಾಯ್ತತನದ ಖುಷಿಯನ್ನು ಅನುಭವಿಸುತ್ತಿರುವ ಕರೀನಾ ಕಪೂರ್ ಖಾನ್ ಅವರ ಉಪಸ್ಥಿತಿಯಲ್ಲಿ, ಜುಲೈ 15 ರಂದು ಮುಂಬೈ ಟೈಟಲ್ ವೇವ್ಸ್ ಪುಸ್ತಕದಂಗಡಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿತ್ತು.

ವಿಶ್ವ ಸ್ತನ್ಯಪಾನ ಸಪ್ತಾಹ: ಮಾತೆ ನೀಡಿದ ಅಮೃತದ 5 ಉಪಯೋಗ

ರುಜುತಾ ಅವರ ಮೊದಲಿನ ಪುಸ್ತಕಗಳಿಂದ ಸಾಕಷ್ಟು ಪ್ರೇರಿತರಾಗಿರುವ ಕರೀನಾ ಈ ಪುಸ್ತಕದಲ್ಲಿ ವೈಯುಕ್ತಿಕ ಪರಿಚಯದ ಕುರಿತು ಬರೆದಿದ್ದಾರೆ. ರುಜುತಾ ಭಾರತದ ಪ್ರಮುಖ ಪೌಷ್ಠಿಕ ಹಾಗೂ ವ್ಯಾಯಾಮ ವಿಜ್ಞಾನ ತಜ್ಞೆ. ಈ ಪುಸ್ತಕದಲ್ಲಿ ಸಂಪೂರ್ಣ ಗರ್ಭಾವಸ್ಥೆಯ ಪ್ರಕ್ರಿಯೆಯನ್ನು ಸುಲಲಿತಗೊಳಿಸುವುದಕ್ಕೆ ಸರಿಯಾಗಿ ತಿನ್ನುವುದರ ಕುರಿತು ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕವು ತೂಕ, ಮಧುಮೇಹ, ಪ್ರಸವಾನಂತರದ ಖಿನ್ನತೆ ಮತ್ತು ಅನಾರೋಗ್ಯಕರ ತಿನ್ನುವ ಅಭ್ಯಾಸಗಳ ಕುರಿತ ವಿಷಯಗಳನ್ನು ಒಳಗೊಂಡಿದೆ.

ಲೇಖಕಿಯ ಮಾತು

ಲೇಖಕಿಯ ಮಾತು

'ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಈಗಾಗಲೇ ಪುಸ್ತಕಕ್ಕೆ ತುಂಬ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಪುಸ್ತಕದ ಅತ್ಯಂತ ವಿಶೇಷವಾದ ಸಂಗತಿಯೇನೆಂದರೆ ಮೊಟ್ಟಮೊದಲ ಬಾರಿಗೆ ಜನಸಮೂಹ ಮೂಲದ ಪಾಕವಿಧಾನಗಳನ್ನು ಈ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ. ಖ್ಯಾತ ನಟಿ ಕರೀನಾ ಸಹ ಇದನ್ನು ಮೆಚ್ಚಿದ್ದಾರೆ. ನಿಮ್ಮ ಮನಸ್ಸನ್ನು ಕಳೆದುಕೊಳ್ಳಬೇಡಿ, ನಿಮ್ಮ ತೂಕವನ್ನು ಕಳೆದುಕೊಳ್ಳಿ. ಗರ್ಭಾವಸ್ಥೆಯ ನಂತರ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವವರಿಗೆ ಈ ಪುಸ್ತಕವು ಸ್ಫೂರ್ತಿದಾಯಕ' ಎಂದು ಲೇಖಕಿ ರುಜುತಾ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಲೋಕಾರ್ಪಣೆ

ಲೋಕಾರ್ಪಣೆ

'ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್' ಜುಲೈ 15, 2017 ರಂದು ಬಿಡುಗಡೆಯಾಗಿದೆ. ದೇಶಾದ್ಯಂತ ಆನ್ಲೈನ್ ಮಳಿಗೆ, ಪುಸ್ತಕದಂಗಡಿಯಲ್ಲಿ ಪುಸ್ತಕ ಲಭ್ಯವಿದೆ.

ಪುಸ್ತಕದ ಕುರಿತು...

ಪುಸ್ತಕದ ಕುರಿತು...

ಗರ್ಭಧಾರಣೆಗೆ ತಯಾರಾಗುತ್ತಿರುವವರಿಗೆ, ಗರ್ಭಿಣಿಯರಿಗೆ ಅಥವಾ ಬಾಣಂತಿಯರಿಗೆ ಬೇಕಾದ ಸೂಕ್ತ ಮಾಹಿತಿ ಈ ಪುಸ್ತಕದಲ್ಲಿದೆ. ಯಾವ ಸಂದರ್ಭದಲ್ಲಿ ಯಾವ ರೀತಿ ಆಹಾರ ತೆಗೆದುಕೊಳ್ಳಬೇಕು, ಯಾವ ವ್ಯಾಯಾಮವನ್ನು ಮಾಡಬೇಕು ಹೇಗೆ ಚೇತರಿಸಿಕೊಳ್ಳಬೇಕು ಎಂಬುದರ ಕುರಿತು ಟಿಪ್ಪಣಿಯನ್ನು ನೀಡಿದ್ದಾರೆ. ದೇಶಾದ್ಯಂತದ ಪಾರಂಪರಿಕ ಪಾಕವಿಧಾನಗಳನ್ನು ಈ ಪುಸ್ತಕ ಒಳಗೊಂಡಿದೆ. ಪ್ರತಿಯೊಬ್ಬ ಮಹಿಳೆಯು ಅವಶ್ಯವಾಗಿ ಹೊಂದಿರಬೇಕಾದ ಮಾರ್ಗದರ್ಶಿ ಇದಾಗಿದೆ.

Home Remedies For Food Poisoning
ಲೇಖಕಿಯ ಕುರಿತು...

ಲೇಖಕಿಯ ಕುರಿತು...

ಭಾರತದ ಪ್ರಸಿದ್ಧ ಆರೋಗ್ಯ ತಜ್ಞೆಯಾಗಿರುವ ಇವರ ಪುಸ್ತಕಗಳು ಒಂದು ದಶಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಆಹಾರ ಮತ್ತು ವ್ಯಾಯಾಮದ ಬಗ್ಗೆ ಚರ್ಚೆಗಳನ್ನು ವ್ಯಾಖ್ಯಾನಿಸುತ್ತಿವೆ. ಇವರು ಪ್ರಸಿದ್ಧ ಪೌಷ್ಠಿಕತಜ್ಞೆ ಹಾಗೂ ಲೇಖಕಿ. 2012ರಲ್ಲಿ ಎಐಜಿ (ಏಷಿಯಾ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟೋಎಂಟರಾಲಜಿ)ಯಿಂದ ನ್ಯೂಟ್ರಿಷನ್ ಪ್ರಶಸ್ತಿ ಇವರಿಗೆ ಸಂದಿದೆ. 2012 ರಲ್ಲಿ ಗ್ಯಾಸ್ಟೋಎಂಟರಾಲಜಿಯಾಗಿ ಆಯ್ಕೆಯಾದರು. ಮತ್ತು ಪೀಪಲ್ ನಿಯತಕಾಲಿಕೆಯಲ್ಲಿ ಭಾರತದಲ್ಲಿ 50 ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಆಯ್ಕೆಯಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Celebrated nutritionist and author, RUJUTA DIWEKAR releases her highly-awaited book –PREGNANCY NOTES: BEFORE, DURING & AFTER – in Bangalore on August 05th. PREGNANCY NOTES was officially launched in Mumbai’s Title Waves bookstore on 15 July in the presence of bollywood actress Kareena Kapoor Khan.
Please Wait while comments are loading...