ಬೆಂಗಳೂರಿನ ಜಹಾನ್ ಮತ್ತು ಪ್ರತೀಕ್ಷಾ ಯಂಗ್ ಶೆಫ್ ಇಂಡಿಯಾ ಫೈನಲ್‌ಗೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ನಗರದ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್ ಜಹಾನ್ ಗಫೂರ್ ಹಾಗೂ ಫ್ರ್ಯಾಂಕ್ ಆಂಥೊನಿ ಪಬ್ಲಿಕ್ ಶಾಲೆಯ ಪ್ರತ್ಯಕ್ಷ ಡಿ. ಹಿಂದೂಜಾ ಅವರು ಯಂಗ್ ಶೆಫ್ ಇಂಡಿಯಾ ಸ್ಕೂಲ್ 2018ರ ಮೆಗಾ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.

ಪ್ರಸಕ್ತ ವರ್ಷದ ಯಂಗ್ ಶೆಫ್ ಇಂಡಿಯಾ ಸ್ಕೂಲ್ 2018ರ ಸ್ಪರ್ಧೆಯ ದಕ್ಷಿಣ ವಲಯದಲ್ಲಿ 30 ಸಾವಿರ ಸ್ಪರ್ಧಾಳುಗಳ ನಡುವೆ ಸ್ಪರ್ಧಿಸಿ ಜಹಾನ್ ಮತ್ತು ಪ್ರತೀಕ್ಷಾ ಜೋಡಿ ದೆಹಲಿಯಲ್ಲಿ ನಡೆಯಲಿರುವ ಮೆಗಾ ಫೈನಲ್ ಗೆ ಪ್ರವೇಶ ಪಡೆದಿದ್ದು ಈ ವರ್ಷದ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಲಿದ್ದಾರೆ.

ದೇಶದ ಬೃಹತ್ ಅಡುಗೆ ಸ್ಪರ್ಧೆಗೆ ಸಾಕ್ಷಿಯಾದ ಬೆಂಗಳೂರು

ದೆಹಲಿಯಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾಗವಹಿಸುವ ಒಟ್ಟು 10 ಫೈನಲಿಸ್ಟ್ ಗಳ ಪೈಕಿ ಪ್ರತೀಕ್ಷಾ ಮತ್ತು ಜಹಾನ್ ಜೋಡಿ ಕೂಡ ಭಾಗವಹಿಸಲಿದ್ದು, ವಿಜೇತರು ಐದು ಲಕ್ಷ ರೂ ನಗದು ಬಹುಮಾನ ದಿ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಅಧ್ಯಯನವನ್ನು ಮುಂದುವರೆಸಲಿದ್ದಾರೆ. ದೇಶದ ಪ್ರಖ್ಯಾತ ಶೆಫ್ ಗಳು ಮೆಗಾ ಫೈನಲ್ ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಕೌಶಲ್ಯ ಮತ್ತು ತಾಂತ್ರಿಕತೆ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.

Pratikshma and Zahaan of Bengaluru enters Young chef India mega finals

ಆತಿಥ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳು ಹಾಗೂ ತಂತ್ರಜ್ಞಾನವನ್ನು ಅಳವಡಿಸಿ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಹೆಚ್ಚಿಸುವ ದೃಷ್ಟಿಯಿಂದ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸ್ಫರ್ದೆಯ ವೇದಿಕೆಯನ್ನು ರೂಪಿಸಲಾಗಿದೆ ಕಳೆದ ಎಂಟು ವರ್ಷದಿಂದ ಸತತವಾಗಿ ಈ ಸ್ಪರ್ಧೆ ನಡೆಯುತ್ತಿದೆ.

ಜಹಾನ್ ಹಾಗೂ ಪ್ರತೀಕ್ಷಾ ಜೋಡಿ ಸ್ಫರ್ಧೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ ದಕ್ಷಿಣ ವಲಯದ ಸ್ಪರ್ಧಿಗಳ ಪೈಕಿ ಇವರಿಬ್ಬರ ಜೋಡಿ ಹೆಚ್ಚು ಕೌಶಲ ಹಾಗೂ ತಾಂತ್ರಿಕತೆಯನ್ನು ಹೊಂದಿದ್ದು, ಅಂತಿಮ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಇಂಟಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ನಿರ್ದೇಶನ ಶಾಲಿನಿ ಖನ್ನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Zahaan Gafoor from Mallya Aditi International School and Pratiksha D Hinduja from Frank Anthony Public school both from Bengaluru are make it to the Mega-finals at the Young chef India School 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ