ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಅಪ್ಪನ ಕಾಲ ಬಳಿಯೇ ಕುಳಿತೀರಲ್ಲ ಸಿದ್ದರಾಮಯ್ಯ?: ಚುಚ್ಚಿದ ಸಿಂಹ

|
Google Oneindia Kannada News

Recommended Video

ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯರನ್ನ ತರಾಟೆಗೆ ತೆಗೆದುಕೊಂಡ ಪ್ರತಾಪ್ ಸಿಂಹ | Oneindia Kannada

ಬೆಂಗಳೂರು, ಅಕ್ಟೋಬರ್ 29: ಬಳ್ಳಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ನಡೆಸಿದ್ದ ಪತ್ರಿಕಾಗೋಷ್ಠಿಗೆ ಪ್ರತಿಯಾಗಿ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಬಾಣ ಬಿಟ್ಟಿದ್ದರು.

ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗುಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗು

'ನೀವು ಜೈಲಿಗೆ ಹೋಗಲು ನಾನು ಕಾರಣ ಎಂದಿದ್ದೀರಿ. ನಿಮ್ಮ ಅಕ್ರಮ ಗಣಿಗಾರಿಕೆ ಕುರಿತು ನಿಮ್ಮದೇ ಪಕ್ಷದ ಸಂಸದ ಬರೆದ ಪುಸ್ತಕ ಓದಿ' ಎಂದು ಪ್ರತಾಪ್ ಸಿಂಹ ಪತ್ರಕರ್ತನಾಗಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಕುರಿತು ಬರೆದಿದ್ದ ಪುಸ್ತಕದ ಚಿತ್ರದೊಂದಿಗೆ ರೆಡ್ಡಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಜತೆಗೆ ಪ್ರತಾಪ್ ಸಿಂಹ್ ಅವರ ಹಳೆಯ ಟ್ವೀಟ್‌ನ ಸ್ಕ್ರೀನ್ ಶಾಟ್ ಸಹ ಬಳಿಸಿಕೊಂಡಿದ್ದರು.

ನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣ

ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ಎಂಬಂತೆ ಚುನಾವಣೆ ಸಂದರ್ಭದಲ್ಲಿ ಅವರು ಆಡಿದ್ದ ಮಾತುಗಳನ್ನೇ ಬಳಸಿಕೊಂಡು ಪ್ರತಾಪ್ ಸಿಂಹ ಅವರಿಗೆ ಚುಚ್ಚಿದ್ದಾರೆ.

pratap simha tweet reaction to siddaramaiah tweet on janardhan reddy

ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿರುವ ಪ್ರತಾಪ್ ಸಿಂಹ, ನೇರವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ

ಅರೆರೇ ಸಿದ್ದರಾಮಯ್ಯನವರೇ, ಅವ್ರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋಲ್ಲ... ಅಂತ ಬೊಂಬ್ಡ ಹೊಡೆದು ಅವರಪ್ಪನ ಕಾಲ ಬಳಿಗೇ ಓಡಿಹೋಗಿ ಬೇಷರತ್ ಬೆಂಬಲ ಕೊಡುತ್ತೇವೆ, ಮಗನನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದು, ನೀಚ ಅಂದವರ ಜೊತೇನೆ ಪತ್ರಿಕಾಗೋಷ್ಠಿ ಮಾಡಿದ್ದೂ ಅಷ್ಟು ಬೇಗ ಮರೆತು ಹೋಯಿತಾ? ಎಂದು ದೇವೇಗೌಡರ ಜತೆ ಕೈ ಜೋಡಿಸಿದ ಸಿದ್ದರಾಮಯ್ಯ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

English summary
BJP MP Pratap Simha reacted in twitter to Siddaramaiah's tweet on Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X