ಟ್ರೋಲ್ ಕಡಿವಾಣಕ್ಕೆ ಹೊರಟ ರೈ ವಿರುದ್ಧವೇ ಶುರುವಾಯ್ತು ಟ್ರೋಲ್!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಟ್ರೋಲ್ ಹೈಕ್ಳಿಗೆ ಕಡಿವಾಣ ಹಾಕಲು ಹೊರಟ ನಟ, ನಿರ್ದೇಶಕ ಪ್ರಕಾಶ್ ರಾಜ್ ರ Just Asking ಪ್ರತಿಭಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ 'Just Telling' ಅಂತ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ!

ಪ್ರತಾಪ್ ಸಿಂಹಗೆ ಲೀಗಲ್ ನೋಟಿಸ್, ಉತ್ತರಿಸದಿದ್ದರೆ ಕ್ರಮ: ರೈ

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು(ನ.23) ಬಹುಭಾಷಾ ನಟ ಪ್ರಕಾಶ್ ರೈ ಪತ್ರಿಕಾಕೋಷ್ಠಿ ನಡೆಸಿ, "ನನ್ನ ವೈಯಕ್ತಿಕ ಜೀವನದ ಕುರಿತು ಟ್ರೋಲ್ ಮಾಡಿದ್ದಕ್ಕಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ನಾನು ಲೀಗಲ್ ನೋಟಿಸ್ ಕಳಿಸಿದ್ದೇನೆ. ನಾನು ಅವರಿಗೆ ಕಾನೂನಾತ್ಮಕವಾಗಿಯೇ ಉತ್ತರಿಸುವಂತೆ ಕೇಳಿದ್ದೇನೆ, ಅವರು ಉತ್ತರಿಸದಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದಿದ್ದರು.

ಪ್ರಕಾಶ್ ರೈ ಮೇಲೆ ಸಂಸದ ಪ್ರತಾಪ್ ಸಿಂಹ ಘರ್ಜನೆ

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯವರನ್ನೇ ಟ್ರೋಲ್ ಮಾಡಲಾಗುತ್ತದೆ. ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾರೂ 'ಟ್ರೋಲಾತೀತ'ರಲ್ಲ! ಹೀಗಿರುವಾಗ ಟ್ರೋಲ್ ಅನ್ನು ಗೂಂಡಾಗಿರಿ ಎಂದು ಕರೆದು, ಅದಕ್ಕೆ ಕಡಿವಾಣ ಹಾಕಲು ಯತ್ನಿಸುವುದು ಎಷ್ಟು ಸರಿ ಎಂಬುದು ಹಲವರ ಪ್ರಶ್ನೆ. ಒಟ್ಟಿನಲ್ಲಿ ಟ್ರೋಲ್ ಹತ್ತಿಕ್ಕುವ ಪ್ರಕಾಶ್ ರೈ ಮಾತು, ಮತ್ತೊಂದು ಟ್ರೋಲ್ ಗೆ ವಿಷಯವಾಗಿದೆ ಎಂಬುದೇ ವಿಷಾದದ ಸಂಗತಿ!

ಪ್ರತಾಪ್ ಸಿಂಹ ಟ್ವೀಟ್ ನಲ್ಲಿದ್ದ ವಿವಾದವೇನು?!

ಪ್ರತಾಪ್ ಸಿಂಹ ಟ್ವೀಟ್ ನಲ್ಲಿದ್ದ ವಿವಾದವೇನು?!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು 'ಮಹಾನ್ ನಟ' ಎಂದು ವ್ಯಂಗ್ಯವಾಡಿದ್ದ ಪ್ರಕಾಶ್ ರೈ, ನನಗೆ ಬಂದ ರಾಜ್ಯ ಪ್ರಶಸ್ತಿಗಳನ್ನು ಅವರಿಗೇ ನೀಡೋಣ ಎನ್ನಿಸಿತ್ತು ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿಯವರನ್ನೂ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ, "ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ - ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ??!" ಎಂದು ವೆಬ್ ಸೈಟ್ ವೊಂದರಲ್ಲಿ ಬಂದಿದ್ದ ಸುದ್ದಿಯನ್ನೇ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರೀಟ್ವೀಟ್ ಮಾಡಿದ್ದರು. ಪ್ರಕಾಶ್ ರೈ, ಸಿಂಹ ವಿರುದ್ಧ ಲೀಗಲ್ ನೋಟೀಸ್ ಕಳಿಸುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಯಾರದೋ ಟ್ವೀಟ್ ಅನ್ನು ರೀಟ್ವೀಟ್ ಮಾಡುವುದೂ ಅಪರಾಧವಾ? ನನಗೆ ಮತ್ತೊಬ್ಬರ ವೈಯಕ್ತಿಕ ವಿಷಯಗಳ ಕುರಿತು ಮಾತನಾಡಿ ಅಭ್ಯಾಸವಿಲ್ಲ ಎಂದಿದ್ದಾರೆ.

ಘಟಾನುಘಟಿಗಳನ್ನೇ ಬಿಟ್ಟಿಲ್ಲ

ಪ್ರಕಾಶ್ ರಾಜ್, ನಿಂದನೆಯ ವಿಷಯವಾಗುವವರೆಗೂ ಟ್ರೋಲ್ ಎಂಬುದು ಒಂದು ಅಪರಾಧವಲ್ಲ ಎಂಬುದನ್ನು ಮೊದಲು ತಿಳಿಯಿರಿ. ಎಷ್ಟೋ ಘಟಾನುಘಟಿಗಳೇ ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ದಿನೇ ದಿನೇ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ರಮೇಶ್ ಖಾಂಡೇವಾಲ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.

ಅಸಂಬದ್ಧವಾಗಿ ಮಾತನಾಡಿದರೆ ಟ್ರೋಲ್ ಮಾಡ್ತಾರೆ!

ನೀವು ಅಸಂಬದ್ಧವಾಗಿ ಮಾತನಾಡಿದರೆ ಜನರು ಟ್ರೋಲ್ ಮಾಡಿಯೇ ಮಾಡುತ್ತಾರೆ. ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದು ಫ್ರಾಂಕ್ಲೀ ಸ್ಪೀಕಿಂಗ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಪ್ರತಾಪ್ ಸಿಂಹ ಕ್ಷಮೆ ಕೇಳಲಿ

ಹೌದು, ಯಾರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದಕ್ಕೂ, ಯಾರಿಗೂ ಹಕ್ಕಿಲ್ಲ. ಪ್ರತಾಪ್ ಸಿಂಹ ಅವರು ಪ್ರಕಾಶ್ ರೈ ಅವರ ಕ್ಷಮೆ ಕೇಳಬೇಕು ಎಂದು ದರ್ಶನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಈಗ ಭಾರತ ಅಸಹಿಷ್ಣುವಾಗಿದೆ!

ಭಾರತ ಈಗ ಅಸಹಿಷ್ಣುವಾಗಿದೆ. ನಾನು ಮಾತನಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ನನ್ನ ಬಗ್ಗೆ ಬೇರೆಯವರು ಮಾತನಾಡಿದರೆ ಅದು ಖಾಸಗೀತನಕ್ಕೆ ಧಕ್ಕೆ! ಅಲ್ಲವೇ ಪ್ರಕಾಶ್ ರಾಜ್ ಜೀ? ಎಂದು ಇಂಡಿಯಾ ಫಸ್ಟ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ

ನಿಮ್ಮ ಮಾತು ಸರಿ ಪ್ರಕಾಶ್ ರಾಜ್ ಸರ್. ವಾಕ್ ಸ್ವಾತಂತ್ರ್ಯ ಎಂಬುದು ಈಗ ಅಪಾಯದಲ್ಲಿದೆ. ನಾವು ಈಗ ಮಾತನಾಡಲೇಬೇಕಿದೆ ಎಂದು ನಯೀಮ್ ಎಂಬುವವರು ಪ್ರಕಾಶ್ ರೈ ಅವರನ್ನು ಬೆಂಬಲಿಸಿದ್ದಾರೆ.

ಸಿಂಪತಿಗಳಿಸೋಕಾ..?

ನೀವ್ಯಾಕೆ ಪ್ರತಾಪ್ ಸಿಂಹ ಅವರ ವಿರುದ್ಧ ನಿಮ್ಮ ವೈಯಕ್ತಿಕ ದೂರನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೀರಿ? ಮತ್ತೆ ಟ್ರೋಲ್ ಆಗೋದಕ್ಕಾ ಅತವಾ ಸಿಂಪತಿ ಗಳಿಸೋದಕ್ಕಾ? ನಮಗೆ ಇದರಲ್ಲಿ ಆಸಕ್ತಿ ಇಲ್ಲ" ಎಂದು ಉಷಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People are trolling Prakash Raj for his statement on controlling Troll pages in social media. He has addressed media in a press conference in Bengaluru Press club, and announced his decision to start a campaign called 'Just Asking' to controll Trolls on social media. And also blames Mysuru Kodagu MP Pratap Simha for speaking about Prakash Rai's personal life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ