ಸಾಂಸ್ಕೃತಿಕ ಲೋಕಕ್ಕೆ ರಂಗಮಂದಿರ ಅರ್ಪಣೆ

Posted By: Ananthanag
Subscribe to Oneindia Kannada

ಬೆಂಗಳೂರು: ನವೆಂಬರ್,3: ಜಗಮಗಿಸುವ ವೈವಿಧ್ಯಮಯ ದೀಪಾಲಾಂಕಾರದೊಂದಿಗೆ ವಿವಿಧ ಕಾರ್ಯಕ್ರಮಕ್ಕೆ ಪ್ರಭಾತ್‌ ಕಲಾಪೂರ್ಣಿಮಾ ರಂಗಮಂದಿರ ಇದೇ ನ.5ರಂದು ಲೋಕಾರ್ಪಣೆಗೊಳ್ಳಲಿದೆ.

ಈ ರಂಗಮಂದಿರ ಇರುವುದು ಬೆಂಗಳೂರಿನ ಎನ್.ಆರ್. ಕಾಲನಿಯಲ್ಲಿ ಅದ್ಭುತವಾಗಿ ರೂಪಿತವಾಗಿರುವ ವೇದಿಕೆ. ನಾಟಕ, ನೃತ್ಯ, ಸಂಗೀತ ಕಛೇರಿ, ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಹೇಳಿಮಾಡಿಸಿದಂತಿರುವ ಈ ಭವ್ಯ ಮಂದಿರ.

ಪ್ರಭಾತ್‌ ಕಲಾಪೂರ್ಣಿಮಾವನ್ನು ಖ್ಯಾತ ನಿರ್ದೇಶಕ ಟಿ.ಎಸ್‌.ನಾಗಾಭರಣ ಮತ್ತು ಮಾಜಿ ಮೇಯರ್ ಬಿ.ಎಸ್‌ ಸತ್ಯನಾರಾಯಣ ಅವರು ಸಂಜೆ ಲೋಕಾರ್ಪಣೆ ಗೊಳಿಸಲಿದ್ದಾರೆ.[ಸವಿಸವಿ ನೆನಪುಗಳೊಂದಿಗೆ ಸಿಂಗಾರ ಸಮ್ಮೇಳನಕ್ಕೆ ಮಂಗಳ]

Prabhath Kalapoornima Theater opening on 5th Nov 2016

ಸಾಂಸ್ಕೃತಿಕ ಕಲಾ ರಸಿಕರ ಮನಸೂರೆಗೊಳಿಸಲು ಪ್ರಭಾತ್ ಕಲಾವಿದರ ಕುಟುಂಬ ಈ ಹಿಂದೆ ನಗರದ ಕೋರಮಂಗಲದಲ್ಲಿ ಕೆಇಎ ಪ್ರಭಾತ್ ರಂಗಮಂದಿರ ಆರಂಭಿಸಿತ್ತು.

ಇದೀಗ ಎನ್.ಆರ್ ಕಾಲನಿಯಲ್ಲಿ ಪ್ರಭಾತ್ ಕಲಾಪೂರ್ಣಿಮಾ ಎಂಬ ಮತ್ತೊಂದು ಅತ್ಯಾಧುನಿಕ ಸುಸಜ್ಜಿತ ಕಲಾ ಮಂದಿರವನ್ನು ಆರಂಭಿಸಲಿದೆ.

ಕಲಾಮಂದಿರದ ಆರಂಭೋತ್ಸವದ ಹಿನ್ನೆಲೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ನವೆಂಬರ್ 5ರ ಸಂಜೆ 7 ಗಂಟೆಗೆ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಅವರ ತಂಡದಿಂದ 'ಅತೀತ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ..[ಹುಚ್ಚೆದ್ದು ಕುಣಿಯುವಂತೆ ಮಾಡಿದ ಜಾನಪದ ಕಲಾವೈಭವ]

Prabhath Kalapoornima Theater opening on 5th Nov 2016

ನವೆಂಬರ್ 6ರಂದು ಸಂಜೆ 6.30ಕ್ಕೆ ಖ್ಯಾತ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರಿಂದ 'ಕಥಾಕೀರ್ತನ' ಎಂಬ ನೃತ್ಯರೂಪಕ ನಡೆಯಲಿದೆ.
ನವೆಂಬರ್ 13ರಂದು ಖ್ಯಾತ ಹಿಂದೂಸ್ಥಾನಿ ಗಾಯಕ ಫಯಾಜ್‌ಖಾನ್ ಅವರಿಂದ ಗಾಯನ ಕಾರ್ಯಕ್ರಮ ಜರುಗಲಿದೆ.

ಮಾಹಿತಿಗಾಗಿ: 96322057799

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prabhath Kalapoornima Theater which is opening on 5th Nov 2016 at 5PM which is located at N R Colony.The space is being inaugurated by T S Nagabharana and B S satyanarayana, which will be followed by a performance by S N Sethuram, renowned theatre and serial artist with his latest production “ Atheetha”.
Please Wait while comments are loading...