ಎಲೆಕ್ಟ್ರಾನಿಕ್‌ಸಿಟಿ ಸುತ್ತಲಿನ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ನಮ್ಮ ಮೆಟ್ರೋ ಕಾಮಗಾರಿ ನಿರ್ವಹಿಸಲು ಈಗಿರುವ ವಿದ್ಯುತ್ ಮೂಲ ಸೌಕರ್ಯಗಳನ್ನು ಸ್ಥಳಾಂತರಿಸಬೇಕಾಗಿರುವುದರಿಂದ ಏಪ್ರಿಲ್ 11ರ ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಅಡಚರಣೆ ಉಂಟಾಗುವ ಪ್ರದೇಶಗಳು: 66/11 ನಾಗನಾಥಪುರ ವಿದ್ಯುತ್ ಉಪ ಕೇಂದ್ರದ ಎಫ್ -6 ಮತ್ತು ಎಫ್16 ಫೀಡರ್ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ, ಹೊಂಗಸಂದ್ರ ಮುಖ್ಯ ರಸ್ತೆ, ಓಂ ಶಕ್ತಿ ಲೇಔಟ್, ಗುರುಮೂರ್ತಿ ಬಡಾವಣೆ, ಹೊಂಗಸಂದ್ರದ ಇತರೆ ಪ್ರದೇಶಗಳು ಮತ್ತು ಜಿ.ಬಿ. ಪಾಳ್ಯ ರಸ್ತೆ ಬೇಗೂ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜಿಗಣಿ ಸುತ್ತಮುತ್ತಲ ಪ್ರದೇಶಗಳಲ್ಲಿ 5 ದಿನ ವಿದ್ಯುತ್ ವ್ಯತ್ಯಯ

ಇನ್ನು ಎಇಸಿಎಸ್ ಲೇಔಟ್, ಸಿಂಗಸಂದ್ರ ಕೈಗಾರಿಕಾ ಪ್ರದೇಶ ಮುನಿರೆಡ್ಡಿ ಲೇಔಟ್, ಲಕ್ಷ್ಮೀ ಲೇಔಟ್, ರಾಘವೇಂದ್ರ ಲೇಔಟ್, ಮೈಕೋ ಲೇಔಟ್, ವಾಜಪೇಯಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

Power supply interruption in city tomorrow

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

66/11 ಎಲೆಕ್ಟ್ರಾನಿಕ್ ಸಿಟಿ ಫೇಸ್ 2 ಸೆಕ್ಟರ್ 1 ಉಪ ಕೇಂದ್ರದ ಎಫ್-4, ಎಫ್-14, ಎಫ್-9 ಮತ್ತು ಎಫ್-10, ಫೀಡರ್ ಗಳ ಮೂಲಕ ವಿದ್ಯುತ್ ವಿತರಣೆಯಾಗುವ ಶ್ರೀರಾಮ ಬಡಾವಣೆ, ಹೊಂಗಸಂದ್ರ 9ನೇ ಮುಖ್ಯರಸ್ತೆ, ಬಾಲಾಜಿ ಲೇಔಟ್, ಸತೀಶ್ ರೆಡ್ಡಿ ಲೇಔಟ್, ಎನ್ ಜಿಆರ್ ಲೇಔಟ್, ಬೊಮ್ಮನಹಳ್ಳಿ ಮತ್ತು ರೂಪೇನ ಅಗ್ರಹಾರದ ಸುತ್ತಮುತ್ತಲ ಪ್ರದೇಶಗಳು, ಬೊಮ್ಮನಹಳ್ಳಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bescom is conduction some maintenance technical drive. So there will be no power in Electronic city and many places of Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ