ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 30: ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನ ಮೂರ್ತಿಯನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಪಿಒಪಿ ಗಣೇಶನನ್ನು ನಿಷೇಧಿಸಲು ಹರಸಾಹಸಪಡುತ್ತಿದೆ.

ಮೊದಲ ಎರಡು ವರ್ಷ ಈಗಾಗಲೇ ಸಾವಿರಾರು ಮೂರ್ತಿಗಳನ್ನು ತಯಾರಿಸಿದ್ದೇವೆ ಏಕಾಏಕಿ ನಿಷೇಧ ಮಾಡಿದರೆ ಈ ವೆಚ್ಚವನ್ನು ಭರಿಸುವವರು ಯಾರು ಎಂದು ಮೂರ್ತಿ ತಯಾರಕರು ಪ್ರಶ್ನಿಸಿದ್ದರು ಆದರೆ ಈ ಈ ವರ್ಷ ಪಿಒಪಿ ಗಣೇಶನನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದೆ.

ಗಣೇಶ ಚತುರ್ಥಿಗೆ ಚಂದಾ ಕೇಳಲು ಬಂದು ಚೂರಿ ಇರಿತಗಣೇಶ ಚತುರ್ಥಿಗೆ ಚಂದಾ ಕೇಳಲು ಬಂದು ಚೂರಿ ಇರಿತ

ಆದರೂ ಪಿಒಪಿ ಗಣೇಶನ ಹಾವಳಿ ನಿಲ್ಲುತ್ತಿಲ್ಲ. ನಗರದೆಲ್ಲೆಡೆ ಜನರು ಕೂಡ ಪಿಒಪಿ ಗಣೇಶ ಬೇಕು ಎಂದೇ ಬೇಡಿಕೆ ಇಡುತ್ತಿದ್ದಾರೆ. ಬೆಂಗಳೂರಿಗೆ ಮಹಾರಾಷ್ಟ್ರ, ಹೈದರಾಬಾದ್‌ ನಿಂದ ಪಿಓಪಿ ಗಣಪತಿ ಆಮದಾಗುತ್ತಿದೆ. ಈಗಾಗಲೇ ಆರ್‌ವಿ ರಸ್ತೆಯಲ್ಲಿ 853 ಪಿಒಪಿ ಗಣೇಶ ಮೂರ್ತಿಯನ್ನು ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ವಶಪಡಿಸಿಕೊಂಡಿದೆ.

POP Ganesha making in full swing in spite of ban

ಪಿಒಪಿ ಮೂರ್ತಿಗಳನ್ನು ಇಟ್ಟುಕೊಳ್ಳಲು ಜಾಗವಿಲ್ಲ ಹಾಗಾಗಿ ಇಲ್ಲಿ ಇರಿಸಿಕೊಳ್ಳಲಾಗುತ್ತಿದೆ ಮಾರಾಟ ಮಾಡುತ್ತಿಲ್ಲ ಎಂದು ಮೂರ್ತಿ ತಯಾರಕರು ಕಾರಣ ಹೇಳುತ್ತಿದ್ದಾರೆ. ಪಿಒಪಿ ಗಣೇಶನ ಮೂರ್ತಿಯನ್ನು ನಿಷೇಧಿಸಲಾಗಿದೆ ಎನ್ನುವ ಫಲಕಗಳೊಂದಿಗೆ ಗಣೇಶನನ್ನು ಇರಿಸಲಾಗಿದೆ.

ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ

ವಿಲ್ಸನ್ ಗಾರ್ಡನ್, ಶಾಂತಿನಗರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಮಲ್ಲೇಶ್ವರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಇಡಲಾಗಿದೆ. ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪರಿಸರ ಸ್ನೇಹಿ ಮೂರ್ತಿ ಬಳಕೆಗೆ ಒತ್ತು ನೀಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ಬಾರಿ 5 ಸಾವಿರ ಮೂರ್ತಿಗಳನ್ನು ಉಚಿತವಾಗಿ ಜನರಿಗೆ ವಿತರಿಸಲಿದ್ದಾರೆ.

ಪ್ಲಾಸ್ಟರ್ ಆಫ್‌ ಪ್ಯಾರೀಸ್ ಗಣೇಶ ನಿಷೇಧಕ್ಕೆ ಬಿಬಿಎಂಪಿ ಚಿಂತನೆಪ್ಲಾಸ್ಟರ್ ಆಫ್‌ ಪ್ಯಾರೀಸ್ ಗಣೇಶ ನಿಷೇಧಕ್ಕೆ ಬಿಬಿಎಂಪಿ ಚಿಂತನೆ

ಜನರು ಮಣ್ಣಿನ ಮೂರ್ತಿ ಬಿಟ್ಟು ಈಗಲೂ ಪಿಒಇಪಿ ಗಣೇಶನನ್ನೇ ಕೇಳುತ್ತಿದ್ದಾರೆ, ಪಿಒಪಿ ಮೂರ್ತಿಗಳನ್ನು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ, ಬಳಿಕ ಪಿಒಪಿ ಗಣೇಶನಿಗೆ ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದ ಮಣ್ಣಿನ ಮೂರ್ತಿ ಮಾರಾಟ ಮಾಡುತ್ತಿರುವವರಿಗೆ ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

English summary
As Ganesha festival is nearing, plaster of Paris idol of Ganesha making in full swing in Bengaluru in spite of ban imposed by BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X