ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾದಾತ್ಮಕ ಗ್ರಾಫೈಟ್ ಕಂಪನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ತಂಡ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ವಿವಾದಾತ್ಮಕ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ಕಂಪನಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಂಡ ಭೇಟಿ ನೀಡಿ ಪರಿಶೀಲಿಸಲಿದ್ದು, ದಶಕಗಳ ಕಾಲದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ವೈಟ್‌ಫೀಲ್ಡ್ ನಲ್ಲಿ ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾದ ಕಂಪನಿ ವಿರುದ್ಧ ಸ್ಥಳೀಯರು ನೀಡಿರುವ ದೂರು ಆಧರಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಭೇಟಿ ನೀಡಲಿದೆ.

ಎಸ್‌ಟಿಪಿ ಮೇಲ್ದರ್ಜೆ: ಬೆಂಗಳೂರಿನ 60 ಅಪಾರ್ಟ್ ಮೆಂಟ್‌ಗಳಿಗೆ ನೋಟಿಸ್ ಎಸ್‌ಟಿಪಿ ಮೇಲ್ದರ್ಜೆ: ಬೆಂಗಳೂರಿನ 60 ಅಪಾರ್ಟ್ ಮೆಂಟ್‌ಗಳಿಗೆ ನೋಟಿಸ್

ಅನುಮತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವುದರ ಬಗ್ಗೆ ವರದಿ ಸಿದ್ಧಪಡಿಸಲಿದೆ, ಈಗಾಗಲೇ 2012ರಿಂದ ಈವರೆಗೆ ಸ್ಥಳೀಯರ ವಿರೋಧದ ಮಧ್ಯೆಯೂ ಕಾರ್ಯ ನಿರ್ವಹಿಸುತ್ತಿರುವ ಈ ಕಂಪನಿ ಮಾಲಿನ್ಯ ನಿಯಂತ್ರಣ ನೀಡಿರುವ ತಡೆಯಾಜ್ಞೆ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಮೊರೆ ಹೋಗಿದೆ.

Pollution board agrees to inspect industrial site

ಹೀಗಾಗಿ ಎನ್‌ಜಿಟಿ ಮಾಲಿನ್ಯ ನಿಯಂತ್ರಣ ಮಂಡಳಿಯ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಕಂಪನಿ ಮತ್ತೆ ಕಾರ್ಯಾರಂಭ ಮಾಡಿದ್ದು, ಸ್ಥಳೀಯರು ಎನ್‌ಜಿಟಿಯ ಮೊರೆ ಹೋಗಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಒಟ್ಟು ಮೂರು ಅರ್ಜಿಗಳು ಎನ್‌ಜಿಟಿ ಮುಂದೆ ಬಾಕಿ ಇದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

ಸುತ್ತಮುತ್ತಲ ಜನರಿಗೆ ವಾಸಿಸಲು ತೊಂದರೆಯಾಗುವಂತಹ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಗ್ರಾಫೈಟ್ ಇಂಡಿಯಾ ಕಂಪನಿ ಪರವಾನಗಿ ರದ್ದುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

English summary
The Karnataka State Pollution Control Board (KSPCB)said it will inspect the premises of Graphite India (GI) Limited in Whitefield to ascertain non-compliance, if any, to pollution-related guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X