ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ: 6 ಬೋಗಿಗಳ ಅಳವಡಿಕೆಗೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ ಇಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 05: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ನಮ್ಮ ಮೆಟ್ರೋಗೆ ಬೋಗಿಗಳನ್ನು ಅಳವಡಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಬೋಗಿಗಳು ಸಿದ್ಧಗೊಂಡರೆ ಮೆಟ್ರೋಗಳಿಗೆ ಅಳವಡಿಸಬಹುದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿರುವುದಾಗಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.

ನಮ್ಮ ಮೆಟ್ರೋ:ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭನಮ್ಮ ಮೆಟ್ರೋ:ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭ

ನೂತನ ಬೋಗಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಮಾಡಲು ಸಾಧ್ಯವಿಲ್ಲ ಆದರೆ ಪ್ರಯಾಣಿಕರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಬಹುದು. ಆರ್‌ಡಿಎಸ್ಒ ಒಪ್ಪಿಗೆ ಸೂಚಿಸಿದರೆ ಶೀಘ್ರದಲ್ಲೇ ಆರುಬೋಗಿಯ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Poll code Wont red-light plan to add Metro coaches

ಬಿಇಎಂಎಲ್ ಜತೆಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಸಭೆ ನಡೆಸಿದೆ, ಅದರಲ್ಲಿ ಹಳಿಗೆ ಬೋಗಿಗಳ ಬಂದ ನಂತರ ಎಲೆಕ್ಟ್ರೋ ಮ್ಯಾಗ್ನೆಟಿಕ್ ಕಂಪ್ಯಾಟಿಬಿಲಿಟಿ ಟೆಸ್ಟ್ ಮಾಡಬೇಕಾಗುತ್ತದೆ. ಈ ಪರಿಶೀಲನೆ ನಡೆಸಲು 8-10 ದಿನಗಳ ಸಮಯ ಹಿಡಿಯುತ್ತದೆ. ಪರಿಶೀಲನೆ ಮುಗಿಯುವವರೆಗೂ ಆರು ಬೋಗಿಗಳ ಅಳವಡಿಕೆ ಕುರಿತು ದಿನಾಂಕವನ್ನು ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

English summary
BMRCL Managing director Mahendra jain on wednesday said the election code of conduct, that is inforce till the election result are declared on May 15, will not stop in from adding the extra coaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X