ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ವತ್ ಹೇಳಿಕೆ ಪಡೆಯದೇ ಪೊಲೀಸರು ವಾಪಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 26 : ಮೊಹಮ್ಮದ್ ನಲಪಾಡ್ ಯು.ಬಿ.ಸಿಟಿಯ ಬಾರ್‌ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿ ಒಂದು ವಾರ ಕಳೆದಿದೆ. ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಸೋಮವಾರ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪ್ರಕರಣದ ಬಗ್ಗೆ ವಿದ್ವತ್ ಹೇಳಿಕೆ ಪಡೆಯಲು ಪೊಲೀಸರು ತೆರಳಿದ್ದರು.

ಮೊಹಮ್ಮದ್ ನಲಪಾಡ್‌ಗೆ ಇಂದು ಜಾಮೀನು ಭಾಗ್ಯವಿಲ್ಲ!ಮೊಹಮ್ಮದ್ ನಲಪಾಡ್‌ಗೆ ಇಂದು ಜಾಮೀನು ಭಾಗ್ಯವಿಲ್ಲ!

ಆದರೆ, ವಿದ್ವತ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ತುಟಿಗಳು ಊದಿಕೊಂಡಿದ್ದು, ಮುಖದ ಕೆಲವು ಮೂಳೆ ಮುರಿದಿದೆ. ಆದ್ದರಿಂದ, ಮಾತನಾಡುವ ಸ್ಥಿತಿಯಲ್ಲಿಲ್ಲ. ವಿದ್ವತ್ ಹೇಳಿದ ಮಾತುಗಳು ಪೊಲೀಸರಿಗೂ ಅರ್ಥವಾಗಲಿಲ್ಲ.

Police yet to record loco Vidvath statement

ಆದ್ದರಿಂದ, ಪೊಲೀಸರು ಹೇಳಿಕೆಯನ್ನು ದಾಖಲು ಮಾಡಿಕೊಳ್ಳದೇ ವಾಪಸ್ ಆಗಿದ್ದಾರೆ. ವಿದ್ವತ್ ಸ್ಪಷ್ಟವಾಗಿ ಮಾತನಾಡುವಂತೆ ಆಗುವ ತನಕ ಪೊಲೀಸರು ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವುದು ಕಷ್ಟವಾಗಿದೆ.

ನಲಪಾಡ್ ಪ್ರಕರಣಕ್ಕೆ 1 ವಾರ, 7 ಬೆಳವಣಿಗೆಗಳುನಲಪಾಡ್ ಪ್ರಕರಣಕ್ಕೆ 1 ವಾರ, 7 ಬೆಳವಣಿಗೆಗಳು

ಕೋರ್ಟ್‌ನಲ್ಲೂ ಹೇಳಿಕೆ : ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಎಸ್‌ಪಿಪಿ ಶ್ಯಾಮ್ ಸುಂದರ್ ಅವರು 22 ಪುಟಗಳ ಆಕ್ಷೇಪಣೆಯನ್ನು ಸಲ್ಲಿಸಿದರು. ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?

ಪೊಲೀಸರು ವಿದ್ವತ್ ಹೇಳಿಕೆಯನ್ನು ಇನ್ನೂ ಪಡೆದಿಲ್ಲ. ಈಗಷ್ಟೇ ತನಿಖೆ ಆರಂಭವಾಗಿದೆ. ಈಗ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

English summary
Bengaluru CCB police have yet to record a statement from Vidvath who attacked by Mohammed Nalapad Shanthinagar Congress MLA N.A.Haris son. Vidvath recovering in Malya hospital and Mohammed Nalapad and other accused in Parappana Agrahara jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X