ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಜನಗಣತಿ ಶುರು

By Mahesh
|
Google Oneindia Kannada News

ಬೆಂಗಳೂರು, ಫೆ. 15: ಆಫ್ರಿಕಾದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿಗರ ನಡುವಿನ ತಿಕ್ಕಾಟ ಅಧಿಕವಾಗುತ್ತಿದ್ದಂತೆ ಬೆಂಗಳೂರಿನಲ್ಲಿರುವ ವಿದೇಶಿ ವಿದ್ಯಾರ್ಥಿಗಳು ಹಾಗೂ ವಿದೇಶಿ ಮೂಲದ ನಾಗರಿಕರ ಜನ ಗಣತಿಗೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿಗೆ ಪ್ರವಾಸಿಗರಾಗಿ, ವಿದ್ಯಾರ್ಥಿಗಳಾಗಿ ನೆಲೆಸಲು ವೀಸಾ ಪಡೆದು ಬರುವವರು ವೀಸಾ ಅವಧಿ ಮುಗಿದ ಮೇಲೂ ಇಲ್ಲೇ ಇರುತ್ತಾರೆ ಎಂಬ ದೂರುಗಳು ಕೇಳಿ ಬಂದಿದೆ. ಇದಲ್ಲದೆ ಇತ್ತೀಚೆಗೆ ಅಫ್ರಿಕನ್ ವಿದ್ಯಾರ್ಥಿ ಮೇಲೆ ಹಲ್ಲೆ ಹಾಗೂ ಅದಕ್ಕೂ ಮುನ್ನ ಕಾರು ಅಪಘಾತ ಮಾಡಿದ ಪ್ರಕರಣ ನಡೆದಿತ್ತು. [ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ಬೆಂಗಳೂರಿಗರು]

Police start survey on Foreigners in Bengaluru

ಬೆಂಗಳೂರಿನಲ್ಲಿ ಸರಿ ಸುಮಾರು 30,000 ಕ್ಕೂ ಅಧಿಕ ವಿವಿಧ ದೇಶದ ನಾಗರಿಕರು ವಾಸಿಸುತ್ತಿದ್ದಾರೆ. ಆಫ್ರಿಕನ್ ವಿದ್ಯಾರ್ಥಿ/ನಿಯರು ಸುಮಾರು 6,000 ಕ್ಕೂ ಅಧಿಕ ಮಂದಿ ಇದ್ದು, ಇವರಲ್ಲಿ ಅನೇಕ ಮಂದಿ ವೀಸಾ ಅವಧಿ ಮುಗಿದರೂ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ. [ತಾಂಜಾನಿಯ ವಿದ್ಯಾರ್ಥಿನಿ ಮೇಲೆ ಹಲ್ಲೆ : ಪೊಲೀಸರ ಅಮಾನತಿಗೆ ತಡೆ]

ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಬೆಂಗಳೂರು ಪೊಲೀಸರು ನಿರತರಾಗಿದ್ದಾರೆ. ಬೆಂಗಳೂರಿನಲ್ಲಿರುವ ವಿದ್ಯಾಸಂಸ್ಥೆಗಳು, ಸಾಫ್ಟ್ ವೇರ್ ಸಂಸ್ಥೆಗಳು, ಅಂತಾರಾಷ್ಟ್ರೀಯ ಹೋಟೆಲ್ ಗಳಲ್ಲಿ ನೆಲೆಸಿರುವ ವಿದೇಶಿಯರ ಬಗ್ಗೆ ಮಾಹಿತಿ ಕೋರಲಾಗಿದೆ.

ಜನವರಿ 31ರಂದು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಂಜಾನಿಯ ಮೂಲದ ವಿದ್ಯಾರ್ಥಿನಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಈ ಪ್ರಕರಣದ ರಾಷ್ಟ್ರಾದ್ಯಂತ ಸುದ್ದಿ ಮಾಡಿತ್ತು.

English summary
The Bengaluru police have launched a survey of foreigners staying in the city in the wake of the attack on African student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X