ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೌಡಿಗಳ ವಿರುದ್ಧ ಬಂದೂಕು ಬಳಸಿ: ರಾಮಲಿಂಗಾ ರೆಡ್ಡಿ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 16: ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರೌಡಿಗಳ ವಿರುದ್ಧ ಬಂದೂಕು ಭಾಷೆಯಲ್ಲಿ ಮಾತನಾಡಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಪೊಲೀಸ್ ಇಲಾಖೆಗೆ ಖಡಕ್ ಆಗಿ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಪೊಲೀಸ್ ಉನ್ನತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನಗರದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ, ರೌಡಿಗಳ ವಿರುದ್ಧ ಬಂದೂಕು ಬಳಸಲು ಹಿಂಜರಿಯಬೇಡಿ ಎಂದು ರಾಮಲಿಂಗಾ ರೆಡ್ಡಿ ಅವರು ಸೂಚಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸಭೆ ಬಳಿಕ ಸುದ್ದಿಗಾರರೊಂದಿಗೆ ಸಭೆಯ ಮಾಹಿತಿ ಹಂಚಿಕೊಂಡ ರಾಮಲಿಂಗಾರೆಡ್ಡಿ ಅವರು, ಮಟ್ಕಾ ಮತ್ತು ಹುಕ್ಕಾ ಬಾರ್‌ಗಳು, ರೌಡಿಗಳ ಉಪಟಳವನ್ನು ನಿಲ್ಲಿಸಲು ಕಠಿಣ ಕ್ರಮಗಳನ್ನು ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿ

ಕದ್ದ ಮಾಲು ಖರೀದಿಸುವವರ ವಿರುದ್ಧ ಕ್ರಮ

ಕದ್ದ ಮಾಲು ಖರೀದಿಸುವವರ ವಿರುದ್ಧ ಕ್ರಮ

ಬಾರ್, ರೆಸ್ಟೋರೆಂಟ್‌ಗಳನ್ನು ನಿಗದಿತ ಸಮಯದೊಳಗೆ ಬಾಗಿಲು ಮುಚ್ಚಿಸಬೇಕು. ವಿದೇಶಿ ಪ್ರಜೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ಕದ್ದ ಮಾಲುಗಳನ್ನು ಖರೀದಿ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದ ಅವರು, ಕಾಲೇಜುಗಳ ಬಳಿ ನಿಗದಿತವಾಗಿ ಪೊಲೀಸರು ಗಸ್ತು ತಿರುಗುವಂತೆ ಆದೇಶಿಸಿದ್ದೇನೆ' ಎಂದರು.v

ಬಡ್ಡಿಕೋರರ ಮೇಲೆ ಕಠಿಣ ಕ್ರಮ

ಬಡ್ಡಿಕೋರರ ಮೇಲೆ ಕಠಿಣ ಕ್ರಮ

ಹುಕ್ಕಾ ಬಾರ್‌ಗಳನ್ನು ಮುಚ್ಚಿಸಿದರೆ ನ್ಯಾಯಾಲಯಕ್ಕೆ ಹೋಗಿ ತಡೆ ಆಜ್ಞೆ ತರುತ್ತಿದ್ದಾರೆ, ಹಾಗಾಗಿ ಅವರ ನಿಯಂತ್ರಣಕ್ಕೆ ವಿಶೇಷ ಕಾನೂನಿನ ಅಗತ್ಯವಿದೆ ಎಂದ ಅವರು, ನಗರದಲ್ಲಿ ಬಡ್ಡಿಕೋರರ ಉಪಟಳವೂ ಹೆಚ್ಚಾಗಿದ್ದು, ಅವರ ನಿಯಂತ್ರಣಕ್ಕೆ ಒತ್ತು ನೀಡುವಂತೆ ಸೂಚಿಸಿದ್ದೇನೆ ಎಂದರು.

ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ಹೊಸ ನೇಮಕಾತಿ ಆಗಿಲ್ಲ

ಹೊಸ ನೇಮಕಾತಿ ಆಗಿಲ್ಲ

ಆರ್ಡರ್ಲಿ ಪದ್ಧತಿ ಬಗ್ಗೆ ಮಾತನಾಡಿದ ಅವರು ಜಿ.ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗ ಆರ್ಡರ್ಲಿ ಪದ್ಧತಿ ರದ್ದು ಮಾಡಿದರು ಆದರೆ ಇನ್ನೂ ಹೊಸ ನೇಮಕಾತಿಗಳು ಆಗದೇ ಇರುವ ಕಾರಣ ಇನ್ನೂ ಆರ್ಡರ್ಲಿ ಪದ್ಧತಿ ಮುಂದುವರೆದಿದೆ ಎಂದು ಅವರು ಹೇಳಿದರು.

ಬಿಜೆಪಿ ಅವಧಿಯಲ್ಲಿ 1160 ಕೊಲೆ

ಬಿಜೆಪಿ ಅವಧಿಯಲ್ಲಿ 1160 ಕೊಲೆ

ಬಿಜೆಪಿ ಅವಧಿಗೆ ಹೋಲಿಸಿದರೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ನಗರದಲ್ಲಿ ಅಪರಾಧ ಪ್ರಕರಣ ಕಡಿಮೆ ಆಗಿದೆ ಎಂದ ಅವರು , ಬಿಜೆಪಿ ಅವಧಿಯಲ್ಲಿ ನಗರದಲ್ಲಿ 1160 ಕೊಲೆ ಪ್ರಕರಣಗಳು ದಾಖಲಾಗಿದ್ದವು. ನಮ್ಮ ಅವಧಿಯಲ್ಲಿ 998 ಕೊಲೆ ಪ್ರಕರಣ ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆ ಆಗಿವೆ ಎಂದರು.

ಬಿಜೆಪಿ ಅವಧಿಯಲ್ಲಿ 3 ಕಡೆ ಬಾಂಬ್ ಸ್ಪೋಟ

ಬಿಜೆಪಿ ಅವಧಿಯಲ್ಲಿ 3 ಕಡೆ ಬಾಂಬ್ ಸ್ಪೋಟ

ಬಿಜೆಪಿ ಅವಧಿಯಲ್ಲಿ ನಗರದ ಮೂರು ಕಡೆ ಬಾಂಬ್‌ ಸ್ಪೋಟವಾಯಿತು. ಚರ್ಚ್‌ಗಳ ಮೆಲೆ ದಾಳಿ ಆಯಿತು. ವಿವಿಧ ರಾಜ್ಯಗಳ ವಿಶೇಷವಾಗಿ ಈಶಾನ್ಯ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರ ಬಿಟ್ಟು ಹೋದರು. ಈ ರೀತಿಯ ಸ್ಥಿತಿ ನಮ್ಮ ಅವಧಿಯಲ್ಲಿ ಇಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

English summary
Karnataka Home minister Ramalinga Reddy order police to use guns against rowdies. He talked in Police officers meeting in Bengaluru held yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X