ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಲಪಾಡ್ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಾಗಿ ಹುಡುಕಾಟ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 07: ಮೊಹಮ್ಮದ್ ನಲಪಾಡ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಶ್ರೀಕೃಷ್ಣ ಅವರಿಗಾಗಿ ಪೊಲೀಸರು ಲುಕೌಟ್ ನೊಟೀಸ್ ಜಾರಿ ಮಾಡಿದ್ದಾರೆ.

ವಿದ್ವತ್ ಮೇಲೆ ಹಲ್ಲೆ ಸಂಬಂಧ ಮೊಹಮ್ಮದ್ ನಲಪಾಡ್ ಸೇರಿ 8 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು, ಆದರೆ ಏಳು ಜನ ಮಾತ್ರ ಪೊಲೀಸರಿಗೆ ಶರಣಾಗಿದ್ದು, ಮತ್ತೊಬ್ಬ ಆರೋಪಿ ಶ್ರೀಕೃಷ್ಣ ತಲೆಮರೆಸಿಕೊಂಡಿದ್ದಾನೆ ಪೊಲೀಸರಿಗೆ ಇನ್ನೂ ಈತನ ಸುಳಿವು ಪತ್ತೆ ಆಗಿಲ್ಲ. ಮೊಹಮ್ಮದ್ ನಲಪಾಡ್ ಜೊತೆಗೆ ಆತನ ಸಹಚರರಾದ ಅರುಣ್ ಬಾಬು, ಮಂಜುನಾಥ, ಅಶ್ರಪ್‌, ಬಾಲಕೃಷ್ಣ, ಅಭಿಷೇಕ್, ನಾಸಿರ್ ಅವರುಗಳು ಪೊಲೀಸರಿಗೆ ಶರಣಾಗಿದ್ದರು.

ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮೊಹಮ್ಮದ್ ನಲಪಾಡ್‌ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮೊಹಮ್ಮದ್ ನಲಪಾಡ್‌

ಶ್ರೀಕೃಷ್ಣ ಮೊಬೈಲ್, ಕಂಪ್ಯೂಟರ್ ಬಳಸುವುದರಲ್ಲಿ ಪರಿಣಿತನಾಗಿದ್ದು, ಹ್ಯಾಕಿಂಗ್ ಕಲೆ ಕೂಡ ತಿಳಿದವನಾಗಿದ್ದಾನೆ ಎನ್ನಲಾಗಿದೆ. ಈತ 2014ರಿಂದಲೂ ಮೊಬೈಲ್ ಬಳಸುತ್ತಿಲ್ಲವಾದ್ದರಿಂದ ಈತನ ಸುಳಿವು ಸಿಗುವುದು ಕಷ್ಟಕರವಾಗಿದೆ ಎನ್ನಲಾಗಿದೆ. ಈತ ವಿದೇಶಕ್ಕೆ ಹಾರಿರುವ ಶಂಕೆ ಇದ್ದು, ಈತನ ಮೇಲೆ ಲುಕ್‌ಔಟ್ ನೊಟೀಸ್ ಜಾರಿ ಮಾಡಲಾಗಿದೆ.

police searching for Srikrishna who is accused in Nalapad case

ಇಂದು ನಲಪಾಡ್ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದ್ದು, ಹಿರಿಯ ವಕೀಲ C.V.ನಾಗೇಶ್ ಅವರು ನಲಪಾಡ್ ಪರ ವಾದ ಮಂಡಿಸಲಿದ್ದಾರೆ.

ಮೊಹಮ್ಮದ್ ಹ್ಯಾರಿಸ್ ನಲಪಾಡ್, ಯಾರೀತ? ಇಲ್ಲಿದೆ ಇವರ ಸಣ್ಣ ಪರಿಚಯಮೊಹಮ್ಮದ್ ಹ್ಯಾರಿಸ್ ನಲಪಾಡ್, ಯಾರೀತ? ಇಲ್ಲಿದೆ ಇವರ ಸಣ್ಣ ಪರಿಚಯ

English summary
Police issued look out notice in search of Sri Krishna who is accused in Mohammad Nalapad case. Police doubted that may Krishna escaped to foreign countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X