ನ.27 ರಂದು ಬೆಂಗಳೂರಿನಲ್ಲಿ 'ಪೊಲೀಸ್ ಸಾಹಿತ್ಯ ಸಂಭ್ರಮ'

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಭದ್ರತೆಯ ಭರವಸೆ ನೀಡುವ ಒರಟು ಭಾಷೆ, ನಡೆಯ ಪೊಲೀಸರ ಆಂತರ್ಯದಲ್ಲಿ ಮೃದುವಾದ ಸೃಜನಶೀಲ ಮನಸ್ಥಿತಿಯಿದೆ. ವೃತ್ತಿ ಸಹಜವಾಗಿ ಅಗತ್ಯವಿರುವ ಗಾಂಭೀರ್ಯವನ್ನು ಮುಖದ ಮೇಲೆ ಮೇಳೈಸಿಕೊಂಡಿದ್ದರೂ, ಮನಸ್ಸೊಳಗೆ ಹೇಳದೆ ಉಳಿದ ಮಾತುಗಳು ಹಲವವಿವೆ. ಅವಕ್ಕೆಲ್ಲ ಒಂದು ವೇದಿಕೆಯಾಗಿದೆ ಪೊಲೀಸ್ ಸಾಹಿತ್ಯ ಸಂಭ್ರಮ!

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳ ಪಟ್ಟಿ

Police Sahitya Sambhara by Bengaluru police on Nov.27th

ಕನ್ನಡ ರಾಜ್ಯೋತ್ಸವದ ನಿಮಿತ್ತ ನ.27 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4.30ಕ್ಕೆ ಪೊಲೀಸ್ ಸಾಹಿತ್ಯ ಸಂಭ್ರಮ ನಡೆಯಲಿದೆ. ತನ್ನಿಮಿತ್ತ ಕವಿಗೋಷ್ಠಿ ಮತ್ತು ಡಾ.ಡಿಸಿ ರಾಜಪ್ಪರವರ ಸಂಪಾದಿತ 'ಸಮವಸ್ತ್ರದೊಳಗೊಂದು ಸುತ್ತು-ಸಂಪುಟ 4' ಪುಸ್ತಕ ಬಿಡುಗಡೆಗೊಳ್ಳಲಿದೆ.

ರಾಜ್ಯ ಪೊಲೀಸರಿಗೆ ಒಲಿದು ಬಂದ 'ಆರೋಗ್ಯ ಭಾಗ್ಯ'

ಕಾರ್ಯಕ್ರಮದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ನಡೆಸಿಕೊಡಲಿದ್ದಾರೆ. ಪುಸ್ತಕದ ಕುರಿತು ಕವಿ, ಚಂದ್ರಶೇಖರ ತಾಳ್ಯ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಡಿಜಿ, ಐಜಿಪಿ ನೀಲಮಣಿ ಎನ್ ರಾಜು ಅವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.

ರಾಜ್ಯ ಮಟ್ಟದ 4 ನೇ ಪೊಲೀಸ್ ಕವಿಗೋಷ್ಠಿಯನ್ನು ಖ್ಯಾತ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಉದ್ಘಾಟಿಸಲಿದ್ದು, ನಿವೃತ್ತ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಹ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police Sahitya a Sambhrama, a Kannada literary fest for police is organised by Bengaluru police. The programme will be taking place on Novemebr 27th, in Ravindra Kalakshetra, Bengaluru at 4.30 PM.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ