ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಪ್ಪು ಪಲ್ಸರ್, ಒಂಟಿಯಾಗಿ ಸರಗಳ್ಳತನ, ಇದು ಚಿನ್ನದ 'ಗಣಿ' ಕಥೆ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 07 : ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್‌ನಿಂದ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂನ್ ತಿಂಗಳಿನಲ್ಲಿ ಪೊಲೀಸರು ಅಚ್ಯುತ್ ಕುಮಾರ್ ಬಂಧಿಸಿದ್ದರು.

ಅಚ್ಯುತ್ ಕುಮಾರ್ ಅಲಿಯಾಸ್ ಗಣಿ ವಿರುದ್ಧ ಬೆಂಗಳೂರಿನಲ್ಲಿಯೇ 70 ಸರಗಳ್ಳತನ ಪ್ರಕರಣ ದಾಖಲಾಗಿತ್ತು. ರಾಜ್ಯದ ಇತರ ಜಿಲ್ಲೆಗಳೂ ಸೇರಿ 105 ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.

ಸರಗಳ್ಳನನ್ನು ಹಿಡಿದಿದ್ದ ಚಂದ್ರಕುಮಾರ್‌ಗೆ ಸನ್ಮಾನ, ಉಡುಗೊರೆಸರಗಳ್ಳನನ್ನು ಹಿಡಿದಿದ್ದ ಚಂದ್ರಕುಮಾರ್‌ಗೆ ಸನ್ಮಾನ, ಉಡುಗೊರೆ

ಜೂನ್ 17ರಂದು ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಯುತ್ ಕುಮಾರ ಬಂಧಿಸಲಾಗಿತ್ತು. ಪೊಲೀಸರು ಬಂಧಿಸಲು ಹೋದಾಗ ಅವರ ಮೇಲೆ ದಾಳಿ ನಡೆಸಿದ್ದ, ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Police recovers 3 kg of gold from chain snatcher Achyut Kumar

ಈಗ ಚೇತರಿಸಿಕೊಂಡಿರುವ ಅಚ್ಯುತ್ ಕುಮಾರ್ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಆತನಿಂದ 1 ಕೋಟಿಗೂ ಹೆಚ್ಚು ಬೆಲೆಬಾಳುವ ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಂಟಿಯಾಗಿ ಸರಗಳ್ಳತನ ಮಾಡುತ್ತಿದ್ದ ಈತ, ಕದ್ದ ಸರವನ್ನು ಗವಿ ಸಿದ್ದೇಶ ಎಂಬುವವರ ಬಳಿ ಅಡವಿಡುತ್ತಿದ್ದನು.

ಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮುಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮು

ಅಚ್ಯುತ್ ಕುಮಾರ್ ಬಂಧಿಸಿದ ಪೊಲೀಸರು ಆತ ನೀಡಿದ ಮಾಹಿತಿಯಂತೆ ಗವಿ ಸಿದ್ದೇಶನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈತ ವಿಚಾರಣೆ ವೇಳೆ ಬೆಂಗಳೂರು, ತುಮಕೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆತ ಸರಗಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪೇದೆಗೆ ಬಹುಮಾನ : ಜೂನ್ 17ರ ರಾತ್ರಿ ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಅವರನ್ನು ಬೈಕ್ ಹಿಂಬಾಲಿಸಿದ್ದ ಚಂದ್ರಕುಮಾರ್ ಬೈಕ್‌ಗೆ ಡಿಕ್ಕಿ ಹೊಡೆದು ಅಚ್ಯುತ್ ಕುಮಾರ್ ಕೆಳಗೆ ಬೀಳಿಸಿ ಅವರನ್ನು ಬಂಧಿಸಿ ಸಾಹಸ ಮೆರೆದಿದ್ದರು. ಇದಕ್ಕಾಗಿ ಅವರಿಗೆ ಬಹುಮಾನವನ್ನು ನೀಡಲಾಗಿದೆ.

English summary
Bengaluru police recovered 3 kg of gold worth of Rs 1.06 crore from the notorious chain-snatcher Achyut Kumar. He is arrested in the month of June, he involved in more than 150 chain snatching case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X