ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪಬ್‌ ಮೇಲೆ ದಾಳಿ: 32 ಮಹಿಳೆಯರ ರಕ್ಷಣೆ

By Nayana
|
Google Oneindia Kannada News

ಬೆಂಗಳೂರು, ಜು.4: ಪೊಲೀಸರು ಪಬ್‌ ಒಂದರ ಮೇಲೆ ದಾಳಿ ನಡೆಸಿ 32 ಮಹಿಳೆಯರನ್ನು ರಕ್ಷಣೆ ಮಾಡಿರುವ ಘಟನೆ ಬುಧವಾರ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ಇಂದಿರಾನಗರದ 80 ಅಡಿ ರಸ್ತೆಯಲ್ಲಿರುವ ಪಬ್‌ ಮೇಲೆ ಪೊಲೀಸರು ದಾಳಿ ನಡೆಸಿ ಅಶ್ಲೀಲವಾಗಿ ವರ್ತಿಸುತ್ತಿದ್ದ, 32 ಮಹಿಳೆಯರನ್ನು ರಕ್ಷಿಸಿದ್ದಾರೆ. ಪಬ್‌ ಮತ್ತು ಬಾರ್‌ಗಳಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ಡ್ರೆಸ್‌ಕೋಡ್‌ ನಿಗದಿಯಾಗಿದ್ದರೂ ಕೆಲವು ಪಬ್‌ಗಳಲ್ಲಿ ಮಹಿಳೆಯರನ್ನು ಅಶ್ಲೀಲ ನೃತ್ಯಕ್ಕೆ ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೀವನ್‌ಭೀಮಾ ನಗರ ಪೊಲೀಶರು ದಾಳಿ ನಡೆಸಿ ಅಶ್ಲೀಲ ನೃತ್ಯಕ್ಕೆ ಬಳಸಲಾಗುತ್ತಿದ್ದ 32 ಮಹಿಳೆಯರನ್ನು ರಕ್ಷಿಸಿದ್ದಾರಲ್ಲದೆ ಪಬ್‌ ವ್ಯವಸ್ಥಾ ಮಂಡಳಿಯ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌

ಈ ಕುರಿತು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರ ಪಬ್‌ ದಾಳಿ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಿಸಿಪಿ ಅಜಯ್‌ ಹಿಲೋರಿ ಟ್ವೀಟ್‌ ಮಾಡಿರುವ ಬೆನ್ನಲ್ಲೇ ಹಲವಾರು ಜನರು ಪ್ರತಿಕ್ರಿಯೆ ನೀಡಿ ಬೆಂಗಳೂರಲ್ಲಿ ಪದೇ ಪದೇ ಈ ರೀತಿಯ ದಾಳಿಗಳು ನಡೆಯುತ್ತಿದ್ದರೂ ಪಬ್‌ ಗಳಲ್ಲಿ ಅವ್ಯಾಹತವಾಗಿ ಮಹಿಳೆಯರ ದುರ್ಬಳಕೆ ಮುಂದುವರೆದಿದೆ ಎಂದು ದೂರಿದ್ದರೆ ಇನ್ನು ಕೆಲವರು ಪಬ್‌ ಮತ್ತು ಡ್ಯಾನ್ಸ್‌ ಬಾರ್‌ಗಳ ಮೇಲೆ ನಡೆಯುವ ದಾಳಿಗಳು ಹೆಚ್ಚು ಪಾವದರ್ಶಕವಾಗಿರಬೇಕು.

Police raided pub in Indira Nagar and rescued 32 women

ಈ ಮಹಿಳೆಯರು ತಮ್ಮ ಉಪ ಜೀವನಕ್ಕಾಗಿ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದು, ಅವರನ್ನು ಒತ್ತಾಯಪೂರ್ವಕವಾಗಿ ತೊಡಗಿಸಲಾಗಿದೆ ಎಂಬುದಕ್ಕೆ ಯಾವುದೇ ಆಧಾರವಿರುವುದಿಲ್ಲ, ಆದಾಗ್ಯೂ ಪೊಲೀಸರು ಬಾರ್‌ ಮಾಲೀಕರ ಮೇಲೆ ದೌರ್ಜನ್ಯವೆಸಗಲು ಈ ರೀತಿಯ ದಾಳಿಗಳನ್ನು ನಡೆಸುತ್ತಾರೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಾರ್ವಜನಿಕರ ವಿರೋಧಾಭಾಸದ ಹೇಳಿಕೆಗಳಿಗೆ ಪೊಲೀಸ್‌ ಇಲಾಖೆ ಯಾವುದೇ ಉತ್ತರ ನೀಡಿಲ್ಲ

English summary
JB Nagar police have raided a pub in Indira Nagar and rescued 32 women who were dressed indecently and also booked case against six persons of pub management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X