ಬಾಡಿ ಟು ಬಾಡಿ, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಬೆಂಗಳೂರಿನ ಇಂದಿರಾನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಸಿಯಾ, ಹೊಸದುರ್ಗ ತಾಲೂಕಿನ ಮಹೇಶ್ವರಪ್ಪ, ಕೆ.ಜಿ.ಹಳ್ಳಿಯ ಹಿಮಾಯಿತ್ ಉಲ್ಲಾ, ಜೆ.ಪಿ.ನಗರದ ರಾಣೇಶ್ ರಾಯ್, ತಿರುಪೂರ್ ಎಲ್ ಐಸಿ ಕಾಲೋನಿಯ ವೈದೀಶ್ವರನ್ ಬಂಧಿತರು.

ಇಂದಿರಾನಗರದಲ್ಲಿ ಅರೋಮಾ ಸ್ಪಾ ಅಂಡ್ ಸಲೂನ್ ಹೆಸರಿನಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದರು. ಅಲ್ಲಿ ಬಾಡಿ ಟು ಬಾಡಿ, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್ ಎಂಬ ಲೈಂಗಿಕ ಚಟುವಟಿಕೆಗೆ ಅನುವು ಮಾಡಿಕೊಡುತ್ತಿದ್ದರು.

Police raid massage parlour: arrest five pimps, Bengaluru

ಆರೋಪಿಗಳಿಂದ 9 ಮೊಬೈಲ್ ಫೋನ್, 20 ಸಾವಿರ ನಗದು, ಸ್ವೈಪಿಂಗ್ ಮಷಿನ್, ಕಾಂಡೋಮ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳದ ಇಬ್ಬರು, ಮಹಾರಾಷ್ಟ್ರ ಹಾಗೂ ಕರ್ನಾಟಕದ ತಲಾ ಒಬ್ಬ ಹುಡುಗಿಯನ್ನು ರಕ್ಷಣೆ ಮಾಡಲಾಗಿದೆ.

ಮುನೀಂದ್ರ ಕುಮಾರ್ ಎಂಬಾತ ಮಸಾಜ್ ಪಾರ್ಲರ್ ಮಾಲೀಕ. ಕೆಲಸ ಹುಡುಕಿಕೊಂಡು ಬಂದ ನಮ್ಮನ್ನ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಪುಸಲಾಯಿಸಿ, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡಿದ. ಸಂಪಾದನೆಯಾದ ಹಣದಲ್ಲಿ ಆರೋಪಿಗಳೇ ಹೆಚ್ಚಿನ ಹಣ ಪಡೆದು, ನಮಗೆ ಕಡಿಮೆ ಹಣ ನೀಡುತ್ತಿದ್ದರು ಎಂದು ಹುಡುಗಿಯರು ಪೊಲೀಸರಿಗೆ ತಿಳಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಮುನೀಂದ್ರ ಕುಮಾರ್, ಸಿಂಗಾರವೇಲು, ರವಿ ಎಂಬುವರ ವಿರುದ್ಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Indira nagar police raid massage parlour and arrest five including woman. Booked prostitution case.
Please Wait while comments are loading...