ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾನಗರದ 30 ಪಬ್‌ಗಳ ಮ್ಯೂಸಿಕ್‌ ಮ್ಯೂಟ್‌

By Nayana
|
Google Oneindia Kannada News

Recommended Video

ಇಂದಿರಾನಗರದ 30 ಪಬ್ ಗಳ ಸಂಗೀತವನ್ನ ಮ್ಯೂಟ್ ಮಾಡಿದ ಪೊಲೀಸ್ | Oneindia Kannada

ಬೆಂಗಳೂರು, ಜು.14: ಇಂದಿರಾನಗರದಲ್ಲಿರುವ 30 ಪಬ್‌ಗಳ ಮ್ಯೂಸಿಕ್‌ನ್ನು ಪೊಲೀಸರು ಮ್ಯೂಟ್‌ ಮಾಡಿಸಿದ್ದಾರೆ, ಇದಕ್ಕೂ ಕಾರಣ ಇದೆ ಹೊರಗಡೆ ಸದ್ದು ಕೇಳಿಸುವ ಸಂಗೀತದಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದಿರಾನಗರದ 30 ಪಬ್‌ಗಳಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಈ ಆದೇಶ ನಗರದ ಎಲ್ಲ ಪಬ್‌ಗಳಿಗೂ ಅನ್ವಯವಾಗಲಿದ್ದು, ಪರವಾನಗಿ ಇಲ್ಲದೆ ಯಾರೂ ಸಂಗೀತ ಕೇಳಿಸುವಂತಿಲ್ಲ, 2005ರಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ ನೀಡಲಾಗಿರುವ ನೋಟಿಸ್‌ನಲ್ಲಿ ಸಾರ್ವಜನಿಕ ಮನೋರಂಜನಾ ಸ್ಥಳ ನಡೆಸಲು ಪಡೆದಿರುವ ಪರವಾನಗಿಯನ್ನು ಪೊಲೀಸ್‌ ಇಲಾಖೆ ಹಾಜರುಪಡಿಸಬೇಕು.

ಲೈವ್‌ ಬ್ಯಾಂಡ್‌ ರದ್ದು: ಹೈಕೋರ್ಟ್‌ ವಿಚಾರಣೆ ಲೈವ್‌ ಬ್ಯಾಂಡ್‌ ರದ್ದು: ಹೈಕೋರ್ಟ್‌ ವಿಚಾರಣೆ

ಸಾಕಷ್ಟು ಕಾಲಾವಕಾಶವನ್ನು ನೀಡಿದ್ದರೂ ಕೂಡ ನಿಮ್ಮ ರೆಸ್ಟೋರೆಂಟ್‌ನಲ್ಲಿ ಲೈವ್‌ ಬ್ಯಾಂಡ್‌ ನಡೆಸಲು ಪರವಾನಗಿ ಯನ್ನು ಪಡೆದುಕೊಳ್ಳಲು ವಿಫಲರಾಗಿದ್ದೀರಿ, ಹೀಗಾಗಿ ನೋಟಿಸ್‌ ಸ್ವೀಕೃತವಾದ ದಿನದಿಂದಲೇ ಲೈವ್‌ ಬ್ಯಾಂಡ್‌ ಪ್ರದರ್ಶನ ರದ್ದು ಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Police muted music in Indira Nagar pubs

2018ರ ಜನವರಿಯಲ್ಲಿ ಬೆಂಗಳೂರು ನಗರ ಪೊಲೀಸರ ಸಾರ್ವಜನಿಕ ಮನೋರಂಜನೆ ಸ್ಥಳದ ನಿಯಂತ್ರಣ ಮತ್ತು ಪರವಾನಗಿ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿತ್ತು. ಲೈವ್‌ ಬ್ಯಾಂಡ್‌ ಇಲ್ಲದ ಕಾರಣ ಸಾಕಷ್ಟು ಪಬ್‌ಗಳಲ್ಲಿ ಈಗಾಗಲೇ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂಸದ ಪರವಾನಗಿ ಪಡೆದು ನಿಯಮಾನುಸಾರ ಲೈವ್‌ ಬ್ಯಾಂಡ್‌ ನಡೆಸಲು ಯಾವುದೇ ಅಡೆತಡೆ ಇರುವುದಿಲ್ಲ.

English summary
Bengaluru police have muted music in 30 pubs of A Indira Nagar and surrounding areas which was strongly opposed by residents of the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X