ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಲೈವ್‌ಬ್ಯಾಂಡ್‌ ಮೇಲೆ ಪೊಲೀಸರ ಹದ್ದಿನ ಕಣ್ಣು

By Nayana
|
Google Oneindia Kannada News

ಬೆಂಗಳೂರು, ಜೂನ್ 10: ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಾರ್ಗಸೂಚಿ ಉಲ್ಲಂಘಿಸುವ ಲೈವ್‌ ಬ್ಯಾಂಡ್‌ಗಳನ್ನು ಬಂದ್ ಮಾಡುವಂತೆ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಎಲ್ಲಾ ಲೈವ್‌ ಬ್ಯಾಂಡ್‌ಗಳು ಕಾರ್ಯನಿರ್ವಹಿಸಬೇಕಾಗುತ್ತದೆ, ನಿಯಮವನ್ನು ಗಾಳಿಗೆ ತೂರುವ ಬ್ಯಾಂಡ್ ಮಾಲೀಕರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸುಪ್ರೀಂಕೋರ್ಟ್ ಸೂಚಿಸಿರುವ ಲೈವ್ ಬ್ಯಾಂಡ್‌ಗಳ ಮಾರ್ಗಸೂಚಿಯನ್ನು ಜಾರಿಗೆ ತರುವಂತೆ ಎಲ್ಲ ಡಿಸಿಪಿಗಳಿಗೆ ಸೂಚಿಸಿದ್ದೇವೆ, ಡಿಸಿಪಿಗಳು ಲೈವ್ ಬ್ಯಾಂಡ್ ಮಾಲೀಕರ ಜತೆ ಸಭೆ ನಡೆಸಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

Police eagle eye on live bands in Bengaluru

ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ, ಲೈವ್ ಬ್ಯಾಂಡ್‌ನ ಪರಿಚಾರಕಿಯರು ಅಶ್ಲೀಲ ನೃತ್ಯ ಪ್ರದರ್ಶನ ಮಾಡುವಂತಿಲ್ಲ, ಪುರುಷ ಗ್ರಾಹಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು. ಪರಿಚಾರಕಿಯರು ಸಮವಸ್ತ್ರ ಧರಿಸಿರಬೇಕು ಹಾಗೂ ಪರಿಚಾರಕಿಯರ ಮೇಲೆ ನೋಟುಗಳನ್ನು ತೂರುವಂತಿಲ್ಲ, ಪರಿಚಾರಕಿಯರ ಸುರಕ್ಷತೆ ದೃಷ್ಟಿಯಿಂದ ಅವರಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು ಇನ್ನು ಹಲವು ನಿಯಮಗಳನ್ನು ಇರಿಸಲಾಗಿದೆ.

ಸುರಕ್ಷತಾ ನಿಯಮ ಪಾಲಿಸದ ರೂಫ್ ಟಾಪ್ ಬಾರ್ ಗಳ ಪಟ್ಟಿ ಶೀಘ್ರ ಬಿಡುಗಡೆಸುರಕ್ಷತಾ ನಿಯಮ ಪಾಲಿಸದ ರೂಫ್ ಟಾಪ್ ಬಾರ್ ಗಳ ಪಟ್ಟಿ ಶೀಘ್ರ ಬಿಡುಗಡೆ

ಮುಂಬೈ ಸೇರಿ ದೇಶದ ವಿವಿಧ ನಗರಗಳಲ್ಲಿ ಲೈವ್ ಬ್ಯಾಂಡ್ಗಳ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಲೈವ್ ಬ್ಯಾಂಡ್ ಮಾಲೀಕರಿಗೆ ಸೂಚಿಸಿ ಮಾರ್ಚ್‌ನಲ್ಲಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಲೈವ್ ಬ್ಯಾಂಡ್‌ಗಳ ಮೇಲೆ ನಿಗಾವಹಿಸಲು ಪೊಲೀಸರು ಮುಂದಾಗಿದ್ದಾರೆ.

English summary
Bengaluru police commissioner T.Sunil Kumar has issued a circular that to take strict action on live bands which are violating supreme court guide lines. It was said that illegal live bands also been warned to shutdown immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X