ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಣಿಕ್‌ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ: ಪೊಲೀಸರ ಹದ್ದಿನ ಕಣ್ಣು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಗ್ರೌಂಡ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಮೈದಾನದ ಬಿಗಿ ಭದ್ರತೆ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌ ಹಾಗೂ ಬೆಂಗಳೂರು ಪೊಲೀಸ್‌ ಕಮಿಷನರ್‌ ಸುನೀಲ್‌ ಕುಮಾರ್‌ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು.

ಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿ ಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿ

ಸ್ವಾಂತಂತ್ರ್ಯ ದಿನಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯಂತೆ ನಿಗಾವಹಿಸಲು ಭಾರಿ ಪೊಲೀಸ್‌ ಭದ್ರತೆ ಕಲ್ಪಿಸಲಾಗುತ್ತಿದೆ. ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು, 9 ಡಿಸಿಪಿ, 16 ಎಸಿಪಿ, 46 ಇನ್‌ಸ್ಪೆಕ್ಟರ್‌ ಸೇರಿ 1500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ವಿಶೇಷ ಲೇಖನ : ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ? ವಿಶೇಷ ಲೇಖನ : ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ?

9 ಕೆಎಸ್‌ಆರ್‌ಪಿ, 05 ಕಾರ್‌ ತುಕರಿ, 3 ಅಗ್ನಿಶಾಮಕ, 2 ಆಂಬ್ಯೂಲೆನ್ಸ್‌, 2 ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಲಾಗಿದೆ. ಮೈದಾನದಲ್ಲಿ 50 ಸಿಸಿಟಿವಿ ಕ್ಯಾಮರಾಗಳು, 4 ಬ್ಯಾಗೇಜ್‌ ಸ್ಕ್ಯಾನರ್‌ ಅಳವಡಿಸಲಾಗುತ್ತಿದೆ. ಗಣ್ಯ ವ್ಯಕ್ತಿಗಳಿಗಾಗಿ 1200 ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯವರಿಗಾಗಿ 750 ಆಸನಗಳು, ಇತರೆ ಇಲಾಖೆ, ನಿವೃತ್ತ ಸೇನಾಧಿಕಾರಿಗಳಿಗೆ 2500 ಆಸನಗಳು, ಸಾರ್ವಜನಿಕರಿಗಾಗು 7 ಸಾವಿರ ಆಸನಗಳನ್ನು ಮೀಸಲಿರಿಸಲಾಗಿದೆ.

Police eagle eye on I-Day celebration manekshaw ground

ಶಸ್ತ್ರಾಸ್ತ್ರ, ಹರಿತವಾದ ವಸ್ತು, ಬಾಟಲಿಗಳು, ಕಪ್ಪು ಕರವಸ್ತ್ರ ತರುವಂತಿಲ್ಲ, ಈ ಬಾರಿ ಅಲ್ಪಸಂಖ್ಯಾತರು, ಎಚ್‌ಐವಿ ಪೀಡಿತರು, ಅನಾಥ ಮಕ್ಕಳು, ಬುದ್ಧಿಮಾಂದ್ಯರು, ಅಂಗವಿಕಲರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

English summary
Bengaluru police have deployed including 100 senior officials around 1500 staff for the security of Independence day celebration at Manekshaw parade ground on August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X