ವಿಧಾನಸೌಧದ ಸಿಎಂ ಕಚೇರಿಗೆ ನುಗ್ಗಿದ ವ್ಯಕ್ತಿ ಬಂಧನ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 12 : ಪೊಲೀಸರ ಕಣ್ತಪ್ಪಿಸಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ನುಗ್ಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಭಾಸ್ಕರ್ ಆಗಂತುಕ. ಭಾಸ್ಕರ್​ ಪೊಲೀಸರಿಗೆ ಯಾಮಾರಿಸಿ 3ನೇ ಗೇಟ್ ಮೂಲಕ ಸಿಬ್ಬಂದಿ ಎಂದು ಹೇಳಿಕೊಂಡು ಬೈಕ್ ನಲ್ಲಿ ಆವರಣದೊಳಗೆ ಪ್ರವೇಶ ಪಡೆದಿದ್ದಾನೆ. ಬಳಿಕ ದಕ್ಷಿಣ ಗೇಟ್ ಮೂಲಕ ವಿಧಾನಸೌಧದ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಅಲ್ಲಿಂದ ಮೂರನೇ ಮಹಡಿಯ ಸಿಎಂ ಕಚೇರಿ ಬಳಿ ಹೋಗಿದ್ದಾನೆ. ಡಾಗ್ ಸ್ಕ್ವಾಡ್ ಪರಿಶೀಲನೆ ವೇಳೆ ಸಿಎಂ ಕಚೇರಿಗೆ ಭಾಸ್ಕರ್ ನುಗ್ಗಿದ್ದಾನೆ.

Police detains suspected who rushed to CMO

ಪೊಲೀಸರಿಗೆ ಅನುಮಾನ ಬಂದು ವಶಕ್ಕೆ ಪಡೆದಿದ್ದಾರೆ. ವಿಧಾನಸೌಧದ ಪೊಲೀಸ್ ಇನ್ಸ್​ಪೆಕ್ಟರ್ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police have detained suspected who rushed into chief minister Siddaramaiah office at Third floor in Vidhana soudha. The suspected person entered Vidhana soudha from third gate and entered into soudha from South entrance. The police have identified suspect as Bhaskar from Tamilnadu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ