ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಗಳ್ಳನನ್ನು ಸಿನಿಮೀಯ ರೀತಿ ಚೇಸ್ ಮಾಡಿ ಹಿಡಿದ ಪೊಲೀಸರು

By Manjunatha
|
Google Oneindia Kannada News

ಬೆಂಗಳೂರು, ಜನವರಿ 19: ಮಹಿಳೆಯ ಚೈನ್ ಅನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗುತ್ತಿದ್ದ ಸರಗಳ್ಳನನ್ನು ಇಬ್ಬರು ಪೇದೆಗಳು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ.

ಮಂಗಳವಾರ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯೋರ್ವರ ಸರವನ್ನು ಕಿತ್ತುಕೊಂಡು ಕಳ್ಳ ಸೋಮಶೇಖರ್ ಕಾರಿನಲ್ಲಿ ಪರಾರಿಯಾಗಿದ್ದಾನೆ, ಕೂಡಲೇ ಮಹಿಳೆ ಪೊಲೀಸ್ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ ಕಾರಿನ ಮಾಹಿತಿ, ಕಾರು ಹೋದ ದಿಕ್ಕು ಹೇಳಿದ್ದಾಳೆ.

ಪೇದೆಗಳ ಮೇಲೆ ಹಲ್ಲೆ, ಬಂದೂಕು ಕಸಿದು ಪರಾರಿಪೇದೆಗಳ ಮೇಲೆ ಹಲ್ಲೆ, ಬಂದೂಕು ಕಸಿದು ಪರಾರಿ

ಮಹಿಳೆಯಿಂದ ಮಾಹಿತಿ ಪಡೆದ ಕಂಟ್ರೋಲ್ ರೂಮ್ ಪೊಲೀಸರು ಎಚ್.ಎಸ್.ಆರ್ ಬಡಾವಣೆಯಲ್ಲಿ ಬೀಟ್‌ನಲ್ಲಿದ್ದ ಪೇದೆಗಳಾದ ಮಹೇಶ್ ನಾಯಕ್ ಮತ್ತು ಬಸವೇಶ್ವರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೇದೆಗಳು ಕಾರನ್ನು ಪತ್ತೆ ಹಚ್ಚಿ ಅದರ ಬೆನ್ನುಹತ್ತಿದ್ದಾರೆ.

Police constables heroically chased and arrested a chain snatcher

ಬಹಳಾ ದೂರ ಬೆನ್ನುಹತ್ತಿದ ನಂತರ ಒಂದು ಘಟ್ಟದಲ್ಲಿ ಕಳ್ಳ ಕಾರಿನಿಂದ ಇಳಿದು ಮನೆ ಒಂದರ ಮೇಲೆ ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ, ಆದರೆ ಆತನ ಅದೃಷ್ಠ ಕೈಕೊಟ್ಟು ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಕಳ್ಳನನ್ನು ಬಂಧಿಸಲು ಹೋದಾಗ ಪ್ರತಿರೋಧ ವ್ಯಕ್ತಪಡಿಸಿದ ಕಳ್ಳ ಸೋಮಶೇಖರ್ ಇಬ್ಬರೂ ಪೇದೆಗಳನ್ನು ಗಾಯಗೊಳಿಸಿದ್ದಾನೆ. ಆದರೂ ಬಿಡದ ಪೇದೆಗಳು ಸೋಮಶೇಖರ್‌ನನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.

ಕಳ್ಳ ಸೋಮಶೇಖರ್ ಮುಂಚೆ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಆ ನಂತರ ಕೆಲಸಕ್ಕೆ ರಾಜಿನಾಮೆ ನೀಡಿ ಕಳ್ಳತನಕ್ಕೆ ಇಳಿದಿದ್ದ, ಎಚ್‌ಎಸ್‌ಆರ್ ಬಡಾವಣೆಯಲ್ಲಿ ಕಾರೊಂದನ್ನು ಕದ್ದು ಅದರ ಸಹಾಯದಿಂದ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ, ಆದರೆ ಇಬ್ಬರು ಪೊಲೀಸ್ ಪೇದೆಗಳ ಸಾಹಸಮಯ ಕಾರ್ಯಾಚಾರಣೆಯಿಂದಾಗಿ ಈಗ ಕಂಬಿ ಎಣಿಸುತ್ತಿದ್ದಾನೆ.

English summary
In HSR layout Police constables Mahesh Nayak and Basaveshwar heroically chased chain snatcher Somashekhar and manage to arrest him. Both constables and chain snatcher injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X