ಪೊಲೀಸ್ ಪೇದೆಗೆ ಚಾಕುವಿನಿಂದ ಇರಿತ, ಪ್ರಾಣಪಾಯದಿಂದ ಪಾರು

Posted By:
Subscribe to Oneindia Kannada

ಬೆಂಗಳೂರು,ಏಪ್ರಿಲ್,02: ಕೆಲವು ದಿನಗಳ ಹಿಂದೆಯಷ್ಟೇ ಕಳ್ಳನೊಬ್ಬ ಪೊಲೀಸ್ ಪೇದೆ ಮೇಲೆ ಕಾರು ಹರಿಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಕಳ್ಳ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.

ಅನುಮಾನ ಬಂದ ವ್ಯಕ್ತಿಗಳನ್ನು ಆಟೋದಲ್ಲಿ ಪೊಲೀಸ್ ಪೇದೆ ನಾಗರಾಜ್ ಕರೆದುಕೊಂಡು ಹೋಗುತ್ತಿರುವಾಗ ಆಟೋ ಚಾಲಕ ಮಂಜುನಾಥ್ ಸೇರಿದಂತೆ ಮೂವರು ಕಳ್ಳರು ನಾಗರಾಜ್ ಗೆ ಚಾಕುವಿನಿಂದ ಇರಿದು ಅವರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ ಘಟನೆ ಮಲ್ಲೇಶ್ವರ ಸಮೀಪದ ಮುನೇಶ್ವರ ಬ್ಲಾಕಿನಲ್ಲಿ ನಡೆದಿದೆ.[ಪೊಲೀಸ್ ಪೇದೆ ಮೇಲೆ ಕಾರು ಹರಿಸಿದ ಖತರ್ನಾಕ್ ಕಳ್ಳ]

Police constable injured, Thieves stabbed in knife, Bengaluru

ಏನಿದು ಘಟನೆ?

ಆಟೋ ಚಾಲಕ ಮಂಜುನಾಥ್ ಮತ್ತು ಇನ್ನಿಬ್ಬರು ಆರೋಪಿಗಳು ರಾತ್ರಿ 12 ಗಂಟೆಗೆ ಬ್ಯಾಟರಾಯನಪುರದಿಂದ ಆಟೋದಲ್ಲಿ ಬರುವಾಗ ಶಿವಪ್ರಕಾಶ್ ಎಂಬುವರ ಬಳಿ ಮೊಬೈಲ್ ಕಿತ್ತುಕೊಂಡು ವಿನಾಯಕ ವೃತ್ತದ ಬಳಿ ಬಂದಿದ್ದರು.

ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ರೇವಣ ಸಿದ್ದಪ್ಪ ಹಾಗೂ ನಾಗರಾಜ್ ಅವರಿಗೆ ಇವರ ಮೇಲೆ ಅನುಮಾನ ಮೂಡಿ ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡದ ಇವರನ್ನು ತಡೆದು ಅದೇ ಆಟೋದಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದರು.[ಇವರು ಹಗಲಿನಲ್ಲಿ ಸೆಲ್ಸ್ ಮನ್, ರಾತ್ರಿ ದರೋಡೆಕೋರರು]

ಆಟೋದಲ್ಲಿ ಹೋಗುತ್ತಿದ್ದ ವೇಳೆ ನಾಗರಾಜ್ ಅವರಿಗೆ ಚಾಕುವಿನಿಂದ ಕೈ ಮತ್ತು ತೊಡೆ ಭಾಗಕ್ಕೆ ಇರಿದಿದ್ದರು. ಬಳಿಕ ಅವರನ್ನು ಆಟೋದಿಂದ ತಳ್ಳಿ ಪರಾರಿಯಾಗಲು ಪ್ರಯತ್ನಿಸಿದ ಕಳ್ಳರನ್ನು ಹಿಂದೆ ಬೈಕಿನಲ್ಲಿ ಬರುತ್ತಿದ್ದ ಮತ್ತೊಬ್ಬ ಪೇದೆ ರೇವಣಸಿದ್ದಪ್ಪ ಅವರನ್ನು ಹಿಂಬಾಲಿಸಿ ಆಟೋ ಚಾಲಕ ಮಂಜುನಾಥ್ ರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಪರಾರಿಯಾಗಿದ್ದಾರೆ.[ಬೆಂಗಳೂರಲ್ಲಿ ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!]

ಇವರಿಬ್ಬರ ಶತಾಯಗತಾಯ ಪ್ರಯತ್ನಕ್ಕೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Police constable Nagaraj injured, Thieves auto driver Manjunath and more two persons stabbed in knife, Bengaluru.
Please Wait while comments are loading...