ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟರ್ ಮಂಜನ ಕೊಲೆ ಆರೋಪಿಗಳನ್ನು 24 ಗಂಟೆ ಒಳಗೆ ಬಂಧಿಸಿದ ಪೊಲೀಸರು

By Manjunatha
|
Google Oneindia Kannada News

ಬೆಂಗಳೂರು, ಜೂನ್ 22: ನಿನ್ನೆಯಷ್ಟೆ ರೌಡಿ ಶೀಟರ್ ವಾಟರ್‌ ಮಂಜನನ್ನು ಹಾಡುಹಗಲೆ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದು 24 ಗಂಟೆಗಳಾಗುವ ಮುಂಚೆಯೇ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದು, ಕಾರ್ಯಾಚರಣೆ ವೇಳೆ ಒಬ್ಬ ಆರೋಪಿಗೆ ಪೊಲೀಸರು ಗುಂಡು ಹೊಡೆದು ಗಾಯ ಮಾಡಿದ್ದಾರೆ.

ಬೆಂಗಳೂರು: ರೌಡಿ ಶೀಟರ್‌ ವಾಟರ್ ಮಂಜನ ಬರ್ಬರ ಹತ್ಯೆಬೆಂಗಳೂರು: ರೌಡಿ ಶೀಟರ್‌ ವಾಟರ್ ಮಂಜನ ಬರ್ಬರ ಹತ್ಯೆ

ವಾಟರ್‌ ಮಂಜನ ಕೊಲೆ ಮಾಡಿದ್ದ ಆರೋಪಿಗಳು ಬೆಂಗಳೂರು ಹೊರ ವಲಯದ ಅರಣ್ಯ ವಲಯದಲ್ಲಿ ಅಡಗಿಕೊಂಡಿದ್ದಾರೆಂಬ ಮಾಹಿತಿ ಪಡೆದ ಕೆ.ಆರ್.ಪುರಂ ಪೊಲೀಸರು ಅವರನ್ನು ಬಂಧಿಸಲು ತೆರಳಿದಾಗ ಆರೋಪಿಗಳು ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಪ್ರಾಣ ರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

Police arrested murder accused of Rowdy sheeter water Manja

ಮೂವರಲ್ಲಿ ಒಬ್ಬ ಆರೋಪಿ ಚರಣ್ ರಾಜ್ ಕಾಲಿಗೆ ಗುಂಡು ತಗುಲಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಘಟನೆಯಲ್ಲಿ ಕಾನ್ಸ್ಟೇಬಲ್ ಒಬ್ಬರ ಕೈಗೆ ಗಾಯವಾಗಿದೆ.

ನಿನ್ನೆಯಷ್ಟೆ ಕೆ.ಆರ್.ಪುರಂ ರೌಡಿ ಶೀಟರ್ ಆಗಿದ್ದ ವಾಟರ್ ಮಂಜ ಎಂಬತನನ್ನು ಹಳೆ ಮದ್ರಾಸು ರಸ್ತೆಯ ಹೊಟೆಲ್ ಒಂದರ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

English summary
KR Puram police arrested 3 accused of rowdy sheeter water Manja. police fired bullet on a accused who try to attack police. a police constable injured in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X