ತಲಘಟ್ಟಪುರ ಪೊಲೀಸರ ಬಲೆಗೆ ಬಿದ್ದ ನಕಲಿ ಪೊಲೀಸರು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18 : ಪೊಲೀಸರ ವೇಷ ಧರಿಸಿ ಅಮಾಯಕರನ್ನು ದೋಚುತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ವಿಭಾಗದ ಉಪಪೊಲೀಸ್ ಅಧಿಕಾರಿ ಶರಣಯ್ಯ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಪೊಲೀಸ್ ತಂಡ ಬಲೆ ಹೆಣೆದು ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ರಘು ಅಲಿಯಾಸ್ ಮಾಯಿಗಯ್ಯ(34), ದೊಡ್ಡಯ್ಯ ಅಲಿಯಾಸ್ ಶಿವಣ್ಣ (48), ಹರೀಶ ಅಲಿಯಾಸ್ ದೊಡ್ಡಯ್ಯ (31) ಇವರುಗಳನ್ನು ಸುಲಿಗೆ, ಬೆದರಿಕೆ ಆರೋಪದ ಮೇಲೆ ಬಂಧಿಸಲಾಗಿದೆ.

Police arrested extrortioners

ಮುಂಚೆ ಹೋಮ್ ಗಾರ್ಡ್ ಆಗಿದ್ದ ರಘು ಈ ಮುಂಚೆ ಕೆಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ದೊಡ್ಡಯ್ಯನನ್ನು ಜೈಲಿನಲ್ಲಿ ಭೇಟಿಯಾಗಿ ಪೊಲೀಸ್ ವೇಷದಲ್ಲಿ ಸುಲಿಗೆ ಮಾಡುವ ಐಡಿಯಾ ಮಾಡಿದ್ದಾನೆ. ಅದರಂತೆ ಚೆನ್ನಪಟ್ಟಣದಲ್ಲಿ ಪೊಲೀಸ್ ಸಮವಸ್ತ್ರ ಹೊಲೆಸಿಕೊಂಡು, ಸೆಕೆಂಡ್ ಹ್ಯಾಂಡ್ ಬುಲೆರೊ ಜೀಪೊಂದನ್ನು ಖರೀದಿಸಿ, ಸರ್ಕಾರಿ ವಾಹನಗಳಿಗರುವಂತೆ ನಕಲಿ ನಂಬರ್ ಪ್ಲೇಟ್ ಹಾಕಿ ವ್ಯವಸ್ಥಿತಿವಾಗಿ ಸುಲಿಗೆ ಮಾಡುತ್ತಿದ್ದರು ಇವರು.

ನೈಸ್ ರಸ್ತೆ, ಭನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆಯಂತಹಾ ನಗರದ ಹೊರವಲಯದಲ್ಲೇ ತಮ್ಮ ಅಪರಾಧ ಚಟುವಟಿಕೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಇವರು, ಒಂಟಿಯಾಗಿ ಸಂಚರಿಸುವ ಸಾರ್ವಜನಿಕರು, ಪ್ರೇಮಿಗಳನ್ನು ಗುರಿ ಮಾಡಿಕೊಳ್ಳುತ್ತಿದ್ದರು.

Police arrested extrortioners

ತಮ್ಮ ಸುಲಿಗೆಗೆ ಬಲಿಯಾಗುವವರಿಂದ ಒಡವೆ, ಹಣ, ವಾಹನಗಳನ್ನು ಸುಲಿಗೆ ಮಾಡುತ್ತಿದ್ದರು. ಬಲಿಪಶುಗಳು ಪೊಲೀಸರ ಮೇಲೆ ದೂರು ನೀಡಲು ಹೆದರುತ್ತಿದ್ದರಿಂದ ಇವರ ಕಾರ್ಯ ಬಹಳ ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿತ್ತು.

ಬಂಧಿತ ಆರೋಪಿಗಳಿಂದ 15 ಲಕ್ಷ ಬೆಲೆ ಬಾಳುವ 500 ಗ್ರಾಂ ಚಿನ್ನ, 3.99 ಲಕ್ಷ ನಗದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 19,51,350. ಇದಲ್ಲದೆ ಕೃತ್ಯಕ್ಕೆ ಬಳಸಿದ್ದ ಸಮವಸ್ತ್ರ, ನಕಲಿ ನಂಬರ್ ಪ್ಲೇಟ್ಗಳು, ಪೊಲೀಸ್ ಪದವಳ್ಳ ಸ್ಟಿಕ್ಕರ್, ನಕಲಿ ಬಂದೂಕು ಮತ್ತು ಬುಲೆರೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru south Police arrested extortioners who extort people by using police uniform. police seize 19.51 lakh worth money and gold from the accused.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ