ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಧರಿಂದಲೇ ಯೋಧನ ಕೊಲೆ, ಇಬ್ಬರ ಬಂಧನ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 30: ವಿವೇಕನಗರದ ASC centre ಮಿಲಿಟರಿ ಕ್ಯಾಂಪಸ್‌ನಲ್ಲಿ ಮಾರ್ಚ್‌ 23ರಂದು ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯೋಧನ ಶವ ಪ್ರಕರಣವನ್ನು ಪೊಲೀಸರು ಭೇಧಿಸಿದ್ದು ಕೊಲೆ ಮಾಡಿದವರೂ ಯೋಧರೇ ಆಗಿದ್ದಾರೆ ಎಂದು ವಿವೇಕನಗರ ಪೊಲೀಸರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಆರು ವರ್ಷಗಳಿಂದಲೂ ಸೇನೆಯಲ್ಲಿ ಕಾರ್ಯ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಪಂಕಜ್‌ ಎಂಬಾತನನ್ನು ಆತನ ಸಹೋದ್ಯೋಗಿಗಳಾದ ಆಂಧ್ರ ಮೂಲಕ ಮುರಳಿ ಕೃಷ್ಣ ಹಾಗೂ ಧನಂಜಯ ಎಂಬುವರು ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು. ಈಗ ಆರೋಪಿಗಳು ಪೊಲೀಸರ ಬಂಧನದಲ್ಲಿದ್ದಾರೆ.

ಇಳಕಲ್ ವಕೀಲೆಯಿಂದ ಸಹೋದ್ಯೋಗಿ ಕೊಲೆಗೆ ಸುಫಾರಿ, 6 ಜನರ ಬಂಧನ ಇಳಕಲ್ ವಕೀಲೆಯಿಂದ ಸಹೋದ್ಯೋಗಿ ಕೊಲೆಗೆ ಸುಫಾರಿ, 6 ಜನರ ಬಂಧನ

ಕೊಲೆಯಾದ ಯೋಧ ಪಂಕಜ್‌ ಅವರ ಐಡಿ ಕಾರ್ಡ್‌ ಕದ್ದಿದ್ದಾನೆಂದು ಮುರಳಿ ಕೃಷ್ಣ ಎಂಬುವನ ಮೇಲೆ ಮಿಲಿಟರಿ ಕ್ಯಾಂಪ್‌ನಲ್ಲಿ ಪಂಕಜ್‌ ದೂರು ನೀಡಿದ್ದರು, ಆಂತರಿಕ ತನಿಖೆ ನಡೆದು ಮುರಳಿ ಕೃಷ್ಣಗೆ ಶಿಕ್ಷೆಗೂ ಗುರಿಯಾಗಿದ್ದರು. ಇದರಿಂದ ಕುಪಿತಗೊಂಡಿದ್ದ ಮುರಳಿ ಕೃಷ್ಣ ತನ್ನ ಸಹಚರ ಧನಂಜಯ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Police arrest murder accused two soldiers of ASC center Viveknagar

ಪಂಕಜ್‌ನ ರೂಮಿಗೆ ತೆರಳಿ ಅವನ ಕತ್ತಿಗೆ ಹಗ್ಗ ಬಿಗಿದು ನಂತರ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಆ ನಂತರ ಆ ಶವವನ್ನು ನೀರಿನ ಟ್ಯಾಂಕರ್‌ ಒಂದರಲ್ಲಿ ಮಿಲಿಟರಿ ಕ್ಯಾಂಪಸ್‌ನ ಮೂಲೆಯೊಂದಕ್ಕೆ ಕೊಂಡೊಯ್ದು ಅಲ್ಲಿ ದೇಹವನ್ನು ಸುಟ್ಟಿದ್ದಾರೆ. ದೇಹ ಪೂರ್ಣವಾಗಿ ಸುಡದ ಕಾರಣ ಮತ್ತೆ ಅದನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಿ ಹೂಳಲು ಪ್ರಯತ್ನಿಸಿದ್ದಾರೆ ಆದರೆ ಹೂಳಲು ಆಗದೆ ಕಸದ ತೊಟ್ಟಿಗೆ ಬಿಸಾಡಿ ಬಂದಿದ್ದರು.

ಮಿಲಿಟರಿ ಅಧಿಕಾರಿಗಳು ಪ್ರಕರಣದ ಬಗ್ಗೆ ವಿವೇಕನಗರ ಪೊಲೀಸ್ ಠಾಣೆಗೆ ದೂರು ನಿಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಏಳೆ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
Viveknagar Police arrested two soldiers Murali Krishna and Dhananjay from Viveknagar ASC centre military campus. they were accused of murdering a fellow soldier Pankaj. Both were murdered Pankaj on March 22nd night and burnt the body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X