ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಗಾಂಜಾ ಮಾರುತ್ತಿದ್ದವನ ಬಂಧಿಸಿದ ಬೆಂಗಳೂರು ಪೊಲೀಸರು

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ನವೆಂಬರ್ ೦7 : ನಗರದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ನವೆಂಬರ್ 6ರ ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಮಾರಾಟ ಜಾಲ ನಿರ್ವಹಿಸುತ್ತಿದ್ದ ವಿಕ್ರಮನ್ ನಾಯರ್ ಅಲಿಯಾಸ್ ವಿಜಯನ್ (28) ಎಂಬುವನನ್ನು ಬಿಂಧಿಸಿದ್ದಾರೆ.

    ಇಂದಿರಾನಗರ ಠಾಣಾ ಸರಿಹದ್ದಿಗೆ ಸೇರುವ ಎಚ್.ಎ.ಎಲ್ ೨ನೇ ಹಂತ, ಡಬಲ್ ರಸ್ತೆಯ, ೧೧ನೇ ಮುಖ್ಯ ರಸ್ತೆಯಲ್ಲಿರುವ ಯಮಹಾ ಥಾಮ್ಸನ್ ಮ್ಯೂಸಿಕ್ ವರ್ಲ್ಡ್ ನ ಮುಂಭಾಗ ಗಾಂಜಾ ದಂದೆಯಲ್ಲಿ ತೊಡಗಿದ್ದಾಗ ಪೊಲೀಸರು ಬಂಧಿಸಿದ್ದಾರೆ.

    Police Arrests Marijuvana Peddler in Bangalore

    ಬಂಧಿತನಿಂದ 1 ಕೆ.ಜಿ ಗಾಂಜಾ, ಮೊಬೈಲ್ ಫೋನ್, ನಗದು ಹಣ, ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ 90000 ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

    ಮುಂಬೈ ಮೂಲಕ ವಿಜಯನ್ ಬೆಂಗಳೂರಿನ ಪರಶುರಾಮ ಗಾರ್ಡನ್ಸ್, ಅಲಸೂರಿನಲ್ಲಿ ವಾಸವಿದ್ದಕೊಂಡು ಗಾಂಜಾ ದಂಧೆ ನಡೆಸುತ್ತಿದ್ದ.

    ಆರೋಪಿಯು ವ್ಯವಸ್ಥಿತ ರೀತಿಯಲ್ಲಿ ಗಾಂಜಾ ಖರೀದಿ ಮಾಡಿಕೊಂಡು ಬಂದು ಅದಕ್ಕೆ ಮತ್ತಷ್ಟು ಅಮಲು ಪದಾರ್ಥಗಳನ್ನು ಬೆರೆಸಿ ತನ್ನ ಪರಿಚಿತರಿಗೆ ಮಾರಾಟ ಮಾಡುತ್ತಿದ್ದ. ಮಾರಾಟದ ಪ್ರಕ್ರಿಯೆಗೆ ಈತ ಮತ್ತೊಬ್ಬ ಸಹಚರನನ್ನು ಬಳಸಿಕೊಳ್ಳುತ್ತಿದ್ದ ಆದರೆ ಪೊಲೀಸರ ದಾಳಿಯ ವೇಳೆ ಆತ ತಪ್ಪಿಸಿಕೊಂಡಿದ್ದು ಆತನಿಗಾಗಿ ಇಂದಿರಾ ನಗರ ಪೊಲೀಸರು ಬಲೆ ಬೀಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Bangalore CCB Police Arrested Marijuvana Seller Vikram Nayar alias Vijayan near Indira nagar Double Road. Police seized 1 kg of Marijuvana witch worth of 90000. A fellow dealer of Marijuvana is Escaped.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more