ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೇಬಲ್‌ ಕಾರ್‌ ಇನ್ನೂ ತಡ: ಅನುಮೋದನೆ ಕೊಡ್ತಿಲ್ಲ ಬಿಬಿಎಂಪಿ

By Nayana
|
Google Oneindia Kannada News

ಬೆಂಗಳೂರು, ಜು.13: ಬೆಂಗಳೂರಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ, ರಸ್ತೆ ಗುಂಡಿಗಳಿಂದ ಜನರು ಬೇಸತ್ತಿದ್ದಾರೆ. ಇದೆಲ್ಲಕ್ಕೂ ಬ್ರೇಕ್‌ ಹಾಕಲು ಪಾಡ್‌ ಟ್ಯಾಕ್ಸಿ(ಕೇಬಲ್ ಕಾರ್) ಯೋಜನೆ ಜಾರಿಗೆ ಬಿಬಿಎಂಪಿ ಮುಂದಾಗಿತ್ತು.

ಆದರೆ ಯಾಕೋ ಇದರ ಬಗ್ಗೆ ಆಕ್ತಿಯನ್ನು ಬಿಬಿಎಂಪಿ ಕಳೆದುಕೊಂಡಂತಿದೆ. ಪಾಡ್‌ ಟ್ಯಾಕ್ಸಿ ಯೋಜನೆಯನ್ನು ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತದೆ. ಜಂಟಿಯಾಗಿ ಗುತ್ತಿಗೆ ಪಡೆದಿರುವ ಸ್ಮಾರ್ಟ್‌ ಪರ್ಸನಲ್‌ ರಾಪಿಡ್‌ ಟ್ರಾನ್ಸಿಸ್ಟ್‌ ಸಿಸ್ಟಂ ಪ್ರೈ.ಲಿ. ಅಲ್ಟಾ ಪಿಆರ್‌ಟಿ ಲಿ, ಎಂಬೆಸ್ಸಿ ಪ್ರಾಪರ್ಟಿ ಡೆವಲಪ್‌ಮೆಂಟ್ಸ್ ಪ್ರೈ.ಲಿ. ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲು ಸಿದ್ಧತೆ ನಡೆಸಲಾಗಿದೆ.

ಬೆಂಗಳೂರು: ಪಾಡ್‌ ಟ್ಯಾಕ್ಸಿ ಯೋಜನೆಗೆ ನಗರ ತಜ್ಞರ ವಿರೋಧ ಬೆಂಗಳೂರು: ಪಾಡ್‌ ಟ್ಯಾಕ್ಸಿ ಯೋಜನೆಗೆ ನಗರ ತಜ್ಞರ ವಿರೋಧ

ಮಾಜಿ ಸಚಿವ ಕೆ.ಜೆ.ಜಾರ್ಜ್ ಪಾಲುದಾರಿಕೆಯ ಎಂಬೆಸ್ಸಿ ಸಂಸ್ಥೆಗೆ ಗುತ್ತಿಗೆ ನೀಡುತ್ತಿರುವ ಬಗ್ಗೆ ವಿವಾದ ಉಂಟಾಗಿತ್ತು. ಆದರೆ ಇದಕ್ಕೆ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಎಂಬೆಸ್ಸಿ ಸಂಸ್ಥೆಗೆ ಗುತ್ತಿಗೆ ನೀಡುವ ವಿವಾದ ಮತ್ತೆ ಆರಂಭವಾಗಿರುವುದರಿಂದ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಪಡೆಯಲು ಹಿಂದೇಟು ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

POD taxi project yet to get BBMP council approval

ಆರಂಭದಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯ ಟ್ರಿನಿಟಿ ವೃತ್ತದಿಂದ ವೈಟ್‌ಫೀಲ್ಡ್‌ವರೆಗೆ ಹಾಗ ಹೊರವರ್ತುಲ ರಸ್ತೆಯಿಂದ ಹೋಮ್‌ ಫಾರ್ಮ್ ಜಂಕ್ಷನ್‌ವರೆಗೆ ಒಟ್ಟು 30 ಕಿ.ಮೀ ಉದ್ದದ ಪಾಡ್‌ ಟ್ಯಾಕ್ಸಿ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಮೆಟ್ರೋ ಫೀಡರ್‌ ಸೇವೆಯನ್ನಾಗಿ ಪಾಡ್‌ ಟ್ಯಾಕ್ಸಿ ಜಾರಿಗೆ ತರಲಾಗುತ್ತದೆ.

English summary
Most awaited cable car service, POD taxi project yet to be get approval from council of BBMP. A 30 km first phase cable car will connect Trinity circle and White Field, according to detailed project report (DPR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X