ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ ನಲ್ಲಿ ಔಷಧಿ ಖರೀದಿಸಿ 'ಪ್ಲಸ್' ಮನೆಗೆ ತರಿಸಿಕೊಳ್ಳಿ!

By Mahesh
|
Google Oneindia Kannada News

‌ಬೆಂಗಳೂರು, ಡಿ. 27: ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶಗಳಲ್ಲಿ ಆರೋಗ್ಯಸೇವೆಯ ವಹಿವಾಟು ವಿಸ್ತರಣೆ ಬಳಿಕ ಔಷಧ ವಸ್ತುಗಳನ್ನು ವಿತರಿಸುವ 'ಪ್ಲಸ್‌' ಸ್ಟಾರ್ಟ್‌ಅಪ್‌ ಕಂಪೆನಿ ಇದೀಗ ಬೆಂಗಳೂರು ಮಾರುಕಟ್ಟೆಗೂ ಕಾಲಿಟ್ಟಿದೆ.

ಆನ್‌ಲೈನ್‌ ಮೂಲಕ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ವಿತರಿಸಿ, ರಾಜ್ಯದಲ್ಲಿಯೂ ವಿಶ್ವಾಸಾರ್ಹತೆ ಸಾಧಿಸುವ ಗುರಿಯನ್ನು ಇಟ್ಟುಕೊಂಡಿದೆ. [ಆನ್‌ಲೈನ್ ಮೆಡಿಕಲ್ ಸ್ಟೋರ್ಸ್ GVA: ಮನೆಬಾಗಿಲಿಗೆ ಔಷಧ]

ವೈದ್ಯರು ಸೂಚಿಸಿದ ಔಷಧಿಯ ಚೀಟಿಯನ್ನು ಕಂಪೆನಿಯ ಜಾಲತಾಣ ಅಥವಾ ಆಂಡ್ರಾಯ್ಡ್ ಆಪ್ಲಿಕೇಷನ್ ನಲ್ಲಿ ಅಪ್‌ಲೋಡ್‌ ಮಾಡಿ (png,jpg,gif ಮಾದರಿ ಮಾತ್ರ) ಆರ್ಡರ್‌ ಮಾಡಬಹುದು. ಆರ್ಡರ್‌ ಕನ್ಫರ್‌ಮೇಷನ್‌ ಎಸ್‌ಎಂಎಸ್‌ ಬಂದ 60 ನಿಮಿಷಗಳ ಒಳಗಾಗಿ ನೀಡಿದ ವಿಳಾಸಕ್ಕೆ ತಲುಪುತ್ತದೆ.

ದೆಹಲಿ ಮೂಲದ 'ಪ್ಲಸ್‌' ಸ್ಟಾರ್ಟ್‌ಅಪ್‌ ಅನ್ನು 2015ರಲ್ಲಿ ಅತೀತ್‌ ಜೈನ್‌, ಮಧುಲಿಕಾ ಪಾಂಡೆ ಮತ್ತು ತರುಣ್‌ ಲವಾಡಿ ಅವರುಗಳು ಸ್ಥಾಪಿಸಿದರು. [ಮನೆಯಲ್ಲೇ ಎಚ್ಐವಿ ಸೋಂಕು ಪರೀಕ್ಷೆ ಮಾಡಿಕೊಳ್ಳಿ]

ಔಷಧಿ ವಸ್ತುಗಳನ್ನು ಹೊರತುಪಡಿಸಿ, ದಿನಸಿ ಮತ್ತು ಆಹಾರ ಉತ್ಪನ್ನಗಳನ್ನೂ ಒಳಗೊಂಡು ಬಹುತೇಕ ಎಲ್ಲಾ ವಸ್ತುಗಳೂ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ಗಮನಿಸಿ ಪ್ಲಸ್‌ ತಂಡವು, ಔಷಧಿ ತಯಾರಿಕೆ ಮತ್ತು ವಿತರಣೆಗೆ ಲೈಸೆನ್ಸ್‌ ಹೊಂದಿರುವರು ಮತ್ತು ವಿತರಣೆಯಲ್ಲಿ ತರಬೇತಿ ಹೊಂದಿರುವ ಕಾರ್ಯನಿರ್ವಾಹಕರೊಂದಿಗೆ ನಿಗದಿತ ಸಮಯಕ್ಕೆ ಸರಿಯಾಗಿ, ಅತ್ಯಂತ ಕಾಳಜಿಯಿಂದ ಮನೆಬಾಗಿಲಿಗೆ ಔಷಧಿ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ.

ಕರೆ ಮಾಡುವ ಮೂಲಕ, ವಾಟ್ಸ್‌ ಅಪ್ ಅಥವಾ ಪ್ಲಸ್‌ ಜಾಲತಾಣ ಮತ್ತು ಆಪ್‌ನಲ್ಲಿಯೂ ಔಷಧಿ ವಸ್ತುಗಳಿಗೆ ಆರ್ಡರ್‌ ಮಾಡಬಹುದು. ಸಂಸ್ಥೆಯ ವೆಬ್ ತಾಣದ ಲಿಂಕ್. ಗೂಗಲ್ ಆಂಡ್ರಾಯ್ಡ್ ಅಪ್ಲಿಕೇಷನ್ ಲಿಂಕ್

ಪ್ಲಸ್ ಸಿಇಒ ಅತೀತ್‌ ಜೈನ್‌ ಮಾತನಾಡಿ

ಪ್ಲಸ್ ಸಿಇಒ ಅತೀತ್‌ ಜೈನ್‌ ಮಾತನಾಡಿ

ಔಷಧ ವಸ್ತುಗಳ ಚಿಲ್ಲರೆ ಮಾರಾಟ ಭಾರತದಲ್ಲಿ ಅಸಂಘಟಿತವಾಗಿದೆ. ತಕ್ಷಣಕ್ಕೆ ಎದುರಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಲು ಯಾರೂ ಸಹ ಸಜ್ಜಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ರೋಗಿಗಳಿಗೆ ತಕ್ಷಣಕ್ಕೆ ಅಗತ್ಯವಾದ ಔಷಧಿಗಳನ್ನು ಪೂರೈಸಲು ತಂತ್ರಜ್ಞಾನದ ಹಸ್ತಕ್ಷೇಪದಿಂದ ಸಾಧ್ಯವಾಗಿದೆ. ಆನ್‌ಲೈನ್‌ ಮೂಲಕ ಅತಿ ಸುಲಭವಾಗಿ ಔಷಧವಸ್ತುಗಳನ್ನು ತರಿಸಿಕೊಳ್ಳಬಹುದು ಎಂದರು.

ವಹಿವಾಟು ವಿಸ್ತರಿಸುವ ಯೋಜನೆ

ವಹಿವಾಟು ವಿಸ್ತರಿಸುವ ಯೋಜನೆ

ವಹಿವಾಟು ವಿಸ್ತರಿಸುವ ಭಾಗವಾಗಿ ಬೆಂಗಳೂರಿನಲ್ಲಿ ಸೇವೆಗೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ 1 ಮಿಲಿಯನ್‌ ಅಮೆರಿಕನ್‌ ಡಾಲರ್‌ ಮೌಲ್ಯದ ಸ್ವಾಧೀನ ಪ್ರಕ್ರಿಯೆಯೂ ಇದರಲ್ಲಿ ಸೇರಿಕೊಂಡಿದೆ. ಸದ್ಯ 11,000 ಚಂದಾದಾರರು ಪ್ಲಸ್‌ ಅಪ್ಲಿಕೇಷನ್ ಬಳಸುತ್ತಿದ್ದಾರೆ. ಬೆಂಗಳೂರಿಗೂ ವಹಿವಾಟು ವಿಸ್ತರಿಸಿರುವುದರಿಂದ ಈ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಐದಕ್ಕೂ ಹೆಚ್ಚು ನಗರಗಳಲ್ಲಿ ಸೇವೆ

ಐದಕ್ಕೂ ಹೆಚ್ಚು ನಗರಗಳಲ್ಲಿ ಸೇವೆ

ಪ್ಲಸ್‌ ಕಂಪೆನಿ ಅಭಿವೃದ್ಧಿ ಸಾಧಿಸಲು ಉತ್ತಮ ಯೋಜನೆಗಳನ್ನು ಹೊಂದಿದೆ. ಈ ವರ್ಷದ ಅಂತ್ಯದೊಳಗೆ ಐದಕ್ಕೂ ಹೆಚ್ಚು ನಗರಗಳಲ್ಲಿ ಸೇವೆ ನೀಡಲು ನಿರ್ಧರಿಸಿದ್ದು, ಜನಪ್ರಿಯ ಔಷಧಿವಸ್ತುಗಳ ಬ್ರ್ಯಾಂಡ್‌ ಮತ್ತು ಔಷಧಿ ಮಾರಾಟಗಾರರ ಮೂಲಕ ವೈದ್ಯಕೀಯ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ವಿಭಾಗವನ್ನೂ ಒಳಗೊಳ್ಳಲಿದೆ.

ಮನೆಬಾಗಿಲಿಗೆ ಸಕಾಲಕ್ಕೆ ಔಷಧಿ : ಪ್ಲಸ್‌

ಮನೆಬಾಗಿಲಿಗೆ ಸಕಾಲಕ್ಕೆ ಔಷಧಿ : ಪ್ಲಸ್‌

ಮನೆಬಾಗಿಲಿಗೆ ಸಕಾಲಕ್ಕೆ ಔಷಧಿ ವಸ್ತುಗಳನ್ನು ವಿತರಿಸುವ ಸ್ಟಾರ್ಟ್‌ಅಪ್‌ ಇದಾಗಿದೆ. ಬೇಬಿ ಕೇರ್‌, ಪೆಟ್‌ಕೇರ್‌, ಪರ್ಸನಲ್‌ ವೆಲ್‌ನೆಸ್‌ ಮತ್ತು ಡೈಲಿ ಎಸೆನ್ಶಿಯಲ್ಸ್‌ ಇದು ವಿತರಿಸುವ ಪ್ರಾಥಮಿಕ ವಸ್ತುಗಳಾಗಿವೆ.

ಆರೋಗ್ಯ ವಸ್ತುಗಳ ಮಾರುಕಟ್ಟೆ ಸಿಎಜಿಆರ್‌ ಶೇ 15ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದ್ದು, 2017ರ ಹೊತ್ತಿಗೆ 158.2 ಬಿಲಿಯನ್ ಅಮೆರಿಕನ್‌ ಡಾಲರ್‌ಗಳಿಗೆ ತಲುಪಲಿದೆ.

English summary
Pluss home-delivery of medicines within 60 minutes to enter Bengaluru. Pluss was founded by Atit Jain, Madhulika Pandey, and Tarun Lawadia. Jain and Pandey. Pluss is not a pharmacy but partnered with many licensed pharmacies and just deliver medicines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X